ಹೈದರಾಬಾದ್: ತೆಲುಗಿನ ಮೆಗಾ ಕಿರು ತೆರೆ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Telugu) ವಿನ್ನರ್ ಆಗಿ ಮೂಲತಃ ಕನ್ನಡಿಗರಾದ ನಿಖಿಲ್ (Nikhil Maliyakkal) ಆಯ್ಕೆಯಾಗಿದ್ದಾರೆ. ಇವರು ಮೈಸೂರಿನ ಹಿರಿಯ ಪತ್ರಕರ್ತ ಶಶಿಕುಮಾರ್ ಪುತ್ರರಾಗಿದ್ದಾರೆ.
27 ವರ್ಷ ವಯಸ್ಸಿನ ನಿಖಿಲ್, ಕನ್ನಡ ಮತ್ತು ತೆಲುಗು ಟಿವಿ ಶೋಗಳಲ್ಲಿ ಹಾಗೂ ಸೀರಿಯಲ್‌ಗಳಲ್ಲಿ ಅವರ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಮೂಲತಃ ಕರ್ನಾಟಕದ ಮೈಸೂರಿನವರಾದ ಅವರು ಕನ್ನಡ ಚಲನಚಿತ್ರ ʼಊಟಿʼಯಲ್ಲಿ ನಟನೆಗೆ ಪದಾರ್ಪಣೆ ಮಾಡಿದರು.
1997ರ ಜೂನ್ 28ರಂದು ಮೈಸೂರಿನಲ್ಲಿ ಜನಿಸಿದ ಅವರು ಈಗ ತೆಲುಗಿನಲ್ಲಿ ನಿಖಿಲ್ ಮಲಿಯಕ್ಕಲ್ ಎಂದೇ ಜನಪ್ರಿಯ. ತೆಲುಗು ಧಾರಾವಾಹಿ ʼಗೋರಿಂಟಾಕುʼನೊಂದಿಗೆ ಖ್ಯಾತಿ ಗಳಿಸಿದರು. ʼಬಿಗ್ ಬಾಸ್ ತೆಲುಗು 8ʼ ಶೋದಲ್ಲಿ ತಮ್ಮ ಕ್ರಿಯಾತ್ಮಕ ವ್ಯಕ್ತಿತ್ವದಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಶೋ ವಿನ್ನರ್ ಆಗಿ ಅವರು ₹ 50 ಲಕ್ಷ ನಗದು ಬಹುಮಾನವನ್ನು ಗೆದ್ದಿದ್ದಾರೆ. ಜೊತೆಗೆ ಹೊಚ್ಚ ಹೊಸ ಕಾರು ಮತ್ತು ಇತರ ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯುತ್ತಾರೆ.
ನಟನೆಗೆ ಮೊದಲು ಅವರು ಬ್ಯುಸಿನೆಸ್ ಎಕ್ಸಿಕ್ಯೂಟಿವ್ ಆಗಿದ್ದರು. ಪ್ರತಿಭಾವಂತ ನೃತ್ಯ ಕಲಾವಿದರೂ ಹೌದು. ಆಗಾಗ್ಗೆ ತಮ್ಮ ನೃತ್ಯದ ವೀಡಿಯೊಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನೂ ಬ್ಯಾಚುಲರ್ ಹಾಗೂ ಸಾಕುಪ್ರಾಣಿಗಳೆಂದರೆ ಪ್ರೀತಿ.
ಇದನ್ನೂ ಓದಿ: Bigg Boss: ಬಿಗ್‍ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಸಂಭಾವನೆ ಬಾಹುಬಲಿ, ಜೈಲರ್ ಬಜೆಟ್‌ಗಿಂತ ಹೆಚ್ಚು!