ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಗೋದಾನಿಗಳೆಂದು ಖ್ಯಾತ ಸಂಗನಗೌಡ ಬಿರಾದಾರ (೮೦) ನಿಧನ ರಾಗಿದ್ದಾರೆ.
ಮೃತರಿಗೆ ನಾಲ್ವರು ಪುತ್ರರು, ಮೂವರು ಸುಪುತ್ರಿಯರು ಹಾಗೂ ಅಪಾರ ಬಂಧು-ಬಾ0ಧವರನ್ನು ಅಗಲಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ಅವರ ತೋಟದ ವಸ್ತಿಯಲ್ಲಿ ಶ್ರೀಶೈಲ ,ಕಾಶಿ ಜಗದ್ಗುರುಗಳನ್ನು ಮತ್ತು ಅನೇಕ ವೀರಶೈವ ಮಠಾಧೀಶರನ್ನು ಆಹ್ವಾನಿಸಿ ಧರ್ಮಸಭೆ ಅದ್ದೂರಿಯಾಗಿ ಮಾಡಿ ೧೧೧ ಗೋವುಗಳನ್ನು ಮಠಾಧೀಶರಿಗೆ ದಾನ ಮಾಡಿದ್ದಾರೆ.
ಸಂತಾಪ: ಭಗವಂತ ಇವರ ಕುಟುಂಬಕ್ಕೆ ಬಂಧು ಬಾಂದವರಿಗೆ ದುಖ; ಭರಿಸುವ ಶಕ್ತಿ ನೀಡಲಿ ಎಂದು ಶಾಸಕ ಯಶವಂತ ರಾಯಗೌಡ ಪಾಟೀಲ, ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಶೀಲವಂತ ಉಮರಾಣಿ, ಬಿ.ಎಸ್ ಪಾಟೀಲ ಸೇರಿದಂತೆ ಅನೇಕ ಗಣ್ಯರು, ಮುಖಂಡರು ಸಂತಾಪ ಸೂಚಿಸಿದ್ದಾರೆ.