Monday, 14th October 2024

ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ

ಸಿಂಧನೂರು : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು ನಗರದ ಪೊಲೀಸ್ ಇಲಾಖೆ ವಿವಿಧ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಬ್ರಹ್ಮಕುಮಾರಿ ಪಾರ್ವತಿ ಅಕ್ಕ ಹಾಗೂ ಬಿ.ಕೆ ಸೀಮಾ ಅಕ್ಕನವರ ನೇತೃತ್ವದಲ್ಲಿ ಅನೇಕರಿಗೆ ರಕ್ಷಾ ಬಂಧನದ ಬಗ್ಗೆ ಅರಿವು ಮೂಡಿಸಿದರು.

ಈ ವೇಳೆ ಬ್ರಹ್ಮಕುಮಾರಿ ವಿದ್ಯಾಲಯದ ಪಾರ್ವತಿ ಅಕ್ಕನವರು ಮಾತನಾಡಿ ಸೃಷ್ಟಿಕರ್ತ ಭಗವಂತನ ಸಂದೇಶಗಳನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳ ಬೇಕು ಹಾಗೂ ನಮ್ಮ ಪರಂಪರೆಯ ಸಂಸ್ಕೃತಿ ಬಗ್ಗೆ ಅರಿತುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸೋದರ-ಸೋದರಿಯರ ಸಂಬಂಧವನ್ನು ಕೈಗೆ ರಾಖಿ ಕಟ್ಟುವುದರ ಮೂಲಕ ಮತ್ತಷ್ಟು ಸಂಬಂಧ ಗಳನ್ನು ಗಟ್ಟಿಯಾಗಿರುವಂತೆ ಸಾರಾಂಶವನ್ನು ತಿಳಿಸಿ ಕೊಡಬೇಕು ಎಂದರು. ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸೀಮಾ ಅಕ್ಕನವರು ಡಿವೈಎಸ್ಪಿ ವೆಂಕಟಪ್ಪ ನಾಯಕ್ ಸೇರಿದಂತೆ ಇತರರು ಇದ್ದರು.