Wednesday, 18th December 2024

Bengaluru Power Cut: ಡಿ.19, 20ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

bengaluru power cut

ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 66/11ಕೆ.ವಿ ಎಲ್.ಆರ್. ಬಂಡೆ ಕೇಂದ್ರದಲ್ಲಿನ ಹಲವೆಡೆ ಡಿ.19 ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಎ.ಕೆ. ಆಶ್ರಮ ರಸ್ತೆ, ದೇವೆಗೌಡ ರಸ್ತೆ, ಆರ್.ಟಿ.ನಗರ 1ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರಿಯ, ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯೂ.ಎಸ್.ಎಸ್.ಬಿ ಸೆವೇಜ್ ಪ್ಲಾಟ್, ಮರಿಯಣ್ಣಪಾಳ್ಯ, ಕಾಫೀ ಬೋರ್ಡ್ ಲೇಔಟ್, ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್, ಭುವನೇಶ್ವರಿ ನಗರ, ಬಿ.ಇ.ಎಲ್. ಕಾರ್ಪೋರೇಟ್ ಆಫೀಸ್ ಚಾಣಕ್ಯ ಲೇಔಟ್ ನಾಗವಾರ, ಎಂ.ಎಸ್. ರಾಮಯ್ಯ ಉತ್ತರ ಸಿಟಿ, ತನಿಸಂದ್ರ ಮುಖ್ಯ ರಸ್ತೆ, ಆಶೀರ್ವಾದ್ ನಗರ, ಅಮರಜ್ಯೋತಿ ಲೇಔಟ್, ರಾಚೇನಹಳ್ಳಿ ಮುಖ್ಯ ರಸ್ತೆ, ಮೇಸ್ತ್ರಿ ಪಾಳ್ಯ, ರಾಯಲ್ ಎನ್‌ಕ್ಲೇವ್, ಶ್ರೀರಾಂಪುರ ವಿಲೇಜ್, ವಿ.ಎಚ್.ಬಿ.ಸಿ.ಎಸ್ ಲೇಔಟ್ ವೀರಣ್ಣಪಾಳ್ಯ, ಜೋಜಪ್ಪ ಲೇಔಟ್, 17ನೇ ಕ್ರಾಸ್, ಗೋವಿಂದಪುರ, ವೀರಣ್ಣಪಾಳ್ಯ ಮುಖ್ಯ ರಸ್ತೆ, ಬೈರಪ್ಪ ಲೇಔಟ್ ಮತ್ತು ಸುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Lakshmi Hebbalkar: ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳಕರ್!

ಬೆಂಗಳೂರು ನಗರದ 66/11 ಕೆವಿ ಮಾನ್ಯತಾ ಉಪಕೇಂದ್ರದಿಂದ 66/11 ಕೆವಿ ಶೋಭಾ ಸಿಟಿ ಉಪಕೇಂದ್ರದಲ್ಲಿನ ಹಲವೆಡೆ ಡಿ.19 ರಂದು ಗುರುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಮಾನ್ಯತಾ ಕಾಫಿ ಬೋರ್ಡ್ ಲೇಔಟ್, ಮರಿಯನಪಾಳ್ಯ, ಮಾನ್ಯತಾ ನಿವಾಸ, ಶ್ರೀ ಭಾಗ್ಯ ಶ್ರೀ ಲೇಔಟ್ ಮತ್ತು ರಾಚೇನಹಳ್ಳಿ ಐಬ್ರೋಕ್ಸ್ ಅಮರಜ್ಯೋತಿ ಲೇಔಟ್, ಫಾತಿಮಾ ಲೇಔಟ್, ಅಂಜನಾದ್ರಿ ಲೇಔಟ್ ಮಂತ್ರಿ ಲಿಥೋಸ್ ಮತ್ತು ಶೋಭಾ ಸಿಟಿ ಚೊಕ್ಕನಹಳ್ಳಿ ಡೊಮಿನೊ ಪಿಜ್ಜಾ ದೇವ್ ನಗರ್ ವೆಂಕಟ್ ಪ್ಯಾರಡೈಸ್ ನಗರ ಚೊಕ್ಕನಹಳ್ಳಿ ಡೊಮಿನೊ ಪಿಜ್ಜಾ ದೇವ್ ನಗರ್ ವೆಂಕಟ್ ಪ್ಯಾರಡೈಸ್ ನಗರ ಲೇಔಟ್ ಶೋಭಾ ಸಿಟಿ, ಪೊಲೀಸ್ ಕ್ವಾರ್ಟರ್ಸ್, ಆರ್ ಕೆ ಹೆಗಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿವೈಎಂ, ಸ್ಲಂ ಬೋರ್ಡ್ ಮತ್ತು ಬೆಂಚ್ ರಾಯಲ್ ವುಡ್ ನಗರ, ಶೋಭಾನಗರ. ಲೇಔಟ್ ಥಣಿಸಂದ್ರ, ಆರ್ ಕೆ ಹೆಗ್ಡೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Kidney Health: ಕಿಡ್ನಿ ಆರೋಗ್ಯದ ಕುರಿತು ಈ ಸಂಗತಿ ತಿಳಿದುಕೊಳ್ಳುವುದು ಅತಿ ಮುಖ್ಯ

ಬೆಂಗಳೂರು ನಗರದ 66/11 ಕೆವಿ ರಾಜನಕುಂಟೆ ಸಬ್‌ಸ್ಟೇಷನ್‌ನ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದ ಹಲವೆಡೆ ಡಿ.20 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಸುದ್ದಿಯನ್ನೂ ಓದಿ | Job Guide: ನ್ಯೂ ಅಶ್ಯೂರೆನ್ಸ್‌ ಕಂಪೆನಿ ಲಿಮಿಡೆಟ್‌ನಲ್ಲಿದೆ 500 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಿ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರ, ಕೆಎಂಎಫ್, ಇಟಗಲ್‌ಪುರ, ಅರ್ಕೇರಿ, ಬೈರಾಪುರ, ಬೂದಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೇನಹಳ್ಳಿ. ಸೆಂಚುರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.