Sunday, 15th December 2024

BBK 11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅಬ್ಬರ ಮತ್ತೆ ಶುರು: ಇಂದು ನಡೆಯಲಿದೆ ದೊಡ್ಡ ಜಗಳ

Chaithra Kundapura

ಬಿಗ್ ಬಾಸ್ ಕನ್ನಡ ಸೀಸನ್ 11 ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಹೆಚ್ಚು ಜಗಳಗಳಿಂದಲೇ ಕೂಡಿದ್ದ ದೊಡ್ಮನೆ ಇದೀಗ ಎರಡನೇ ವಾರದ ಮೊದಲ ದಿನ ಕೂಡ ಮನೆ ರಣರಂಗವಾಗಿದೆ. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರು ಗೇಮ್ ಅನ್ನು ಅರ್ಥ ಮಾಡಿ, ಗಮನವಿಟ್ಟು ಆಡಿ ಎಂದಿದ್ದರೂ ಸ್ಪರ್ಧಿಗಳ ನಡುವೆ ಮತ್ತೊಮ್ಮೆ ದೊಡ್ಡ ಜಗಳ ಶುರುವಾಗಿದೆ. ಕಳೆದ ವಾರ ಮೊದಲ ಎರಡು ದಿನ ಸದ್ದು ಮಾಡಿದ್ದ ಚೈತ್ರಾ ಕುಂದಾಪುರ (Chaithra Kundapura) ಬಳಿಕ ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ಇವರ ಅಬ್ಬರ ಶುರು ಆಗಿದೆ.

ಕಲರ್ಸ್ ಕನ್ನಡ ಇಂದಿನ ಎಪಿಸೋಡ್​ನ ಪ್ರೊಮೋ ಬಿಟ್ಟಿದ್ದು, ಮನೆಯಲ್ಲಿ ಮತ್ತೊಮ್ಮೆ ದೊಡ್ಡ ಜಗಳ ನಡೆದಂತಿದೆ. ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಅದೇನೆಂದರೆ ವೇದಿಕೆ ಮೇಲೆ ಸದಸ್ಯರು ಬಂದು ನಿಲ್ಲಬೇಕು ಮತ್ತು ಅವರು ಮನೆಯಲ್ಲಿ ಇರಲು ಯಾಕೆ ಅನರ್ಹರು ಎಂದು ಒಬ್ಬೊಬ್ಬರಾಗಿ ಕಾರಣ ನೀಡಿ ವಾದ-ಪ್ರತಿವಾದ ಮಾಡಬೇಕು. ಈ ಸಂದರ್ಭ ನರಕ ವಾಸಿಗಳಾದ ಚೈತ್ರಾ ಮತ್ತು ಮಾನಸಾ ನಡುವೆ ದೊಡ್ಡ ವಾರ್ ನಡೆದಿದೆ.

ಚೈತ್ರಾ ಅವರು ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂಬ ಕಾರಣ ಬಿಗ್ ಬಾಸ್ ಸ್ಪರ್ಧಿಗಳಿಂದ ಬಂದಿದೆ. ಮಾನಸಾ ಕೂಡ ಇದೇ ಕಾರಣ ನೀಡಿದ್ದಾರೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಕಳೆದ ವಾರ ಚೈತ್ರಾ ಅವರು ಸ್ವರ್ಗಕ್ಕೆ ಕ್ಲೀನಿಂಗ್​ಗೆಂದು ತೆರಳಿದ್ದಾಗ ಅಲ್ಲಿಂದ ಹಣ್ಣನ್ನು ಅರ್ಧ ತಿಂದು ನರಕದ ಸೆಲ್ ಒಳಗೆ ಎಸೆದಿದ್ದರು. ಸದ್ಯ ಈ ವಿಚಾರ ಮನೆಯಲ್ಲಿ ಪುನಃ ಸದ್ದು ಮಾಡಿದೆ.

ಮಾನಸಾ ಅವರು ಚೈತ್ರಾ ಬಳಿ ‘ನಾವೇನು ನಿನ್ ಹತ್ರ ಹೇಳಿ ಕಳಿಸಿಲ್ಲ ಅದನ್ನು ತಿಂದು ಎಸಿ ಅಂತ’ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಚೈತ್ರಾ, ‘ನೀವೆಲ್ಲ ಟೀಮ್ ಮಾಡಿಕೊಂಡು ಆಮೇಲೆ ನನ್ನ ಒಬ್ಬಳ ಮೇಲೆ ಬ್ಲೇಮ್ ಮಾಡಿದ್ರೆ ಅದನ್ನು ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ’ ಎಂದಿದ್ದಾರೆ. ತಾಳ್ಮೆ ಕಳೆದುಕೊಂಡ ಚೈತ್ರಾ ಅವರನ್ನು ಶಿಶಿರ್ ಸೇರಿದಂತೆ ಕೆಲ ಸದಸ್ಯರು ಸಮಾಧಾನ ಪಡಿಸಲು ಮುಂದಾದರು.

ಯಮುನಾ ಎಲಿಮಿನೇಟೆಡ್: ಮೊದಲ ವಾರವೇ ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದ್ದು, ಯಮುನಾ ಶ್ರೀನಿಧಿ ಮೊದಲ ಸ್ಪರ್ಧಿಯಾಗಿ ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಹೆಚ್ಚು ಸೌಂಡ್ ಮಾಡಿದ್ದು, ಜಗದೀಶ್, ಉಗ್ರಂ ಮಂಜು ಮತ್ತು ಯಮುನಾ ಶ್ರೀನಿಧಿ. ಹೆಚ್ಚಾಗಿ ಕಾಣಿಸಿಕೊಂಡಿದ್ದು ಕೂಡ ಇವರೇ. ಇವರಲ್ಲಿ ನಾಮಿನೇಟ್ ಆಗಿದ್ದ ಜಗದೀಶ್ ಮತ್ತು ಯಮುನಾ ಸೇಫ್ ಆಗಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಯಮುನಾ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ.

BBK 11: ನರಕದಿಂದ ಸ್ವರ್ಗಕ್ಕೆ ಬಂದ ಓರ್ವ ಸ್ಪರ್ಧಿ: ಹಂಸ ಕರೆಸಿದ್ದು ಯಾರನ್ನು ನೋಡಿ