Sunday, 15th December 2024

Bigg Boss Kannada 11: ಬಿಗ್‌ಬಾಸ್‌‌‌ನಲ್ಲಿ ಫ್ಯಾಷನ್‌ ಪ್ರಿಯರ ಮನಗೆದ್ದಿದೆ ಸುದೀಪ್‌ ಸೂಟ್‌! ಇದರ ದರ ಎಷ್ಟು?

Bigg Boss Kannada 11

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕನ್ನಡದ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ (Bigg Boss Kannada 11) ನಟ ಸುದೀಪ್‌ (Actor Sudeep) ಅವರು ಧರಿಸಿದ್ದ ಇಂಡೋ –ವೆಸ್ಟರ್ನ್‌ ಕೊರಿಯನ್‌ ಶೈಲಿಯ ಡಿಸೈನರ್‌ ಕೋ ಆರ್ಡ್ ಸೂಟ್‌, ಸ್ಥಳೀಯ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಅಂದಹಾಗೆ, ಈ ಅತ್ಯಾಕರ್ಷಕ ಸೂಟನ್ನು ವಿನ್ಯಾಸಗೊಳಿಸಿರುವವರು ಬೇರ್ಯಾರು ಅಲ್ಲ, ಕನ್ನಡಿಗ ಭರತ್‌ ಸಾಗರ್‌. ಹೌದು, ಭರತ್‌ ಅವರು ಇದುವರೆಗೂ ಸುದೀಪ್‌ರ ಸಾಕಷ್ಟು ಡಿಸೈನರ್‌ವೇರ್ಸ್ (Designer Wears) ಸಿದ್ಧಪಡಿಸಿದ್ದಾರೆ. ಬಾಲಿವುಡ್‌ಗರನ್ನು ಮೀರಿಸುವಂತೆ ಕನ್ನಡದ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ, ನಟ ಕಿಚ್ಚ ಸುದೀಪ್‌ ಅವರಿಗೆ ಆಕರ್ಷಕವಾಗಿ ಡಿಸೈನ್‌ ಮಾಡುವ ಭರತ್‌ ಅವರ ಲೆಬೆಲ್‌ ಬಾಟಲ್‌ ಪೈಪ್ಸ್ ಹೆಸರು ಇದೀಗ ಸ್ಯಾಂಡಲ್‌ವುಡ್‌ನಲ್ಲೂ (Sandalwood) ಚಿರಪರಿಚಿತವಾಗಿದೆ.

ನಟ ಸುದೀಪ್‌ರೊಂದಿಗೆ ಸೆಲೆಬ್ರಿಟಿ ಡಿಸೈನರ್‌ ಭರತ್‌ ಸಾಗರ್‌.

ಸುದೀಪ್‌ ಸಿಗ್ನೆಚರ್‌ ಸ್ಟೈಲ್‌

ಸುದೀಪ್‌ ಧರಿಸಿದ್ದ, ಬೇಝ್‌ ಕಲರ್‌ನ ಈ ಇಂಡೋ -ಕೊರಿಯನ್‌ ಕೋ ಆರ್ಡ್ ಸೂಟ್‌, ಜಪಾನಿನ ಲೈಕ್ರಾ, ಸಾಟಿನ್‌ ಫ್ಯಾಬ್ರಿಕ್‌ ಒಳಗೊಂಡಿದೆ. ಶಿಮ್ಮರ್‌ ಮಿಕ್ಸ್ ಇರುವಂತಹ ಫ್ಯಾಬ್ರಿಕ್‌ ಕೂಡ ಬಳಸಲಾಗಿದೆ. ಟಾಪರ್‌ ಜಾಕೆಟ್‌ ಹಾಗೂ ಟೈ ಮಾಡುವಂತಹ ಬೆಲ್ಟ್ ಮೇಲೆ ಪರ್ಲ್ ಹಾಗೂ ಬೀಡ್ಸ್‌ನಿಂದ ಕ್ರೌನ್‌ ಹ್ಯಾಂಡ್‌ ಎಂಬ್ರಾಯ್ಡರಿ ಮಾಡಲಾಗಿದೆ. ಇದು ಅವರ ಸಿಗ್ನೆಚರ್‌ ಸ್ಟೈಲ್‌! ಎನ್ನುತ್ತಾರೆ ಈ ಎಕ್ಸ್‌ಕ್ಲೂಸಿವ್‌ ಸೂಟ್‌ ವಿನ್ಯಾಸ ಮಾಡಿರುವ ಭರತ್‌ ಸಾಗರ್‌.

ಚಿತ್ರಕೃಪೆ: ಕಲರ್ಸ್

ಈ ಡಿಸೈನರ್‌ ಸೂಟ್‌ ಕುರಿತಂತೆ ವಿಶ್ವವಾಣಿ ಡಿಜಿಟಲ್‌ ನ್ಯೂಸ್‌ಗೆ ವಿವರಿಸಿರುವ ಭರತ್‌, ಈ ಸೂಟ್‌ ಅಂದಾಜು 6.5 ಕಿಲೋ ತೂಗುತ್ತದೆ. ಸುಮಾರು 1.85 ಲಕ್ಷ ರೂ. ಗಳಷ್ಟು ಅಂದಾಜು ಬೆಲೆ ಬಾಳುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Virat Kohli : ಸಚಿನ್‌ ತೆಂಡೂಲ್ಕರ್ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

ಸುದೀಪ್‌ರ ಫ್ಯಾಷನ್‌ ಲವ್‌

ಕಿಚ್ಚ ಸುದೀಪ್‌ ಸರ್‌ಗೆ ಅಗಾಧ ಫ್ಯಾಷನ್‌ ಜ್ಞಾನವಿದೆ. ಅವರಿಗೆ ಡಿಸೈನ್‌ ಮಾಡುವಾಗ, ಖುದ್ದು ಅವರೇ ಹೊಸ ವಿನ್ಯಾಸದ ಬಗ್ಗೆ ನಮಗೆ ತಿಳಿಸುತ್ತಾರೆ. ಅವರ ಒಂದೊಂದು ಫ್ಯಾಷನ್‌ ಅಭಿರುಚಿಗೆ ತಕ್ಕಂತೆ ನಾವು ಕೂಡ ಡಿಸೈನ್‌ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಡಿಸೈನರ್‌ ಭರತ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )