Thursday, 12th September 2024

Best Teacher Award: ಉತ್ತಮ ಶಿಕ್ಷಕ ಪ್ರಶಸ್ತಿಗೆ ಉರುಳಾದ ಹಿಜಾಬ್ ವಿವಾದ, ಕುಂದಾಪುರ ಪ್ರಾಂಶುಪಾಲರ ಪ್ರಶಸ್ತಿಗೆ ತಡೆ

hijab row best teacher award

ಉಡುಪಿ: ಕುಂದಾಪುರದ ಪ್ರಾಂಶುಪಾಲರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ (Best Teacher Award) ಘೋಷಣೆಯಾದ ಎರಡೇ ದಿನಗಳಲ್ಲಿ ಅದನ್ನು ತಡೆಹಿಡಿಯಲಾಗಿದೆ. ಹಿಜಾಬ್ ವಿವಾದ (Hijad Row) ಅವರಿಗೆ ಉರುಳಾಗಿದ್ದು, ಈ ಕುರಿತು ಸಲ್ಲಿಕೆಯಾದ ಆಕ್ಷೇಪಗಳನ್ನನುಸರಿಸಿ ಶಿಕ್ಷಣ ಇಲಾಖೆ ಪ್ರಶಸ್ತಿಯನ್ನು ತಡೆಹಿಡಿದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರಿಗೆ ಪ್ರಶಸ್ತಿ ಘೋಷಣೆ ಆಗಿತ್ತು. ಆದರೆ ಇವರು ಈ ಹಿಂದೆ ಹಿಜಾಬ್‌ ಹೋರಾಟದ ಸಂದರ್ಬದಲ್ಲಿ ಹೋರಾಟಗಾರರನ್ನು ತಡೆದಿದ್ದ ಹಿನ್ನೆಲೆಯಲ್ಲಿ, ಇವರ ಆಯ್ಕೆ ಕುರಿತು ಹಿಜಾಬ್ ಪರರು ವಿರೋಧ ವ್ಯಕ್ತಪಡಿಸಿದ್ದರು.

ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರ ಹೆಸರು ಹಿಜಾಬ್ ವಿವಾದದಲ್ಲಿ ಕೇಳಿಬಂದಿತ್ತು. ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು​ ಗೇಟ್ ಬಳಿ ತಡೆದಿದ್ದರು. ವಿದ್ಯಾರ್ಥಿನಿಯರನ್ನು ಗೇಟ್ ಬಳಿ ಪ್ರಾಂಶುಪಾಲರು ತಡೆದಿದ್ದ ಫೋಟೋ ವೈರಲ್ ಆಗಿತ್ತು. ಹೀಗಾಗಿ ಪ್ರಶಸ್ತಿ ಹಿಂಪಡೆಯುವಂತೆ ಹಿಜಾಬ್ ಪರ ಹೋರಾಟಗಾರರು ಒತ್ತಡ ಹಾಕಿದ್ದರು. ಇದೀಗ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಪ್ರಶಸ್ತಿ ತಡೆ ಹಿಡಿದಿದೆ.

ರಾಮಕೃಷ್ಣ ಬಿಜಿ ಅವರಿಗೆ ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕೂಡ ವಿರೋಧ ಕೇಳಿಬಂದಿತ್ತು. ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರನಿಲ್ಲಿಸಿದ್ದ ಪ್ರಾಂಶುಪಾಲರ ನಡೆಗೆ ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಉಡುಪಿಯಲ್ಲಿ ಭುಗಿಲೆದಿದ್ದ ವಿವಾದ ರಾಜ್ಯಾದ್ಯಂತ ಹಬ್ಬಿತ್ತು. ಕೊನೆಗೆ ಅಂದಿನ ಬಿಜೆಪಿ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದನ್ನು ನಿಷೇಧಿಸಿತ್ತು.

ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಯನ್ನು ಇತ್ತೀಚೆಗೆಗಷ್ಟೇ ಶಿಕ್ಷಣ ಇಲಾಖೆ ಪಟ್ಟಿ ಪ್ರಕಟಿಸಿದೆ. ಪ್ರಾಥಮಿಕ ಶಾಲೆಯ ವಿಭಾಗದಲ್ಲಿ 20 ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 11 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ದಿನದಂದು ಸರ್ಕಾರ ಪ್ರಶಸ್ತಿ ಪ್ರದಾನ ನಡೆಯಲಿದೆ. ಜೊತೆಗೆ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಮಹಿಳಾ ಶಿಕ್ಷಕಿಯರಿಗೆ ಅಂದೇ ಸಾವಿತ್ರಿಬಾಯಿ ಪುಲೆ ಪ್ರಶಸ್ತಿಯನ್ನು ಸಹ ನೀಡಲಾಗುತ್ತಿದೆ.

ಈ ಸುದ್ದಿ ಓದಿ: ಮಕ್ಕಳ ಹಾಗೂ ಉತ್ತಮ ಸಮಾಜಕ್ಕೆ ಶಿಕ್ಷಕರು ನೀಡುವ ತ್ಯಾಗ ಆದರ್ಶನೀಯ

Leave a Reply

Your email address will not be published. Required fields are marked *