ವಿಶ್ವವಾಣಿ ಕ್ಲಬ್ ಹೌಸ್ ಸಂವಾದ 57
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ತಜ್ಞ, ವೈದ್ಯರಿಂದ ಅಂಗಾಂಗ ದಾನದ ಬಗ್ಗೆ ಮಾಹಿತಿ
ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅಂಗಾಂಗ ದಾನದ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅನೇಕ ತಜ್ಞರು, ವೈದ್ಯರು ಭಾಗವಹಿಸಿದ್ದರು. ವಿಶ್ವವಾಣಿ ಕ್ಲಬ್‌ಹೌಸ್ ವೇದಿಕೆ ಜನರಲ್ಲಿ ಅಂಗಾಂಗ ದಾನದ ಮಹತ್ವವನ್ನು ಮೂಡಿಸುವ ಬಹುಮುಖ್ಯ ವೇದಿಕೆಯಾಗಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿಶ್ವವಾಣಿ ಮತ್ತು ವಿಶ್ವೇಶ್ವರ ಭಟ್ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಜ್ಞ ವೈದ್ಯರಾದ ಬೆಲ್ಲದ್ ಅವರು ಮಾತನಾಡಿ, ಈವರೆಗೆ ಅಂಗಾಂಗ ದಾನ ಮಾಡಿದ ಕುಟುಂಬಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶೇ.50 ರಷ್ಟು ಜನ ಮಿದುಳಿಗೆ ಆದ ಗಾಯದಿಂದ ಪ್ರಾಣ ಬಿಡುತ್ತಾರೆ. ಈ ವೇಳೆ ಅಂಗಾಂಗ ದಾನ ಮಾಡಿದರೆ, ಒಬ್ಬ ವ್ಯಕ್ತಿ ಕನಿಷ್ಠ ಎಂಟು ಜನರ ಜೀವ ಉಳಿಸಬಹುದು. ಇದಕ್ಕಾಗಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡ ಬೇಕಿದೆ. ಕೆಲವರಲ್ಲಿ ಜೀವ ಇದ್ದಾಗಲೇ ಅಂಗಾಂಗ ತೆಗೆದುಕೊಳ್ಳುತ್ತಾರೆ ಎಂಬ ಭಾವನೆ ಇದೆ. ಇದನ್ನು ಹೋಗಲಾಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ಪಾಶ್ಚಾತ್ಯ ದೇಶಗಳಲ್ಲಿ ಪ್ರತಿ 10 ಲಕ್ಷಕ್ಕೆ 37 ಜನರು ಅಂಗಾಂಗ ದಾನ ಮಾಡುತ್ತಾರೆ. ನಮ್ಮ ದೇಶದಲ್ಲಿ ಇದರ ಪ್ರಮಾಣ ಆರಂಭದಲ್ಲಿ 0.3 ಇದ್ದದ್ದು, ಈಗ ಮಿಲಿಯನ್‌ಗೆ ಶೇ.3ರಷ್ಟು ಆಗಿದೆ. ಕಿಡ್ನಿ, ಲಿವರ್, ಹೃದಯದ ಕಸಿ ನಡೆಯುತ್ತಿವೆ. ರಾಜ್ಯದಲ್ಲಿ ಇತ್ತೀಚೆಗೆ ಇಂತಹ ಪ್ರಯತ್ನಗಳಾಗುತ್ತಿವೆ. ಸರಿಯಾದ ಪ್ರಮಾಣದಲ್ಲಿ ಅಂಗಾಂಗ ದಾನ ಮಾಡಿದ್ದೇ ಆದರೆ, ಪ್ರತಿ ವರ್ಷ ಐದು ಲಕ್ಷ ಜನರಿಗೆ ಮರುಜೀವ ನೀಡಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ 2019ರಲ್ಲಿ ನ್ಯಾಷನಲ್ ಆರ್ಗನ್ ಟ್ರಾನ್ಸಪ್ಲಾಂಟ್ ಜಾರಿಗೆ ತಂದಿದೆ. ಅದನ್ನು ಜಾರಿಗೆ ತರುವ ಕಾರ್ಯಕ್ರಮವನ್ನು ರಾಜ್ಯ ಸರಕಾರ ಹಮ್ಮಿಕೊಳ್ಳುತ್ತಿದೆ. ಗರ್ಭಾಶಯ ದಾನ, ಚರ್ಮದ ದಾನ, ಮೂಳೆ ಮಜ್ಜೆಯನ್ನು ದಾನ ಮಾಡುವ ಪುಣ್ಯದ ಕೆಲಸ ನಡೆಯುತ್ತಿದೆ. ಇದಕ್ಕೆ ಸಹಕಾರ ಕೊಡಬೇಕಿದೆ. ಅಂಗಾಂಗ ದಾನದಿಂದ ಎಷ್ಟೋ ಜನರಿಗೆ ಜೀವದಾನ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಬಗ್ಗೆ ಅರಿವು ಹೆಚ್ಚಾಗುತ್ತಿದ್ದು, ಕಳೆದ ಐದು ವರ್ಷಗಳ ಅವಽಯಲ್ಲಿ ಸುಮಾರು ೧೧೮ ಜನರು ಅಂಗಾಂಗ ದಾನ ಮಾಡಿ ಜೀವನ ಸಾರ್ಥ ಕತೆ ಮರೆದಿದ್ದಾರೆ. ಇದು ಮತ್ತಷ್ಟು ಹೆಚ್ಚಾಗಬೇಕು. ಅಂಗಾಂಗ ದಾನ ಮಾಡುವುದರ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳನ್ನು ನಾವೆಲ್ಲರೂ ಕೂಡಿ ಮಾಡಬೇಕಿದೆ ಎಂದು ತಿಳಿಸಿದರು.
ಅಂಗಾಂಗ ದಾನದ ವಿಧಾನ: ಅಂಗಾಂಗ ದಾನದ ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಡಾ.ಶಶ್ರೂಷ ಅವರು, ಅಂಗಾAಗ ದಾನವನ್ನು ಬದುಕಿರುವವರು ವಾಗ್ದಾನ ಮಾಡಬಹುದು ಅಥವಾ ಮಿದುಳು ನಿಷ್ಕಿçಯವಾದ ನಂತರ ಮಾಡಬಹುದು. ಹೃದಯ ನಿಷ್ಕ್ರಿಯವಾದಾಗಲೂ ಅಂಗಾಂಗ ದಾನ ಮಾಡಬಹುದು. ಭಾರತ ಸರಕಾರ ಈ ಬಗ್ಗೆ ಒಂದು ಸಮರ್ಪಕ ಕಾನೂನು ತಂದಿದೆ. ಇದರ ಅನುಗುಣ ವಾಗಿ ಯೇ ಎಲ್ಲರೂ ನಡೆದುಕೊಳ್ಳಬೇಕು. ಬದುಕಿದ್ದಾಗ ಅಂಗಾಂಗ ದಾನ ಮಾಡಲು ಸಂಬಂಧಿಕರೇ ಆಗಬೇಕು. ಆದರೆ, ಸಾವಿನ ನಂತರ ಅಂಗಾಂಗ ದಾನ ಮಾಡಲು ಯಾರೂ ಬೇಕಾದರೂ ಮಾಡಬಹುದು ಎಂದು ತಿಳಿಸಿದರು.
ಮಿದುಳು ನಿಷ್ಕಿçಯವಾದರೂ, ಕುತ್ತಿಗೆಯ ಕೆಳಗಿನ ಎಲ್ಲ ಅಂಗಗಳು ಕೆಲಸ ಮಾಡುತ್ತಿರುತ್ತವೆ. ಅದರೆ ಅವರು ಕೆಲವು ಗಂಟೆ ಮಾತ್ರ ಬದುಕಿರುತ್ತಾರೆ. ಈ ಪ್ರಕ್ರಿಯೆಗೆ ಮಿದುಳು ನಿಷ್ಕಿçಯ ವಾಗಿದೆ ಎಂದು ಘೋಷಣೆ ಮಾಡಲು ಒಂದು ಪ್ಯಾನೆಲ್ ಇರುತ್ತದೆ. ಅದರಲ್ಲಿ ಅರಿವಳಿಕೆ ತಜ್ಞ, ನರರೋಗ ತಜ್ಞ, ಫಿಸಿಶಿಯನ್ ಸೇರಿ ನಾಲ್ವರು ವೈದ್ಯರು ಇರುತ್ತಾರೆ. ಎರಡು ಬಾರಿ ಮೆದುಳು ನಿಷ್ಕಿçಯಗೊಂಡಿರುವ ಬಗ್ಗೆ ಈ ವೈದ್ಯರು ತಪಾಸಣೆ ಮಾಡುತ್ತಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಯಾವ ಠಾಣೆಯ ವ್ಯಾಪ್ತಿಗೆ ಮಾಹಿತಿ ನೀಡಲಾಗುತ್ತದೆ. `ಜೀವ ಸಾರ್ಥಕತೆ’ ತಂಡ ಮಾತ್ರವೇ ಯಾವ ಅಂಗ ಯಾವ ಆಸ್ಪತ್ರೆಗೆ ಹೋಗಬೇಕು ಎಂಬುದನ್ನು ನಿರ್ಧಾರ ಮಾಡುತ್ತದೆ.
ಸಂಬಂಧಪಟ್ಟ ಎಲ್ಲ ವೈದ್ಯರು ಆಸ್ಪತ್ರೆಗೆ ಬಂದು, ಪ್ರತಿ ಅಂಗಾಂಗ ತೆಗೆದು ಅದನ್ನು ಸಂಗ್ರಹ ಮಾಡಿ ವೈಜ್ಞಾನಿಕ ವಿಧಾನದಲ್ಲಿ ಇರಿಸಲಾಗುತ್ತದೆ. ನಂತರ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಆನಂತರವೇ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ 30-40ರವರೆಗೆ ಸಿಬ್ಬಂದಿ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಂಗಾಂಗ ದಾನಕ್ಕೆ ಧರ್ಮದ ಹಂಗಿಲ್ಲ: ಕೆಲವು ಧರ್ಮದವರು ಅಂಗಾಂಗ ದಾನ ಮಾಡಬಾರದು. ಇದು ನಮ್ಮ ಧರ್ಮಕ್ಕೆ ವಿರುದ್ದ, ಅಂಗಾಂಗ ಕಸಿ ಮಾಡುವುದರಿಂದ ನಮ್ಮವರು ಸ್ವರ್ಗಕ್ಕೆ ಸೇರುವುದಿಲ್ಲ ಎಂಬ ಭಾವನೆ ಹೊಂದಿದ್ದಾರೆ. ಇದೆಲ್ಲವೂ ಸುಳ್ಳು. ಯಾವ ಧರ್ಮದಲ್ಲಿಯೂ ಈ ಬಗ್ಗೆ ಬರೆದಿಲ್ಲ. ಬೌದ್ಧ ಧರ್ಮದ ಜನರಲ್ಲಿ ಅಂಗಾಂಗ ದಾನ ಮಾಡುವುದು ಪುಣ್ಯದ ಕೆಲಸ ಎಂಬ ಭಾವನೆಯಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ದೇಶದಲ್ಲಿ ಅತಿಹೆಚ್ಚು ಮಂದಿ ಅಂಗಾಂಗ ದಾನ ಮಾಡುತ್ತಾರೆ. ಕಳೆದ ಕೆಲವು ವರ್ಷಗಳ ಹಿಂದೆ ಶ್ರೀಲಂಕಾ ದೇಶದಿಂದಲೇ ವಿಶ್ವದ ಬಹುತೇಕ
ದೇಶಗಳಿಗೆ ಅಂಗಾಂಗ ರವಾನೆಯಾಗುತ್ತಿತ್ತು.
ಫ್ರಾನ್ಸ್’ನಂತಹ ದೇಶಗಳಲ್ಲಿ ಅಂಗಾಂಗ ದಾನ ಮಾಡುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ. ನಮ್ಮ ದೇಶದಲ್ಲಿ ಅಂಗಾಂಗ ದಾನ ಮಾಡಲು ಮೊದಲೇ ಬರೆದುಕೊಡಬೇಕು. ಆದರೆ, ಅಲ್ಲಿ ಅಂಗಾಂಗ ದಾನ ಮಾಡಲು ಒಪ್ಪದವರು ಮಾತ್ರವೇ ಮೊದಲೇ ಬರೆದುಕೊಡುವ ವ್ಯವಸ್ಥೆಯಿದೆ. ಹೀಗಾಗಿ, ಆ ದೇಶಗಳಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಅಧಿಕವಾಗಿದೆ ಎಂಬುದು ಎಲ್ಲ ತಜ್ಞರ ಒಟ್ಟಾರೆ ಅಭಿಪ್ರಾಯವಾಗಿತ್ತು.
ಅಂಗಾಂಗ ರವಾನೆ ಪ್ರಕ್ರಿಯೆ ಹೇಗೆ ?: ಡಾ. ಕಿರಣ್ ಕುಮಾರ್ ಅವರು ಮಾತನಾಡಿ, ರಾಜ್ಯದಲ್ಲಿ ಜೀವಸಾರ್ಥಕತೆ 2017ರಿಂದ ಜಾರಿಗೆ ಬಂದಿದೆ. ಎಸ್ ಒಟಿಎ ಒಂದು ಸೊಸೈಟಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಂಗಾAಗ ದಾನದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಪ್ರಾಽಕಾರ, ಪೊಲೀಸರು, ಸಂಚಾರ ಪೊಲೀಸರು, ಆಸ್ಪತ್ರೆ ಸಿಬ್ಬಂದಿ, ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ತಂಡವಾಗಿ ಕೆಲಸ ಮಾಡಬೇಕಿದೆ. ಎಲ್ಲರೂ ಹಗಲು ರಾತ್ರಿ ಕೆಲಸ ಮಾಡಬೇಕಾಗುತ್ತದೆ. ಸಮನ್ವಯಕಾರರ ಕೆಲಸ ಇಲ್ಲಿ ಜಾಸ್ತಿ ಇರುತ್ತದೆ. ವ್ಯಕ್ತಿಯ ಕುಟುಂಬಸ್ಥರನ್ನು ಒಪ್ಪಿಸುವುದು
ಒಂದು ದೊಡ್ಡ ಸವಾಲು. ಅಡ್ವೈಸರಿ ಕಮಿಟಿಯಲ್ಲಿ ಕೆಲವು ಪರೀಕ್ಷೆಗಳಾಗುತ್ತವೆ. ಆಗ ಆ ಅಂಗವನ್ನು ಪಡೆಯಬಹುದಾ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ.
ಕಣ್ಣಿನ ದಾನ ಕೂಡ ಚಾಲ್ತಿಯಲ್ಲಿದೆ, ರಾಜ್ ಕುಮಾರ್ ಅವರು ಕಣ್ಣು ದಾನ ಮಾಡಿದ ನಂತರ ಕಣ್ಣು ದಾನ ಮಾಡುವವರ ಸಂಖ್ಯೆ ಹೆಚ್ಚಾಯಿತು. ವಿಜಯ್ ಸತ್ತ ನಂತರ ಅನೇಕರು ಅಂಗಾAಗ ದಾನ ಮಾಡುತ್ತಿದ್ದಾರೆ. ಹೀಗಾಗಿ, ಜನರಿಗೆ ಹೆಚ್ಚು ಪ್ರಚಾರ ಸಿಗಬೇಕು. ಜನರಿಗೆ ಈ ಬಗ್ಗೆ ತಿಳಿವಳಿಕೆ ನೀಡಬೇಕಿದೆ. 2021ರಲ್ಲಿ ಈವರೆಗೆ 39 ಅಂಗಾಂಗ ದಾನದ ಪ್ರಕ್ರಿಯೆಗಳು ನಡೆದಿವೆ ಎಂದು ತಿಳಿಸಿದರು.
ನೇತ್ರದಾನ ಮಾಡಲು ಮುಖ್ಯ ಪ್ರೇರಣೆಯಾಗಿದ್ದು ಡಾ.ರಾಜ್ ಕುಮಾರ್
? ನಟ ಸಂಚಾರಿ ವಿಜಯ್ ಪ್ರಕರಣದ ನಂತರ ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಳ
? ಮುಂದಿನ ದಿನಗಳಲ್ಲಿ ಕಾಲು, ಕೈ ದಾನವೂ ಪ್ರಚಲಿತಕ್ಕೆ ಬರಬಹುದು
? ರಾಜ್ಯದಲ್ಲಿ ಈವರೆಗೆ 118 ಜನರು ಅಂಗಾಂಗ ದಾನ ಮಾಡಿದ್ದಾರೆ
? ಸಿಎಂ ಬೊಮ್ಮಾಯಿ ಅಂಗಾಂಗ ದಾನಕ್ಕೆ ಒಪ್ಪಿ ಸಹಿ ಮಾಡಿದ್ದಾರೆ.
? ಬಿಎಸ್‌ವೈ ನೇತೃತ್ವದ ಇಡೀ ಸಂಪುಟ ನೇತ್ರದಾನ ಮಾಡಲು ಸಹಿ ಮಾಡಿತ್ತು