Thursday, 12th December 2024

Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

Bengaluru power cut

ಬೆಂಗಳೂರು: ಬೆಂಗಳೂರು ನಗರದ 66/11 ಕೆ.ವಿ ಶೋಭಾ ಸಿಟಿ ಉಪ-ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಅ.19ರಂದು ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಶೊಭಾ ಸಿಟಿ, ಚೊಕ್ಕನಹಳ್ಳಿ, ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್, ನೂರ್ ನಗರ, ಎಕ್ಸ್ ಸರ್ವಿಸ್‌ಮೆನ್ ಲೇಔಟ್, ಪೊಲೀಸ್ ಕ್ವಾಟರ್ಸ್, ಆರ್‌.ಕೆ. ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್‌, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್‌, ಎಸ್ತರ್ ಹರ‍್ಮೋನಿಕ್ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬರ್ಡ್‌ ಮತ್ತು ಬೆಂಚ್ ರಾಯಲ್ ವುಡ್, ಅರ‍್ಕಾವತಿ ಲೇಔಟ್, ಥಣಿಸಂದ್ರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Bengaluru Airport: ಬೆಂಗಳೂರಿನಿಂದ ಇನ್ನು 5 ನಿಮಿಷದಲ್ಲಿ ದೇವನಹಳ್ಳಿ ಏರ್‌ಪೋರ್ಟ್‌ ತಲುಪಿ!

ಬೆಂಗಳೂರು ನಗರದ 66/11 ಕೆ.ವಿ. ಬ್ರಿಗೇಡ್ ಮೆಟ್ರೋಪೋಲಿಸ್ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ-01 ರ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಅ.19ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಎಚ್.ಜಿ. ಶೀಲಾ ಬಿಲ್ಡಿಂಗ್ ಔಟರ್‌ರಿಂಗ್ ರೋಡ್, ಬ್ರಿಗೇಡ್ ಮೆಟ್ರೋಪೋಲಿಸ್ ಡೆಫ್ ಬ್ಲಾಕ್, ಬ್ರಿಗೇಡ್ ಮೆಟ್ರೋಪಾಲಿಸ್ ಘಿ ಬ್ಲಾಕ್, ದೇವಸಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಬ್ರಿಗೇಡ್ ನಲ್ಪಾಡ್ ಬಿಲ್ಡಿಂಗ್, ಡಬ್ಲ್ಯುಎಫ್‌ಡಿ ಮುಖ್ಯ ರಸ್ತೆ, ರಸ್ತೆ, ಮಾಲ್, ಬ್ರಿಗೇಡ್ ಮೆಟ್ರೋಪೋಲಿಸ್ ಎಬಿಸಿ ಬ್ಲಾಕ್, ನೆಟಾಪ್ ಇಂಡಿಯಾ ಪ್ರೈ ಲಿಮಿಟೆಡ್, ಡಬ್ಲ್ಯುಎಫ್‌ಡಿ ಮುಖ್ಯ ರಸ್ತೆ, ದರ‍್ಗಾ ಪೆಟಲ್ಸ್ ಅಪಾರ್ಟ್‌ಮೆಂಟ್, ಔಟರ್ ರಿಂಗ್ ರೋಡ್, ಫರ‍್ನ್ ಸಿಟಿ, ಫರ‍್ನ್ ಸಿಟಿ ರಸ್ತೆ, ಫರ‍್ನ್ ಪ್ಯಾರಡೈಸ್, ಕುಸುಮಲ್ಲೊಯ್ಸ್ ಡಾಟಾ ಸೆಂಟರ್ ಕುಂಡನಹಳ್ಳಿ ಮುಖ್ಯ ರಸ್ತೆ (ಸತ್ವ ಡೇಟಾ ಸೆಂಟರ್), ಬ್ಯಾಗ್‌ಮನೆ ಐಟಿ ಪಿ.

ಈ ಸುದ್ದಿಯನ್ನೂ ಓದಿ | WHO Guidelines: ಕ್ಯಾನ್ಸರ್, ಹೃದ್ರೋಗ, ಮಧುಮೇಹದ ಅಪಾಯ ಕಡಿಮೆ ಮಾಡುವುದು ಹೇಗೆ?

ಬೆಂಗಳೂರು ನಗರದ 66/11 ಕೆ.ವಿ. ಬ್ರಿಗೇಡ್ ಮೆಟ್ರೋಪೋಲಿಸ್ ಸ್ಟೇಷನ್‌ನಲ್ಲಿ 31.5 ಎಂ.ವಿ.ಎ ಶಕ್ತಿ ಪರಿವರ್ತಕ-02 ರ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಅ.19 ರಂದು ಶನಿವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಈ ಸುದ್ದಿಯನ್ನೂ ಓದಿ | Reliance Jio: ಜಿಯೋದ ‘ಇಂಟೆಲಿಜೆಂಟ್ ಶಾಪಿಂಗ್ ಕಾರ್ಟ್ʼ ನಿಂದ ಸ್ವಯಂಚಾಲಿತ ಬಿಲ್‌; ಬಳಸುವುದು ಹೇಗೆ?

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು

ನಗರದ ದೊಡ್ಡನೆಕ್ಕುಂಡಿ ಇಂಡಸ್ಟ್ರಿಯಲ್ ಏರಿಯಾ, ಆಲ್ಫೈನ್ ಇಕೋ ರೋಡ್, ಫ್ರೆಂಡ್ಸ್ ಲೇಔಟ್, ಬ್ರಿಗೇಡ್ ಮೆಟ್ರೋಪೋಲಿಸ್ ಕಾಮನ್ ಏರಿಯಾ ಆಯೌಟ್, ಕುಂದನ ಹಳ್ಳಿ ಮುಖ್ಯ ರಸ್ತೆ, ಆಶ್ರಯ ಲೇಔಟ್, ಸರ್ ಎಂ. ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ, ಯುನೈಟೆಡ್ ಆಕ್ಸಿಜನ್ ಆಪಾರ್ಟ್‌ಮೆಂಟ್, ಕಾವೇರಿ ನಗರ, ಪ್ರೆಸ್ಟೀಜ್ ಟೆಕ್ನೋ ಸ್ಟಾರ್ ಐಟಿ ಪಾರ್ಕ್‌.