Sunday, 15th December 2024

BBK 11: ನರಕದಿಂದ ಸ್ವರ್ಗಕ್ಕೆ ಬಂದ ಒಬ್ಬ ಸ್ಪರ್ಧಿ: ಹಂಸ ಕರೆಸಿದ್ದು ಯಾರನ್ನು ನೋಡಿ

BBK11

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಶುರುವಾಗಿ ಒಂದು ವಾರ ಕಳೆದಿದೆ. ನಿಯಮದಂತೆ ಮೊದಲ ವಾರ ಮನೆಯಿಂದ ಓರ್ವ ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗಿದ್ದು, ಯಮುನಾ ಶ್ರೀನಿಧಿ ಅವರು ಹೊರಬಂದಿದ್ದಾರೆ. ಕಿಚ್ಚ ಸುದೀಪ್ ತಮ್ಮ ಪಂಚಾಯಿತಿಯಲ್ಲಿ ಮನೆಯ ಸದಸ್ಯರಿಗೆ ಅತ್ಯುತ್ತಮ ಸಲಹೆ ನೀಡಿದ್ದು, ಕೆಲವರಿಗೆ ಕೂಲ್ ಆಗಿ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಇದೀಗ ಎರಡನೇ ವಾರಕ್ಕೆ ಕಾಲಿಡುತ್ತಿರುವ ಬಿಬಿಕೆ 11 ಸಖತ್ ಕುತೂಹಲ ಕೆರಳಿಸಿದೆ.

ಮನೆಯ ಕ್ಯಾಪ್ಟನ್ ಆಗಿರುವ ಹಂಸ ಅವರಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಅದೇನೆಂದರೆ ಸ್ವರ್ಗದಲ್ಲಿರುವವರನ್ನು ನರಕಕ್ಕೆ ಮತ್ತು ನರಕದಲ್ಲಿರುವವರನ್ನು ಸ್ವರ್ಗಕ್ಕೆ ವರ್ಗಾಯಿಸುವ ಪವರ್ ನೀಡಲಾಗಿತ್ತು. ಅದರಂತೆ ಭಾನುವಾರದ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್​ನ ಕೊನೆಯಲ್ಲಿ ಹಂಸ ಅವರಿಗೆ ಸುದೀಪ್ ಈ ಕೂಡಲೇ ಓರ್ವ ಸ್ಪರ್ಧಿಯನ್ನು ಅದಲು-ಬದಲು ಮಾಡಿ ಎಂದು ಹೇಳಿದ್ದಾರೆ.

ನರಕದ ಬೀಗ ತೆರೆದು ಓರ್ವ ಸ್ಪರ್ಧಿಯನ್ನು ಸ್ವರ್ಗಕ್ಕೆ ಕರೆ ತನ್ನಿ ಎಂದಿದ್ದಾರೆ. ಹಂಸ ಅವರು ನರಕದಲ್ಲಿರುವ ರಂಜಿತ್ ಕುಮಾರ್ ಅವರನ್ನು ವಿಶೇಷ ಅಧಿಕಾರ ಬಳಸಿ ಸ್ವರ್ಗಕ್ಕೆ ಕರೆ ತಂದಿದ್ದಾರೆ. ಇತ್ತ ಸ್ವರ್ಗದಲ್ಲಿದ್ದ ಜಗದೀಶ್ ಅವರನ್ನು ನರಕಕ್ಕೆ ಕಳುಹಿಸಲಾಗಿದೆ. ನಾನು ಕ್ಯಾಪ್ಟನ್ ಆಗಲು ರಂಜಿತ್ ಕಾರಣ ಹೀಗಾಗಿ ಅವರನ್ನು ಸ್ವರ್ಗಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಹಂಸ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್:

ಮೊದಲ ವಾರವೇ ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಯಮುನಾ ಶ್ರೀನಿಧಿ ಮೊದಲ ಸ್ಪರ್ಧಿಯಾಗಿ ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಹೆಚ್ಚು ಸೌಂಡ್ ಮಾಡಿದ್ದು, ಜಗದೀಶ್, ಉಗ್ರಂ ಮಂಜು ಮತ್ತು ಯಮುನಾ ಶ್ರೀನಿಧಿ. ಹೆಚ್ಚಾಗಿ ಕಾಣಿಸಿಕೊಂಡಿದ್ದು ಕೂಡ ಇವರೇ. ಇವರಲ್ಲಿ ನಾಮಿನೇಟ್ ಆಗಿದ್ದ ಜಗದೀಶ್ ಮತ್ತು ಯಮುನಾ ಸೇಫ್ ಆಗಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಯಮುನಾ ತಮ್ಮ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ಎಲಿಮಿನೇಷನ್: ಕಿಚ್ಚನ ಮುಂದೆ ಗರಂ ಆದ ಯಮುನಾ ಶ್ರೀನಿಧಿ