Thursday, 12th December 2024

ಹರಪನಹಳ್ಳಿ ಬಿಜೆಪಿಯಲ್ಲಿ ಸದ್ದಿಲ್ಲದೇ ರೆಡ್ಡಿ ವಿರುದ್ಧ ಸಮರ ಸಾರುತ್ತಿರುವ ಬಿಜೆಪಿಯ ಮತ್ತೊಂದು ಬಣ

ನಾಗರಾಜ್ ನಾಯ್ಕ. ಸಿ ಮಾಡಲಗೇರಿ

ಹರಪನಹಳ್ಳಿ: ಮುಂಬರುವ ೨೦೨೩ ರ ವಿಧಾನಸಭೆ ಚುನಾವಣೆಗೆ ಇನ್ನೂ ೯ ತಿಂಗಳು ಬಾಕಿ ಇರುವಾಗಲೇ ಹರಪನಹಳ್ಳಿ ತಾಲೂಕಿನ ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯ ಜೋರಾದಂತೆ ಕಾಣಿಸುತ್ತಿದ್ದೆ.

ಇಷ್ಟು ದಿನ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ನಡೆಯುತ್ತಿದೆ ಎಂದು ಹರಪನಹಳ್ಳಿ ವಿಧಾನ ಸಭೆ ಕ್ಷೇತ್ರದ ಮತದಾರರು ಅಲ್ಲೋಂದರಲ್ಲಿ ಕೋಲ್ಡಾವಾರ್ ಜೋರಾಗಿ ನಡೆದಿತ್ತು, ಆದರೆ ಈಗ ಬಿಜೆಪಿಯಲ್ಲಿ ಕೋಲ್ಡಾವಾರ್ ಶಾಸಕ ಜಿ. ಕರುಣಕಾರ ರೆಡ್ಡಿ ವಿರುದ್ಧ ಸ್ಥಳೀಯ/ಮೂಲ ಬಿಜೆಪಿಗಿರು ಜೊತೆಗೂಡಿ ರೆಡ್ಡಿ ವಿರುದ್ಧ ಸಮಸಾರಲು ಎಲ್ಲಾ ರೀತಿಯ ಪ್ರಯತ್ನ ಗಳನ್ನು ನಡೆಸು ತ್ತೀದ್ದಾರೆ. ಆದರೆ ಈಗ ಜಿ. ಕರುಣಾಕ ರೆಡ್ಡಿಯ ಆಪ್ತವಲಯರೆಂದೆ ಗುರುತಿಸಿಕೊಂಡಿದ್ದ ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಹಿರಿಯ ಬಿಜೆಪಿ ಮುಖಂಡ ಎಂ.ಪಿ. ನಾಯ್ಕ ನೇತೃತ್ವದ ಮತ್ತೊಂದು ಬಣ ಶಾಸಕ ಜಿ. ಕರುಣಾಕರ ರೆಡ್ಡಿ ವಿರುದ್ಧ ಸಮರ ಸಾರಲು ಎಲ್ಲಾರೀತಿಯ ಪ್ರಯತ್ನಗಳು ನಡೆಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

ಕಳೆದ ಬಾರಿ ಅಂದರೆ ೨೦೧೮ ರ ಚುನಾವಣೆಯಲ್ಲಿ ಸ್ಥಳೀಯ/ ಬಿಜೆಪಿ ನಾಯಕರು ಶಾಸಕ ಜಿ. ಕರುಣಾಕರೆಡ್ಡಿ ರವರ ವಿರುದ್ಧ ಸಮರಸಾರಿದ್ದರು ಆದರೆ ಜಿ. ಕರುಣಾಕರೆಡಿಯವರು ಯಾವ ನಾಯಕರನ್ನು ಲೆಕ್ಕಿಸದೇ ತಾಲೂಕಿನ ಮತದಾರರನ್ನು ನಂಬಿ ಚುನವಣೆಗೆ ಧುಮುಕಿ ಎಂ.ಪಿ. ರವೀಂದ್ರ ರವರ ವಿರುದ್ಧ ಜಯಬೇರಿ ಬಾರಿಸಿದರು.

ಆದರೆ ಈಬಾರಿ ಅಂದರೆ ೨೦೨೩ ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆ ಇನ್ನೂ ೯ ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್ ಮತ್ತು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಂ.ಪಿ.ನಾಯ್ಕ ರವರ ನೇತ್ವದ ಬಿಜೆಪಿ ಮತ್ತೊಂದು ಬಣ ಜಿ. ಕರುಣಾಕರ ರೆಡ್ಡಿ ವಿರುದ್ಧ ಸಮರ ಸಾರಲು ತುದಿಗಾಲಲ್ಲಿ ನಿಂತಿದ್ದಾರೆ ಮುಂದಿನ ದಿನಗಳಲ್ಲಿ ಹರಪನ ಹಳ್ಳಿ ಬಿಜೆಪಿಯ ಅಭ್ಯಾರ್ಥಿ ಯಾರಗಲಿದ್ದಾರೆ ಎಂಬುದುದನ್ನು ಕಾದುನೋಡಬೇಕಾಗಿದೆ.

ಚುನಾವಣೆಯಲ್ಲಿ ಸ್ಥಳೀಯ ನಾಯಕರಾದ ಜಿ. ನಂಜಿನಗೌಡ್ರು, ಆರುಂಡಿ ನಾಗರಾಜ್, ಮಾಹಬಲೇಶ್ವರ ಗೌಡ್ರು, ರವರ ನೇತೃತ್ವದ ಬಣ ಮತ್ತು ಸತ್ತೂರು ಹಾಲೇಶ್ ಮತ್ತು ಎಂ.ಪಿ.ನಾಯ್ಕ ರವರ ನೇತೃತ್ವದ ಬಣ ಒಂದಾಗಿ ಸ್ಥಳೀಯ ನಾಯಕರು ಅಖಾಡಕ್ಕೆ ಇಳಿಯುತ್ತಾರೋ ಅಥವಾ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ ರವರ ಪುತ್ರರಾದ ಜಿ.ಎಸ್. ಅನಿತ್ ಕುಮಾರ್ ರವರನ್ನು ಅಖಾಡಕ್ಕೆ ಇಳಿಸುತ್ತಾರೋ ಅಥವಾ ಈ ಭಾರಿ ಸ್ಥಳೀಯ ನಾಯಕರುಗಳು ಒಂದಾಗಿ ಬಿಜೆಪಿ ಬಿ.ಫಾರಂ ತರುತ್ತಾರೋ ಅವರಿಗೆ ನಾವು ಮತ ಹಾಕುವುದು ಎಂದು ಎಲ್ಲೋಂದರಲ್ಲಿ ಸಾರ್ವಜನಿಕರು ಅಡಿಕೊಳ್ಳುತ್ತೀದ್ದಾರೆ.

ಸ್ಥಳೀಯ ಬಿಜೆಪಿ ನಾಯಕರ ಮಧ್ಯೆ ಜಿ. ಕರುಣಾಕ ರೆಡ್ಡಿಯವರ ರಾಜಕೀಯ ತಂತ್ರಗಾರಿಕೆ ಈ ಬಾರಿ ತಾಲೂಕಿನಲ್ಲಿ ನಡೆಯುತ್ತಾ ಅಥವಾ ಕ್ಷೇತ್ರ ಬಿಟ್ಟು ತೋಲಗಿಸುತ್ತಾರಾ, ಎಂಬುವುದನ್ನು ಕಾದುನೋಡಬೇಕಾಗಿದೆ.

ಒಟ್ಟಾರೆಯಾಗಿ ಶಾಸಕ ಜಿ. ಕರುಣಾಕರೆಡ್ಡಿಯರವರು ತಾಲೂಕಿನ ಬಿಜೆಪಿ ಕಾರ್ಯಕರ್ತರಿಗೆ ಸ್ಪಂಧಿಸುತ್ತೀಲ್ಲಾ ನಿಷ್ಠವಂತ ಬಿಜೆಪಿ ಕಾರ್ಯಕರ್ತರನ್ನು ಶಾಸಕರು ಕಡೆಗಾಣಿಸುತ್ತಿದ್ದಾರೆ. ಈ ಬಾರಿ ಮುಂಬರುವ ವಿಧಾನ ಚುನಾವಣೆಯಲ್ಲಿ ತಾಲೂಕಿನ ಮತದಾ ರರು, ಕಾರ್ಯಕರ್ತರು ಶಾಸಕರ ಮೇಲೆ ಇಟ್ಟುವ ವಿಶ್ವಾಸವನ್ನು ಕೈಬಿಟ್ಟು ಸ್ಥಳೀಯ ನಾಯಕರನ್ನು ಜೈ ಎನ್ನುತ್ತಾರಾ ಅಥವಾ ಕೈ ಹಿಡಿಯುತ್ತಾರಾ ಎಂಬುವುದನ್ನು ಕಾದುನೋಡಬೇಕಾಗಿದೆ.