ಪಾವಗಡ: ಮಂಡಲ ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾ ವತಿಯಿಂದ ಪದೇ ಪದೇ ಆರ್.ಎಸ್.ಎಸ್. ಮತ್ತು ಬಿಜೆಪಿ ಹಾಗೂ ನಮ್ಮ ಪ್ರದಾನ ಮಂತ್ರಿ ಮೋದಿ ವಿರುದ್ಧವಾಗಿ ನಾಲಿಗೆ ಹರಿ ಬಿಡುತ್ತಿರುವ ದುರಹಂಕಾರಿ ಸಿದ್ದರಾಮಯ್ಯನ ವಿರುದ್ಧ ಮಂಡಲ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಡಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಚಡ್ಡಿ ಗಳನ್ನು ಶೇಖರಣೆ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಜಿಲ್ಲಾ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರು ಮುರಳಿ, ಮಂಡಲ ಉಪಾಧ್ಯಕ್ಷರು ಶಿವಲಿಂಗಪ್ಪ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಎಸ್.ಸಿ. ಮೋರ್ಚಾ ಉಪಾಧ್ಯಕ್ಷರು ಶಂಕರ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಾಬು, ಮತ್ತು ಪದಾಧಿ ಕಾರಿಗಳು ಹಾಗೂ ಓಬಿಸಿ ಮೋರ್ಚಾ ಅಧ್ಯಕ್ಷರು ಹನುಮಂತ ರೆಡ್ಡಿ, ಯುವ ಮೋರ್ಚಾ ಅಧ್ಯಕ್ಷರು ಮಧು, ಮಾಧ್ಯಮ ಸಹ ಪ್ರಮುಖ್ ಪ್ರಸನ್ನ ಕುಮಾರ್ ಮುಖಂಡರಾದ ಶಿವ ಪ್ರಸಾದ್, ಕೃಷ್ಣ ಮೂರ್ತಿ, ಚಿರಂಜೀವಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.