ನಾಯಕತ್ವ ಬದಲಾವಣೆಗೆ ಬ್ರೇಕ್
ಪುನಾರಚನೆ ವೇಳೆ ಹಿರಿಯರಿಗೆ ಕೊಕ್
ಇಂದು ದೆಹಲಿಗೆ ಸಿಎಂ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಬಹುದಿನಗಳಿಂದ ಕೇಳಿ ಬರುತ್ತಿದ್ದ ಸಚಿವ ಸಂಪುಟ ಪುನಾರಚನೆಗೆ ಕಾಲ ಸನ್ನಿಹಿತವಾಗುತ್ತಿದ್ದು, ಈ ನಿಟ್ಟಿನಲ್ಲಿ ಶುಕ್ರವಾರ ದೆಹಲಿಯಲ್ಲಿ ಚಟುವಟಿಕೆಗಳು ಗರಿಗೆದರಲಿವೆ.
ಈ ತನಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧಿ ಬಣ ನಾಯಕತ್ವ ಬದಲಾವಣೆ ಕೂಗು ಹಾಕು ತ್ತಿದ್ದರೆ, ಯಡಿಯೂರಪ್ಪ ಪಾಳಯದಲ್ಲಿ ಮಾತ್ರ ಆಗಾಗ ಸಚಿವ ಸಂಪುಟ ಪುನಾರಚನೆ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಪಕ್ಷದ ವರಿಷ್ಠರೇ ಒಲವು ತೋರಿದ್ದು, ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ದೆಹಲಿಗೆ ತೆರಳುತ್ತಿದ್ದಾರೆ.
ಈ ಬೆಳವಣಿಗೆಯೊಂದಿಗೆ ನಾಯಕತ್ವ ಬದಲಾವಣೆ ವಿಚಾರ ಸದ್ಯಕ್ಕೆ ನೇಪತ್ಯಕ್ಕೆ ಸರಿದಂತಾಗಿದ್ದು, ಯಡಿಯೂರಪ್ಪ ವಿರೋಧಿ ಬಣಕ್ಕೆ ಇದರಲ್ಲಿ ಹಿನ್ನಡೆ ಯಾದಂತಾಗಿದೆ ಎಂದು ಆ ಬಣದ ಕೆಲವರೇ ಹೇಳಿದ್ದಾರೆ. ಇದನ್ನರಿದ ಯಡಿಯೂರಪ್ಪ ಅವರು ದೆಹಲಿಯಲ್ಲಿರುವ ರಾಜ್ಯದ ಕೇಂದ್ರ ಸಚಿವರಿಗೆ ಶುಭ ಕೋರುವುದು ಮತ್ತು ಮೇಕೆದಾಟು ವಿಚಾರವಾಗಿ ಚರ್ಚೆ ನಡೆಸುವ ನೆಪದಲ್ಲಿ ದೆಹಲಿಗೆ ತೆರಳಿzರೆ. ಇದೇ ವೇಳೆ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚಿಸಿ ಅನುಮತಿ ಪಡೆದು ಬರಲಿzರೆ ಎನ್ನಲಾಗಿದೆ. ಇದಕ್ಕೂ ಮುನ್ನ ಅನುಮತಿ ಕೋರಿಕೆ ಸಲ್ಲಿಸಿದ್ದ ಯಡಿಯೂರಪ್ಪ ಅವರಿಗೆ ವರಿಷ್ಠರು ಮಂಗಳವಾರ ರಾತ್ರಿಯೇ ಗ್ರೀನ್ಸಿಗ್ನಲ್ ನೀಡಿದ್ದು, ಆನಂತರದಲ್ಲಿ ಸಂಪುಟ ಪುನಾರಚನೆ ಚರ್ಚೆಗೆ ಸಂಬಂಧಿಸಿದ ಪ್ರಸ್ತಾಪಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಹಾಗಾದರೆ ನಾಯಕತ್ವ?: ಯಡಿಯೂರಪ್ಪ ವಿರೋಽ ಬಣದ ಕೆಲವು ಶಾಸಕರ ಪ್ರಕಾರ ಹೇಳುವುದಾದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ
ಮಾತನಾಡಿದವರು ಸಚಿವ ಯೋಗೇಶ್ವರ್ ಹಾಗೂ ಶಾಸಕ ಯಾತ್ನಾಳ್ ಮಾತ್ರ. ಉಳಿದಂತೆ ಯಾವೊಬ್ಬ ಶಾಸಕರೂ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಮೇಲೆ ಒತ್ತಡ ಹೇರಿಲ್ಲ. ಅಷ್ಟೇ ಏಕೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದು ನಾಯಕತ್ವ ವಿಚಾರವಾಗಿ ಅಭಿಪ್ರಾಯ ಸಂಗ್ರಹ ಮಾಡುವುದಕ್ಕೂ ಅಲ್ಲ.
ಹೀಗಾಗಿ ಅವರನ್ನು ಭೇಟಿ ಮಾಡಿದ್ದ ಬಹುತೇಕ ಶಾಸಕರು ಕೇಳಿದ್ದು ಸಂಪುಟದಲ್ಲಿ ಪ್ರಾತಿನಿಧ್ಯವನ್ನು ಮಾತ್ರ. ಹೀಗಾಗಿ ನಾಯಕತ್ವ ಬದಲಾವಣೆ ವಿಚಾರವಾಗಿ
ಹೈಕಮಾಂಡ್ ಮೇಲೆ ಯಾವುದೇ ಪ್ರಬಲ ಒತ್ತಡವೇನು ಬಿದ್ದಿಲ್ಲ. ಬದಲಾಗಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಲ್ಲಿಸಿರುವ ವರದಿಯಲ್ಲೂ ನಾಯಕತ್ವ ಬದಲಾವಣೆ ಅಂಶಗಳಿಲ್ಲ. ಹೀಗಾಗಿ ವರಿಷ್ಠರು ನಾಯಕತ್ವ ಬದಲಾವಣೆ ಬದಲು ಸಂಪುಟ ಪುನಾರಚನೆ ಮಾಡಿ ಪಕ್ಷಕ್ಕೆ ಹೊಸ ವರ್ಚಸ್ಸು ನೀಡುವುದು ಹಾಗೂ ಈ ಕಾರ್ಯಕ್ಕೆ ಯಡಿಯೂರಪ್ಪ ಅವರನ್ನೇ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್ಎಸ್ಎಸ್ ಮೂಲದವರಿಗೆ ಆದ್ಯತೆ
ಇದೇ ವೇಳೆ ಶಾಸಕ ಪೂರ್ಣಿಮಾ, ಸುನೀಲ್ ಕುಮಾರ್ ಅಥವಾ ರೇಣುಕಾಚಾರ್ಯ, ರಾಜೂಗೌಡ, ಅಪ್ಪಚ್ಚುರಂಜನ್ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗುವ
ಸಾಧ್ಯತೆ ಇದೆ. ಹಾಗೆಯೇ ಶಾಸಕ ಎಸ್.ಆರ್.ವಿಶ್ವನಾಥ್, ಮುನಿರತ್ನ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದೇ ರೀತಿ ಮೈಸೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲೂ ಕೆಲವು ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅದರಲ್ಲೂ ಸಂಪುಟದಲ್ಲಿ ಸದ್ಯ ಹೊರಗಿನಿಂದ ಬಂದವರೇ ಹೆಚ್ಚಾಗಿದ್ದು, ಈ ಬಾರಿ ಪುನಾರಚನೆಯಲ್ಲಿ ಆರ್ಎಸ್ಎಸ್ ಮೂಲದವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದಕ್ಕಾಗಿ ಕೆಲವು ಹಿರಿಯ ಸಚಿವರಿಗೆ ಕೋಕ್ ನೀಡಿ ಸಂಘಟನೆ ಉಸ್ತುವಾರಿ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
ಸಿ.ಪಿ.ಯೋಗೇಶ್ವರ್ ರಾಜಿ?
ನಾಯಕತ್ವ ಬದಲಾವಣೆಗೆ ವರಿಷ್ಠರಾದ ಮೋದಿ ಮತ್ತು ಅಮಿತ್ ಶಾ ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ವಿರೋಧಿ ಬಣ ತಣ್ಣಗಾಗಿದೆ. ಸಚಿವ ಸಿ.ಪಿ.ಯೋಗೇಶ್ವರ್
ಹೇಳಿದಂತೆ ಫಲಿತಾಂಶ ಈಗಾಗಲೇ ವ್ಯತಿರಿಕ್ತವಾಗಿ ಸಿಕ್ಕಿದ್ದು, ಇದನ್ನು ಸರಿಪಡಿಸಲು ಯತ್ನಾಳ್ ಅವರನ್ನು ದೆಹಲಿಗೆ ಕಳುಹಿಸಲಾಗಿತ್ತು. ಅದು ಕೂಡ ಈಗ ಫಲ ನೀಡಿಲ್ಲ. ಆದರೆ ವಿರೋಧ ಬಣದ ಕೆಲವು ಬೇಡಿಕೆಗಳನ್ನು ಈಡೇರಿಸಲು ವರಿಷ್ಠರು ಸಮ್ಮತಿಸಿzರೆ ಎಂದು ದೆಹಲಿ ಬಿಜೆಪಿ ಕಚೇರಿ ಮೂಲಗಳು ತಿಳಿಸಿವೆ. ಹೀಗಾಗಿ ದೆಹಲಿ ಭೇಟಿ ವೇಳೆ ವರಿಷ್ಠರು ಯಡಿಯೂರಪ್ಪ ಅವರಿಗೆ ವಿರೋಧಿ ಬಣದ ಕೆಲವು ಬೇಡಿಕೆಗಳನ್ನು ಈಡೇರಿಸುವ ಸೂಚನೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಯಲ್ಲಿ ಸಿ.ಪಿ.ಯೋಗೇಶ್ವರ್ ಅವರು ಸದ್ಯ ಯಡಿಯೂರಪ್ಪ ಅವರೊಂದಿಗೆ ಒಂದು ಹಂತಕ್ಕೆ ರಾಜಿಯಾಗಿದ್ದು, ಸಂಪುಟ ಪುನಾರಚನೆ ವೇಳೆ ಅವರಿಗೆ ರಾಮನಗರ ಉಸ್ತುವಾರಿ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.