Tuesday, 10th December 2024

Bigg Boss kannada 11: ಬಿಗ್‌ ಬಾಸ್‌ ಮನೆಯಿಂದ ಯಮುನಾ ಶ್ರೀನಿಧಿ ಔಟ್!

yamuna srinidhi

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್‌ 11 (Bigg Boss kannada 11) ಮನೆಯಿಂದ ಮೊತ್ತಮೊದಲ ಎಲಿಮಿನೇಷನ್‌ ಆಗಿದೆ. ಯಾರೂ ಊಹಿಸದ ವ್ಯಕ್ತಿ ಎಲಿಮಿನೇಟ್‌ ಆಗಿದ್ದಾರೆ. ಬಹುತೇಕ ಚೈತ್ರಾ ಕುಂದಾಪುರ (Chaitra Kundapura) ಅಥವಾ ಜಗದೀಶ್‌ ಎಲಿಮಿನೇಟ್‌ ಆಗಬಹುದು ಎಂದು ಜನ ಅಂದುಕೊಂಡಿದ್ದರು. ಆದರೆ ಹಾಗಾಗಿಲ್ಲ. ನಟಿ ಯಮುನಾ ಶ್ರೀನಿಧಿ (Yamuna Srinidhi) ಔಟ್ ಆಗಿದ್ದಾರೆ. ಇವರಿಗೆ ಒಂದು ಲಕ್ಷ ರೂ.ಗಳ ಚೆಕ್‌ ಅನ್ನು ಕಿಚ್ಚ ಸುದೀಪ್‌ ನೀಡಿದರು.

ಬಹುತೇಕರು ಲಾಯರ್ ಜಗದೀಶ್ ಮನೆಯಿಂದ ಔಟ್‌ ಆಗುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಯಮುನಾ ಶ್ರೀನಿಧಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಶನಿವಾರದ ಎಪಿಸೋಡ್‌ನಲ್ಲಿ ಭವ್ಯಾ ಗೌಡ ಮತ್ತು ತುಕಾಲಿ ಮಾನಸ, ಗೌತಮಿ ಜಾಧವ್ ಸೇಫ್‌ ಆಗಿ ನಾಮಿನೇಶನ್‌ನಿಂದ ಹೊರಗುಳಿದಿದ್ದರು. ಇಂದಿನ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಮೊದಲು ಮೋಕ್ಷಿತಾ ಪೈ ಅವರು ಸೇಫ್ ಆದರು. ಬಳಿಕ ಕ್ರಮವಾಗಿ ಶಿಶಿರ್ ಶಾಸ್ತ್ರಿ, ಜಗದೀಶ್, ಚೈತ್ರಾ ಕುಂದಾಪುರ, ಹಂಸ ಸೇಫ್ ಆದರು.

ಬಿಗ್ ಬಾಸ್ ಸೀಸನ್ 11ಕ್ಕೆ ಕಾಲಿಡುತ್ತಿದ್ದಂತೆಯೇ ಯಮುನಾ ಶ್ರೀನಿಧಿ ಮೊದಲ ದಿನವೇ ಟ್ರೋಲ್ ಆಗಿದ್ದರು. ಅವರು ಮಾತನಾಡುವ ಶೈಲಿ ಮತ್ತು ಮುಖದ ಎಕ್ಸ್‌ಪ್ರೆಶನ್ ಓವರ್ ಆಗಿದೆ ಎಂದು ಟ್ರೋಲ್ ಮಾಡಲಾಗಿತ್ತು. ಮೈಸೂರು ಮೂಲದ ಯಮುನಾ ಶ್ರೀನಿಧಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಯಮುನಾ ನಟನೆಯಲ್ಲಿ ಛಾಪು ಮೂಡಿಸಿದವರು. ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ಅಮೆರಿಕ ಕನ್ನಡ ಸಂಘದ ಅಧ್ಯಕ್ಷೆಯಾಗಿ ಎಂಟು ವರ್ಷ ಕೆಲಸ ಮಾಡಿದ್ದಾರೆ.

ಶಾಸ್ತ್ರೀಯ ಭರತನಾಟ್ಯ ಪ್ರವೀಣೆ, ನೃತ್ಯ ಸಂಯೋಜಕಿಯಾಗಿ 15 ವರ್ಷಗಳ ಕಾಲ ಅಮೆರಿಕದಲ್ಲಿ ಜೀವನ ನಡೆಸಿದ ಯಮುನಾ 2012ರಲ್ಲಿ ಭಾರತಕ್ಕೆ ಮರಳಿದ್ದರು. ನಂತರ ಕನ್ನಡ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ನಟನಾ ವೃತ್ತಿ ಪ್ರಾರಂಭಿಸಿದರು. ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಇದನ್ನೂ ಓದಿ: Bigg Boss kannada 11: ಜಗದೀಶ್‌ ಲಾಯರೇ ಅಲ್ಲ, ಹಾಗಂತ ಕರೀಬೇಡಿ! ಬಿಗ್‌ ಬಾಸ್‌ಗೆ ಎಚ್ಚರಿಕೆ ನೀಡಿದ ವಕೀಲರ ಸಂಘ