ಬೆಂಗಳೂರು: ಒಂದು ಮೆಸೇಜ್ನಿಂದ ಯುವಕನೊಬ್ಬ ತನ್ನ ಕೆಲಸವನ್ನೇ ಕಳೆದುಕೊಂಡ (termination of employment) ಘಟನೆ ಬೆಂಗಳೂರಿನಲ್ಲಿ (Bengaluru News) ನಡೆದಿದೆ. ಈತ ತನ್ನ ಸಹೋದ್ಯೋಗಿ (colleague) ಮಹಿಳೆಯ ಬಟ್ಟೆ ಧರಿಸುವಿಕೆಯ ಬಗ್ಗೆ ಕಮೆಂಟ್ ಮಾಡಿದ್ದು, ಈ ಕುರಿತು ದೂರು ದಾಖಲಿಸಲಾಗಿತ್ತು.
ಮಹಿಳೆಗೆ ಆಸಿಡ್ ಹಾಕುತ್ತೀನಿ ಎಂದ ಯುವಕ ನಿಖಿತ್ ಶೆಟ್ಟಿ ಎಂಬಾತನ ವಿರುದ್ಧ ಆಕೆಯ ಪತಿ ಪೊಲೀಸರಿಗೆ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ದೂರು ನೀಡಿದ್ದರು. ಯುವಕ ನಿಖಿತ್ ಇಟಿಯೋಸ್ ಡಿಜಿಟಲ್ ಸರ್ವಿಸ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಸಹೋದ್ಯೋಗಿ ಮಹಿಳೆಯ ಬಗ್ಗೆ ಆಕೆಯ ಪತಿ ಶಹಬಾಝ್ ಅನ್ಸರ್ಗೆ ಮೆಸೇಜ್ ಮಾಡಿದ್ದ. ನಿನ್ನ ಪತ್ನಿಗೆ ನೀಟಾಗಿ ಬಟ್ಟೆ ಹಾಕೋದಕ್ಕೆ ಹೇಳು, ಇಲ್ಲದಿದ್ದಲ್ಲಿ ಆಸಿಡ್ ಹಾಕ್ತಿನಿ ಎಂದು ಮೆಸೇಜ್ ಮಾಡಿದ್ದ.
ಈ ಯುವಕ ನನ್ನ ಹೆಂಡತಿಯ ಮುಖದ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ ಎಂದು ಶಹಬಾಜ್ ಅನ್ಸಾರ್ ಎಕ್ಸ್ನಲ್ಲಿ ಬರೆದುಕೊಂಡಿದ್ದರು. ಶಹಬಾಜ್ ಅನ್ಸಾರ್ ತಮ್ಮ ಟ್ವೀಟ್ ಅನ್ನು ಡಿಜಿಪಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಇಟಿಯೋಸ್ ಡಿಜಿಟಲ್ ಸರ್ವಿಸ್ಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಕಂಪನಿ ಅಧಿಕಾರಿಗಳು ನಿಖಿತ್ ಶೆಟ್ಟಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ನಿಖಿತ್ ಅವರನ್ನು ಐದು ವರ್ಷಗಳ ಕಾಲ ಕಂಪನಿ ಟರ್ಮಿನೇಷನ್ ಮಾಡಿದೆ. ಹಾಗೂ ಆತನ ವಿರುದ್ಧ ದೂರು ಕೂಡ ದಾಖಲು ಮಾಡುತ್ತೇವೆ ಎಂದು ಕಂಪನಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ವೈರಲ್ ಆಗುತ್ತಿದ್ದು, ʼನಿನಗೆ ಇದು ಬೇಕಿತ್ತಾ. ಸುಮ್ಮನೆ ಕೂತು ಕೆಲಸ ಮಾಡಿ ಮನೆಗೆ ಹೋಗುವುದನ್ನು ಬಿಟ್ಟು ಈ ರೀತಿ ಮಾಡಿಕೊಂಡಿದ್ದೀಯಲ್ಲʼ ಎಂದು ನೆಟ್ಟಿಗರು ಯುವಕನಿಗೆ ಛೀಮಾರಿ ಹಾಕಿದ್ದಾರೆ.
ಇದನ್ನೂ ಓದಿ: Renuka swamy Murder Case: ರೇಣುಕಾಸ್ವಾಮಿ ಕೊಲೆ ಆರೋಪಿ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್; ದರ್ಶನ್ಗೆ ಬಳ್ಳಾರಿಯೇ ಗತಿ