Friday, 13th December 2024

ಉಚಿನ ಆರೋಗ್ಯ ತಪಾಸಣಾ ಶಿಬಿರ

ಕೊಲ್ಹಾರ: ಪಟ್ಟಣದ ಪಟೇಲ್ ಆಸ್ಪತ್ರೆಯಲ್ಲಿ ನಾಳೆ ದಿನಾಂಕ 4 ರ ರವಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳ ಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಉಸ್ಮಾನ್ ಪಟೇಲ್ ಖಾನ್ ಹೇಳಿದರು.

ಪಟ್ಟಣದ ಪಟೇಲ್ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರಗೆ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಈ ಶಿಬಿರದಲ್ಲಿ ನುರಿತ ತಜ್ಞರುಗಳಾದ ಡಾ॥ಕಿರಣ ಚೋಳಕಿ ಎಂಬಿಬಿಎಸ್ ಎಮ್.ಡಿ. ಡಾ॥ಅಬ್ದುಲ್ ರಹಮಾನ್ ಖಾನ್ ಎಂಬಿಬಿಎಸ್ ಎಮ್ಎಸ್ ಡಾ॥ಫಾರುಕ ಬಗಲಿ ಎಂಬಿಬಿಎಸ್ ಎಮ್.ಡಿ ಇವರಿಂದ ಇಸಿಜಿ, ಶುಗರ್, ಬಿಪಿ ತಪಾಸಣೆ, ಮಕ್ಕಳ ಹಾಗೂ ಚಿಕ್ಕಮಕ್ಕಳ ತಪಾಸಣೆ ಹಾಗೂ ಕಣ್ಣಿನ ತಪಾಸಣಾ ಶಿಬಿರ ಸಂಪೂರ್ಣ ಉಚಿತವಾಗಿ ಹಮ್ಮಿಕೊಂಡಿದ್ದು ಸಾರ್ವಜನಿಕರು ಈ ಶಿಬಿರದ ಸದು ಪಯೋಗ ಪಡೆದುಕೊಳ್ಳಬೇಕು ಹಾಗೂ ಮುಂಚಿತವಾಗಿ ಹೆಸರು ನೊಂದಾಯಿಸಲು 9590747736/6361943225 ಈ ಸಂಖ್ಯೆಗಳಿಗೆ ಕರೆ ಮಾಡಿ ಹೆಸರು ನೊಂದಾ ಯಿಸ ಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಯ್ಯೂಬ ಖಾನ್ ಪಠಾಣ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು.