ಬೆಂಗಳೂರು: ಮಹಾನಗರದ ಮೂರು ಪ್ರಮುಖ ಕಾಲೇಜುಗಳಾದ ಬಿಎಂಎಸ್ ಕಾಲೇಜು, ಎಂಎಸ್ ರಾಮಯ್ಯ ಕಾಲೇಜು ಮತ್ತು ಬಿಐಟಿ ಕಾಲೇಜುಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ (Bomb Threat) ಬಂದಿದೆ. ಈ ಸಂದೇಶದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ .
ಬಾಂಬ್ ನಿಷ್ಕ್ರಿಯ ದಳ ಮತ್ತು ಇತರ ಸಂಬಂಧಿತ ತಂಡಗಳು ಪ್ರಸ್ತುತ ಬೆದರಿಕೆಯನ್ನು ಪರಿಶೀಲಿಸುತ್ತಿವೆ ಎಂದು ಬೆಂಗಳೂರು ದಕ್ಷಿಣ ಡಿಸಿಪಿ ತಿಳಿಸಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆದರಿಕೆಯ ಮೂಲ ಪತ್ತೆ ಹಚ್ಚಲು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಬಳಿಕ ಕ್ಯಾಂಪಸ್ ಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಮಾತನಾಡಿ, ಬಿಐಟಿ, ಬಿಎಂಎಸ್ ಸಿಇ, ಎಂಎಸ್ ಆರ್ ಐಟಿಗೆ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಸಂಬಂಧಿತ ತಂಡಗಳು ಹೇಳಿಕೆಯನ್ನು ಪರಿಶೀಲಿಸುವ ಕೆಲಸದಲ್ಲಿ ತೊಡಗಿವೆ. ಹನುಮಂತನಗರ ಪೊಲೀಸ್ ಠಾಣೆ ಮತ್ತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂಲವನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.