Wednesday, 6th November 2024

ಜನರ ಸಹಕಾರದಿಂದ ಗ್ರಾಮೀಣ ಭಾಗದ ಅಭಿವೃದ್ದಿ ಸಾಧ್ಯ: ಭಾರತಿ ಚಲುವಯ್ಯ

ಬಸವನಬಾಗೇವಾಡಿ: ಸರಕಾರ ಗ್ರಾಮೀಣ ಭಾಗದಲ್ಲಿ ಜನರ ಸಮಸ್ಯೆಯನ್ನು ಸ್ಥಳೀಯವಾಗಿ ನೀಗಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಆ ನಿಟ್ಟಿನಲ್ಲಿ ಜನರ ಸಹಕಾರ ಮುಖ್ಯವಾಗಿ ಬೇಕಾಗುತ್ತದೆ ಎಂದು ತಾಲೂಕಾ ಪಂಚಾಯತಿ ಎಒ ಭಾರತಿ ಚಲುವಯ್ಯ ಹೇಳಿದರು.
ತಾಲೂಕಿನ ಅಡವಿ ನಂದಿಹಾಳ ಪಿ. ಎಚ್. ಗ್ರಾಮದಲ್ಲಿ ಶನಿವಾರ ಜಿಲ್ಲಾ ಪಂಚಾಯತಿ ವಿಜಯಪೂರ ಹಾಗೂ ತಾಲೂಕಾಡಳಿತ ಸಹಯೋಗ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹಲವು ಸಮಸ್ಯೆಗಳಿದ್ದು. ಅವುಗಳನ್ನು ಸಂಬಂಧಪಟ್ಟ ಅಧಿಕಾರಿ ಗಳ ಗಮನಕ್ಕೆ ತಂದು ಬಗೆಹರಿಸುವದಾಗಿ ಹೇಳಿದರು. ಗ್ರಾಮದ ಎಲ್ಲಾ ಜನರ ಸಹಕಾರ ವಿದ್ದರೆ ಗ್ರಾಮೀಣ ಭಾಗದ ಹಲವು ಸಮಸ್ಯಗಳನ್ನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕೆಲಸ ಮಾಡುತ್ತೇವೆ. ಅಧಿಕಾರಿಗಳೊಂದಿಗೆ ಸಹಕಾರ ಮನೋಭಾವನೆಯಿಂದ ವತರ್ಿಸಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಯ ರಾಜಶೇಖರ ಚಿಂಚೋಳಿ ಮಾತನಾಡಿ ಜನರು ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡುವ ಮೂಲಕ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಕರೋನಾ 3ನೇ ಬೂಸ್ಟರ್ ಡೋಜ್ ನೀಡಲಾಗುತ್ತದೆ. ಎಲ್ಲರೂ ತಪ್ಪದೇ ಲಸಿಕೆಯನ್ನು ಪಡೆದು ಆರೋಗ್ಯವಂತ ಜೀವನ ನಡೆಸಲು ಸಲಹೆ ನೀಡಿದರು.
ಪಶುಸಂಗೋಪನೆ ಇಲಾಖೆಯ ರೇವಣಸಿದ್ದ ದೇಗಿನಾಳ ಮಾತನಾಡಿ ಇಲಾಖೆಯಲ್ಲಿ ನೂತನವಾಗಿ ಆರಂಭವಾದ ರಾಷ್ಟ್ರೀಯ ಜಾನುವಾರಗಳ ವಿಮೆ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ರೈತರು ತಮ್ಮ ಜನಾನುವಾರಗಳಿಗೆ ಅಂದರೆ ಎತ್ತು, ಆಕಳು, ಎಮ್ಮೆ ಹಾಗೂ ಕರುಗಳಿಗೆ ವಿಮೆಯನ್ನು ಸರಕಾರ ಸಹಾಯ ಧನದಿಂದ ತಮ್ಮ ದನ ಕರುಗಳಿಗೆ ವಿಮೆ ಮಾಡಿಸುವಂತೆ ಹೇಳಿದರು.
ಹೂವಿನಹಿಪ್ಪರಗಿ ಕಂದಾಯ ನಿರೀಕ್ಷಕ ಬಿ. ಬಿ. ಕಮತ ಮಾತನಾಡಿ ಸರಕಾರದ ವಿನೂತನ ಯೋಜನೆಯಾದ ನವೋದಯ ಎಂಬ ಕಾರ್ಯಕ್ರಮದಲ್ಲಿ ಹಲೋ ಕಂದಾಯ ಸಚಿವರೆ ನಂ: 155245 ಈ ಸಹಾಯವಾಣಿಗೆ ಕರೆ ಮಾಡಿ ಹೇಳಿದರೆ ಮುಂದಿನ 72 ಗಂಟೆ ಗಳಲ್ಲಿ ಅರ್ಹ ಪಲಾನುಭಿಗಳಿದ್ದರೆ ಕಂದಾಯ ಇಲಾಖೆಯ ಅಧಿಕಾರಿಗಳು ಮನೆಗೆ ಬೇಟಿ ನೀಡಿ ಮಂಜೂರಾತಿ ಆದೇಶ ನೀಡುವ ಕಾರ್ಯಕ್ರಮವಾಗಿದೆ. ಇದರ ಅನುಕೂಲತೆಯನ್ನು ಸಾರ್ವಜನಿಕರು ಪಡೆಯುಂತೆ ಹೇಳಿದರು.
ಕಾರ್ಯಕ್ರಮದಲ್ಲಿ 8 ಜನ ಪಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರವನ್ನು ನೀಡಲಾಯಿತು. ತೋಟಗಾರಿಕೆ ಇಲಾಖೆಯ ತಾಲೂಕಾ ಅಧಿಕಾರಿ ಮಾಂತೇಶ ಕಾಖಂಡಕಿ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಬರುವ ಹಲವು ಜನೋ ಪಯೋಗಿ ಕಾರ್ಯಕ್ರಮದ ಕುರಿತು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಎಡಿ, ಎಂ. ಎಚ್, ಯರಝರಿ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಭವಾನಿ ಪಾಟೀಲ. ಉಪತಹಶೀಲ್ದಾರ ಎಸ್. ಕೆ. ಪಾಟೀಲ. ರೇಷ್ಮೆ ಇಲಾಖೆ, ಶಿಶು ಅಭಿವೃದ್ದಿ. ಆರ್.ಡಿ.ಪಿ.ಆರ್, ಭೂ ಸೇನಾ ಇಲಾಖೆ, ಲೋಕೋಪ ಯೋಗಿ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ. ಸೇರಿ ಹಲವು ಇಲಾಖೆಯ ಅಧಿಕಾರಿಗಳು ಸೇರಿ ವಿವಿಧ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಮದ ರಾಮಚಂದ್ರ ಸಾಸನೂರ, ಬಾಲಣ್ಣ ವಾಲಿಕಾರ, ಸಂಗನಗೌಡ ಪಾಟೀಲ, ಗಿರೆಪ್ಪ ವಾಲಿಕಾರ, ಭೀಮಣ್ಣ ವಾಲಿಕಾರ, ಶಿವು ಹಿರೇಮಠ, ಶಾಂತಯ್ಯ ಹಿರೇಮಠ, ಪ್ರವೀಣ ಹಳ್ಳಿ, ಸುಭಸಗೌಡ ಪಾಟೀಲ, ಮಾಂತಗೌಡ ಪಾಟೀಲ, ಸಂಗನಗೌಡ ಹಳ್ಳಿ ಇದ್ದರು.ವಡವಡಗಿ ಪಂಚಾಯತಿ ಪಿಡಿಓ ಶಿವಾನಂದ ತೋಳನೂರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮಕ್ಕೆ ತಾಲೂಕಿನ ಇರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಕಟ್ಟು ನಿಟ್ಟಾಗಿ ಹಾಜರಾಗಬೇಕು ಎಂಬ ಆದೇಶ ವಿದ್ದರೂ ಅರಣ್ಯ ಇಲಾಖೆ, ಅಗ್ನಿ ಶಾಮಕ, ಆಹಾರ ಇಲಾಖೆ, ಬ್ಯಾಂಕ ಸೇರಿ ಇತರೇ ಇಲಾಖೆಯವರು ಗೈರು ಹಾಜರಿ ಇದ್ದರು.