ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೋರಮಂಗಲ ವಿಭಾಗದ ದೇವರಬೀಸನಹಳ್ಳಿ ಮತ್ತು ಆಡುಗೋಡಿ ಉಪಕೇಂದ್ರದಲ್ಲಿನ ಹಲವೆಡೆ ಡಿ.11 ರಂದು ಬುಧವಾರ ಮತ್ತು ಡಿ.12 ಗುರುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಬೆಳ್ಳಂದೂರು, ಆರ್ಎಂಜೆಡ್, ಎಕ್ಸೊಸ್ಪೇಸ್ ಎಕೋವರ್ಲ್ಡ್, ದೇವರಬೀಸನಹಳ್ಳಿ, ಕರಿಯಮ್ಮನ ಅಗ್ರಹಾರ, ಸಕ್ರ ಆಸ್ಪತ್ರೆ, ಪಾಸ್ ಪೋರ್ಟ್ ಆಫೀಸ್, ಶೋಭ ಅಪಾರ್ಟಮೆಂಟ್, ಹೊರ ವರ್ತುಲ ರಸ್ತೆ, 5ನೇ ಇಂಡಸ್ಟ್ರಿಯಲ್ ಲೇಔಟ್, ಕೋರಮಂಗಲ, ಮಡಿವಾಳ ವೆಂಕಟೇಶ್ವರ ಬಡಾವಣೆ, ಚಿಕ್ಕ ಆಡುಗೋಡಿ, ಜೋಗಿ ಕಾಲೋನಿ, ಈಸ್ಟ್ ಲ್ಯಾಂಡ್ ಹೊಲ್ಡಿಂಗ್ ಬಿಲ್ಡಿಂಗ್, ಸೈಂಟ್ ಜಾನ್ ಸ್ಟಾಫ್ ಕ್ವಾರ್ಟರ್ಸ್, ಮಾರುತಿನಗರ, ಆಡುಗೋಡಿ 7ನೇ ಮತ್ತು 8ನೇ ಬ್ಲಾಕ್, ಸಿ.ಎ.ಆರ್. ಪೊಲೀಸ್ ಕ್ವಾರ್ಟರ್ಸ್, ಆಡುಗೊಡಿ ಮುಖ್ಯ ರಸ್ತೆ, ಸೈಂಟ್ ಜಾನ್ ಆಸ್ಪತ್ರೆ, ಮಡಿವಾಳ, ಮಾರುತಿ ನಗರ, ಡಾಲರ್ಸ್ ಕಾಲೋನಿ, 100 ಫೀಟ್ ರಿಂಗ್ ರಸ್ತೆ, ಬಿ.ಜಿ.ರಸ್ತೆ, ಕೆ.ಎಚ್.ಬಿ. ಕಾಲೋನಿ, 5ನೇ ಬ್ಲಾಕ್ ಇಂಡಸ್ಟ್ರಿಯಲ್ ಏರಿಯಾ ಕೋರಮಂಗಲ, ಮೈಕೋ 3ನೇ, 4ನೇ, 5ನೇ ಮತ್ತು 6ನೇ ಬ್ಲಾಕ್ ಕೋರಮಂಗಲ, ಭುವನಪ್ಪ ಕಾವೇರಿ ಬಡಾವಣೆ, ಕೃಷ್ಣಾ ನಗರ ಇಂಡಸ್ಟ್ರಿಯಲ್ ಲೇಔಟ್, ಎಸ್.ಜಿ.ಪಾಳ್ಯ, 2ನೇ ಬ್ಲಾಕ್ ಧವನ್ ಜ್ಯೂಯಲರಿ, ಮಡಿವಾಳ ಸಂತೆ, ಸಿದ್ದಾರ್ಥ ಕಾಲೋನಿ, ಹ್ಯಾಪಿ ಮೈಂಡ್ ಕಂಪನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಸುದ್ದಿಯನ್ನೂ ಓದಿ | Choo Mantar Movie: ಶರಣ್ ಅಭಿನಯದ ಹಾರರ್ ಚಿತ್ರ ʼಛೂ ಮಂತರ್ʼ ಜ.10ಕ್ಕೆ ಬಿಡುಗಡೆ
ಬೆಂಗಳೂರು ಉತ್ತರ ವೃತ್ತ ಅಟ್ಟೂರು ಯಲಹಂಕ ಎಂಯುಎಸ್ಎಸ್ದಲ್ಲಿನ ಹಲವೆಡೆ ಡಿ.13 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ | Job Guide: ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ನ 118 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಕೋರಮಂಗಲ ವಿಭಾಗದಲ್ಲಿ ಮತ್ತು ಕೆ.ಎಂ.ಎಫ್, ಮದರ್ ಡೈರಿ, ಎಸ್.ಎಫ್.ಎಸ್ 208, ಎಸ್.ಎಫ್.ಎಸ್ 407 ಉನ್ನಿಕೃಷ್ಣನ್ ರಸ್ತೆ, ಬಿ ಸೆಕ್ಟರ್, ಎನ್.ಇ.ಎಸ್ ರಸ್ತೆ, ಮಾತೃ ಲೇಔಟ್, ಸೋಮೇಶ್ವರನಗರ, ಕನಕನಗರ, ನ್ಯಾಯಾಂಗ ಬಡಾವಣೆ, ಯಲಹಂಕ ಓಲ್ಡ್ ಟೌನ್, ಗಾಂಧಿ ನಗರ, ಹಳೆಯ ಪಟ್ಟಣ ಬಿಬಿಎಂಪಿ ರಸ್ತೆ, ಕರೆ, ಬಿಬಿಎಂಪಿ ರಸ್ತೆ ಕೋಡಿ ರೋಡ್, ಪುರವಂಕರ, ಅಪಾರ್ಟ್ಮೆಂಟ್ ಆರ್.ಎಂ.ಝೆಡ್ ಮಾಲ್, ಆರ್.ಎಂ.ಝಡ್ ರೆಸಿಡೆನ್ಸಿಯಲ್ ಅಟ್ಟೂರು ಯಲಹಂಕ ಎಂಯುಎಸ್ಎಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.