ಬೆಂಗಳೂರು: ʼವರ್ಲ್ಡ್ ಪ್ರೀಮೆಚುರಿಟಿ ಡೇ 2024′ (World Prematurity Day 2024) ಹಿನ್ನೆಲೆಯಲ್ಲಿ ನಗರದ ವೈಟ್ಫೀಲ್ಡ್ನಲ್ಲಿರುವ (Bengaluru News) ಮೆಡಿಕವರ್ ಆಸ್ಪತ್ರೆಯಲ್ಲಿ ಅವಧಿಪೂರ್ವ ಜನಿಸಿದ ಶಿಶುಗಳ ಸಮಾಗಮ ನಡೆಯಿತು. ಅವಧಿಪೂರ್ವ ಜನಿಸಿದ ಶಿಶುಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಯೋಚಿತ ವೈದ್ಯಕೀಯ ಆರೈಕೆಯ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಗಳಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಅವಧಿಪೂರ್ವ ಮಕ್ಕಳು ಜನಿಸಿದ 50ಕ್ಕೂ ಹೆಚ್ಚು ಕುಟುಂಬಗಳು ಪಾಲ್ಗೊಂಡಿದ್ದವು. ಹಿರಿಯ ಮಕ್ಕಳ ತಜ್ಞರು ಮತ್ತು ನವಜಾತ ಶಿಶು ತಜ್ಞರುಗಳಾದ ಡಾ.ಆನಂದ್ ಪಾಟೀಲ್ ಮತ್ತು ಡಾ.ಸುಮಿತ್ರಾ ಅವರ ಮಾರ್ಗದರ್ಶನದಲ್ಲಿ ಈ ವೇಳೆ ಚರ್ಚೆಗಳು ನಡೆದವು. ನವಜಾತ ಶಿಶುಗಳ ಆರೈಕೆಯಲ್ಲಿನ ಪ್ರಗತಿ ಲಭ್ಯವಿರುವ ಆರೋಗ್ಯ ಸಂಪನ್ಮೂಲಗಳು ಮತ್ತು ಅವಧಿಪೂರ್ವ ಜನಿಸಿದ ಶಿಶುಗಳ ಜೀವನದಲ್ಲಿ ಸಿಗಬೇಕಾದ ಬೆಂಬಲದ ಮಹತ್ವ ಕುರಿತು ಮಾಹಿತಿ ತಿಳಿಸಿಕೊಡಲಾಯಿತು.
ಈ ಸುದ್ದಿಯನ್ನೂ ಓದಿ | Kasturirangan Report: ಪಶ್ಚಿಮ ಘಟ್ಟದ ಜನ ಇನ್ನು ಜಾನುವಾರುಗಳನ್ನು ಕಾಡಿಗೆ ಬಿಡುವಂತಿಲ್ಲ!
ಕಾರ್ಯಕ್ರಮದಲ್ಲಿ ಹಿರಿಯ ಮಕ್ಕಳ ತಜ್ಞ ಮತ್ತು ನವಜಾತ ಶಿಶುತಜ್ಞ ಡಾ.ಆನಂದ್ ಪಾಟೀಲ್ ಮಾತನಾಡಿ, ಮಕ್ಕಳು ಅವಧಿಪೂರ್ವ ಜನಿಸುವುದನ್ನು ತಪ್ಪಿಸುವ ಉದ್ದೇಶದಿಂದ ಜಾಗೃತಿ ಮೂಡಿಸುವುದೇ ʼವರ್ಲ್ಡ್ ಪ್ರೀಮೆಚೂರಿಟಿ ಡೇʼ ಯ ಉದ್ದೇಶವಾಗಿದೆ. ಅಕಾಲಿಕ ಜನನವು ವಿಶ್ವಾದ್ಯಂತ ಶಿಶು ಮರಣಕ್ಕೆ ಪ್ರಮುಖ ಕಾರಣ. ತಾಯಿಯ ಆರೋಗ್ಯ, ಗುಣಮಟ್ಟದ ಆರೈಕೆಯ ಮೂಲಕ ಅವಧಿ ಪೂರ್ವ ಜನಿಸಿದ ಮಕ್ಕಳ ಬದುಕುವ ಸಾಧ್ಯತೆಗಳನ್ನು ಹೆಚ್ಚಿಸಬಹುದು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Good news: ಬೆಂಗಳೂರಿನಿಂದ ಬೆಳಗಾವಿಗೆ ಮೊದಲ ಸ್ಲೀಪರ್ ವಂದೇ ಭಾರತ್ ರೈಲು ಆರಂಭ
ಹಿರಿಯ ಮಕ್ಕಳ ತಜ್ಞೆ ಮತ್ತು ಪಿಐಸಿಯು ತಜ್ಞೆ ಡಾ.ಸುಮಿತ್ರಾ ಮಾತನಾಡಿ, ಅಕಾಲಿಕವಾಗಿ ಜನಿಸಿದ ಶಿಶುಗಳಿಗೆ ಆರಂಭಿಕ ಬೆಳವಣಿಗೆಗೆ ನೀಡಬೇಕಾದ ಮಹತ್ವ ಕುರಿತು ತಿಳಿಸಿದರು.