ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ಅಪ್ರತಿಮ ಕ್ರೀಡಾಪಟುಗಳ ನಡುವಿನ ಬಿರುಸಿನ ಬಾಕ್ಸಿಂಗ್ ಪಂದ್ಯಗಳು ಕ್ರೀಡಾಭಿಮಾನಿಗಳಲ್ಲಿ ರೋಚಕತೆ ಮೂಡಿಸಿದವು. ಭಾರತದ ಮೂಲೆ ಮೂಲೆಯ ಶ್ರೇಷ್ಠ ಬಾಕ್ಸರ್‌ಗಳು (Boxers) ನಗರದಲ್ಲಿ (Bengaluru News) ಮುಖಾಮುಖಿಯಾಗಿದ್ದು, ಕ್ರೀಡಾ ಉತ್ಸಾಹಿಗಳಲ್ಲಿ ಸಂಚಲನ ಮೂಡಿಸಿದರು. ಗ್ರಾಸ್‌ರೂಟ್ ಬಾಕ್ಸಿಂಗ್ (Grassroot Boxing) ಈ ಜಟ್ಟಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಅವರ ಬಾಕ್ಸಿಂಗ್ ದಾಖಲೆಗಳನ್ನು ಹೆಚ್ಚಿಸಲು ʼಫಿನಿಕ್ಸ್ ಫೈಟ್ ನೈಟ್ʼ ವೇದಿಕೆ ರೂಪಿಸಿತ್ತು.
ಈ ವೇದಿಕೆಯು ಕ್ರೀಡಾಪಟುಗಳನ್ನು ವೃತ್ತಿಪರ ಪಂದ್ಯಗಳಿಗೆ ಸಜ್ಜುಗೊಳಿಸುವುದರ ಜತೆಗೆ ಬಾಕ್ಸಿಂಗ್ ಪಂದ್ಯವನ್ನು ಭಾರತದಲ್ಲಿ ಪ್ರೋತ್ಸಾಹಿಸುವ ಆಶಯವನ್ನು ಹೊಂದಿದೆ.
ಸ್ಪರ್ಧೆಯ ವಿಜೇತರ ವಿವರ
ಒಟ್ಟು 36 ಬಾಕ್ಸರ್‌ಗಳು ಈ ಅತ್ಯುನ್ನತ ಸ್ಪರ್ಧೆಯಲ್ಲಿ ಕಣಕ್ಕೆ ಇಳಿದಿದ್ದು, ಸ್ಪರ್ಧಿಗಳ ಪೈಕಿ 69.853 ಕೆ.ಜಿ ವಿಭಾಗದಲ್ಲಿ ರೋಹಿತ್ ಚೌಧರಿ, 69.853 ಕೆ.ಜಿ ವಿಭಾಗದಲ್ಲಿ ಅಮನ್ ಬಹದ್ದೂರ್, 63.5 ಕೆಜಿ ವಿಭಾಗದಲ್ಲಿ ವನ್ಲಾಲ್ವ್ಮ್ಪುನಿಯಾ, 58.97 ಕೆ.ಜಿ ವಿಭಾಗದಲ್ಲಿ ಜಿತೇಂದ್ರ ಯಾದವ್ ಗೆದ್ದರು.
57.153 ಕೆ.ಜಿ ವಿಭಾಗದಲ್ಲಿ ಮಣಿಕಂದನ್ ವಿ, 57.153 ಕೆ.ಜಿ ವಿಭಾಗದಲ್ಲಿ ಅಸದ್ ಆಸಿಫ್, 55.22 ಕೆ.ಜಿ ವಿಭಾಗದಲ್ಲಿ ಚಾಂದಿನಿ ಮೆಹ್ರಾ, 53.523 ಕೆ.ಜಿ ವಿಭಾಗದಲ್ಲಿ ಲಾಲ್ದಿಂಸಂಗ, 52.16 ಕೆ.ಜಿ ವಿಭಾಗದಲ್ಲಿ ಮೊಹಮ್ಮದ್ ಶಮೀಮ್, 52.163 ಕೆ.ಜಿ ವಿಭಾಗದಲ್ಲಿ ಶರ್ವನ್ ರಂಜೀತ್ ದಾಸ್ ಅವರು ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡರು.
ಈ ಸುದ್ದಿಯನ್ನೂ ಓದಿ | Beauty Parlor Training: ನಿರುದ್ಯೋಗಿ ಯುವತಿಯರಿಗೆ ಗುಡ್ ನ್ಯೂಸ್; ಬ್ಯೂಟಿ ಪಾರ್ಲರ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ನಮ್ಮ ಗುರಿ
ಈ ಸ್ಪರ್ಧಾ ಕಾರ್ಯಕ್ರಮದ ಕುರಿತು ಗ್ರಾಸ್‌ರೂಟ್ ವ್ಯವಸ್ಥಾಪಕ ಮುಜ್ತಬ ಕಮಲ್ ಮಾತನಾಡಿ, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ನಮ್ಮ ಗುರಿ. ಅದಕ್ಕಾಗಿ ನಾವು ವೇದಿಕೆಯನ್ನು ಒದಗಿಸಲು ಸದಾ ಸಿದ್ದ ಎಂದರು. ಗ್ರಾಸ್‌ರೂಟ್ ಬಾಕ್ಸಿಂಗ್, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದರೆಡೆಗೆ ಗಮನಹರಿಸುತ್ತಿದೆ. ಇದು ಯುವ ಮತ್ತು ಹವ್ಯಾಸಿ ಬಾಕ್ಸರ್‌ಗಳ ಕೌಶಲ್ಯಗಳನ್ನು ಗೌರವಿಸಲು ರೂಪಿಸಲಾಗಿದೆ. ಅಗತ್ಯ ಸಂಪನ್ಮೂಲಗಳು, ತರಬೇತಿ ಮತ್ತು ವೃತ್ತಿ-ನಿರ್ಮಾಣ ಅವಕಾಶಗಳನ್ನು ಒದಗಿಸುವ ಮೂಲಕ, ತಳಮಟ್ಟದ ಉಪಕ್ರಮಗಳು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಬಹುದಾದ ನುರಿತ ಕ್ರೀಡಾಪಟುಗಳ ತಂಡವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ಸ್ಪರ್ಧೆಯಲ್ಲಿನ ಗೆಲುವು ವಿಜೇತರಿಗೆ ಅಂತಾರಾಷ್ಟ್ರೀಯ ಮನ್ನಣೆಗೆ ಅವಕಾಶದ ಬಾಗಿಲು ತೆರೆಯುವಂತೆ ಮಾಡುತ್ತದೆ. ಈ ಮಾನ್ಯತೆ ಅವರ ಬಾಕ್ಸಿಂಗ್ ದಾಖಲೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಭವಿಷ್ಯದ ಅವಕಾಶಗಳು ಮತ್ತು ಜಾಗತಿಕ ಬಾಕ್ಸಿಂಗ್ ಸಮುದಾಯದಲ್ಲಿ ಗುರುತಿಸುವಿಕೆಗಾಗಿ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಭಾರತೀಯ ವೃತ್ತಿಪರ ಬಾಕ್ಸಿಂಗ್ ಅನ್ನು ವಿಶ್ವ ವೇದಿಕೆಯೆಡೆಗೆ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ. ಭಾರತ ಮತ್ತು ಏಷ್ಯಾದಲ್ಲಿ ಕ್ರೀಡಾಪಟುಗಳ ನಿರ್ವಹಣೆ, ಪ್ರಚಾರಗಳು ಮತ್ತು ಒಟ್ಟಾರೆ ವೃತ್ತಿಪರ ಬಾಕ್ಸಿಂಗ್ ನಿರ್ವಹಣೆಯಲ್ಲಿ ಟ್ರಯಲ್ಬ್ಲೇಜರ್ ಆಗಿರುವ ಗ್ರಾಸ್‌ರೂಟ್ ಬಾಕ್ಸಿಂಗ್, ದೇಶದ ಹಲವು ಅಸಾಧಾರಣ ಬಾಕ್ಸರ್‌ಗಳ ವೃತ್ತಿಜೀವನವನ್ನು ಯಶಸ್ವಿಯಾಗಿ ರೂಪಿಸಿದೆ. ಶಬರಿ ಜೆ, ಆಶಾ ರೋಕಾ ಮತ್ತು ಲಾಲ್ರಿನ್‌ಸಂಗ ತ್ಲೌ ಸೇರಿದಂತೆ ಇತರ ಅನೇಕ ಕ್ರೀಡಾಪಟುಗಳನ್ನು ತರಬೇತಿಗೊಳಿಸುವ ಮೂಲಕ ಶ್ರೇಷ್ಠ ಬಾಕ್ಸರ್‌ಗಳನ್ನಾಗಿ ಸಿದ್ಧಪಡಿಸಿದೆ.
ಈ ಸುದ್ದಿಯನ್ನೂ ಓದಿ | Bengaluru Power Cut : ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಇಲ್ಲಿಯವರೆಗೆ, ಗ್ರಾಸ್‌ರೂಟ್ ಬಾಕ್ಸಿಂಗ್ ಭಾರತ, ಯುಎಇ, ಥೈಲ್ಯಾಂಡ್ ಮತ್ತು ಉಗಾಂಡಾದಾದ್ಯಂತ 41 ವೃತ್ತಿಪರ ಬಾಕ್ಸಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ವೃತ್ತಿಪರ ಬಾಕ್ಸರ್‌ಗಳ ಅಪಾರ ಸಾಮರ್ಥ್ಯದ ಬಗ್ಗೆ ದೃಢವಾದ ನಂಬಿಕೆಯೊಂದಿಗೆ, ಗ್ರಾಸ್ರೂಟ್ ಬಾಕ್ಸಿಂಗ್ ಅಥ್ಲೀಟ್ ನಿರ್ವಹಣೆಯಲ್ಲಿ ಮ್ಯಾಚ್ರೂಮ್, ಟಾಪ್ರಾಂಕ್, ಗೋಲ್ಡನ್ ಬಾಯ್ ಮತ್ತು ಕ್ರೀಡೆಯಲ್ಲಿನ ಇತರ ಪ್ರಮುಖ ಘಟಕಗಳನ್ನು ಒಳಗೊಂಡಂತೆ ವಿಶ್ವಾದ್ಯಂತ ಪ್ರಸಿದ್ಧ ಬಾಕ್ಸಿಂಗ್ ಪ್ರಚಾರ ಸಹಯೋಗವನ್ನು ಪ್ರಾರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.