Thursday, 12th December 2024

ನಗರಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ಪ್ರಚಾರ

ಹೊಸಪೇಟೆ: ಹೊಸಪೇಟೆ ನಗರಸಭೆ 7ನೇ ವಾಡ್೯ನಲ್ಲಿ ಮಂಗಳವಾರ ಚುನಾವಣೆ ಪ್ರಚಾರ ಭರ್ಜರಿಯಾಗಿ ನಡೆಯಿತು.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ವಾಡ್೯ನ ವಿವಿಧ ಪ್ರದೇಶ ಗಳಲ್ಲಿ ತೆರಳಿ ಮತಯಾಚಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಕನಕಮ್ಮ ವಾಡ್೯ನ ವಿವಿಧ ಓಣಿಗಳಲ್ಲಿ ತೆರಳಿ ಕೈಮುಗಿದು ಕುಡಿವ ನೀರು, ಬೀದಿ ದೀಪಗಳ ಸಮಸ್ಯೆ ಬಗೆಹರಿಸುವ ಜೊತೆಗೆ ಸದಾ ಸ್ಥಳೀಯ ಜನರೊಂದಿಗೆ ಇರುವೆ ಎನ್ನುವ ಮೂಲಕ ಮತ ಯಾಚಿಸಿದರೆ, ಬಿಜೆಪಿ ಅಭ್ಯರ್ಥಿ ಕೋಮಲ ಕೃಷ್ಣಾ ನಾಯ್ಕ್ ಟೀಚರ್ಸ್ ಕಾಲೋನಿ, ಪಾಂಡುರಂಗ ಕಾಲೋನಿ ತೆರಳಿ ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು ಅಧಿಕಾರಕ್ಕೆ ಬಂದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕೆ ಸಹಕಾರಿಯಾಗಲಿದೆ ಈ ಹಿನ್ನೆಲೆಯಲ್ಲಿ ಮತ ನೀಡಿ ಎಂದು ಮತಯಾಚನೆ ನಡೆಸಿದರು.

ಕಾಂಗ್ರೆಸ್ ಮುಖಂಡರಾದ ಅಂಜಿ, ಅಮಿರ್, ಬಿಜೆಪಿ ಮುಖಂಡರಾದ ಕೃಷ್ಣಾ ನಾಯ್ಕ್, ಸೋಮಶೇಖರ್ ನಾಯ್ಕ್, ವಡಕಪ್ಪ, ಉದಯಕುಮಾರ್, ಚಿದಾನಂದ, ಗೋಪಾಲ್, ಗೋವಿಂದ, ಶಿವರಾಮ್ ಗುಜ್ಜಲ್ ಮುಂತಾದವರು ಇದ್ದರು.