Sunday, 6th October 2024

ಉ.ಕ.ಅಭಿವೃದ್ಧಿಗೆ ಹಿನ್ನಡೆಯಾದರೆ ಸಹಿಸುವುದಿಲ್ಲ

ಆಲಮಟ್ಟಿ: ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಗೆ ಹಿನ್ನಡೆಯಾದಾಗಲೊಮ್ಮೆ ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತುವುದು ನನ್ನ ನಿಲುವಾಗಿದೆ ಎಂದು ಅರಣ್ಯ ಮತ್ತು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದರು.

ಮಂಗಳವಾರ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದರು. ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿದಾಗ ಧ್ವನಿ ಎತ್ತುವದು ನನ್ನ ಸ್ವಭಾವ ಈ ಭಾಗದ ಶಾಸಕರು, ಸಚಿವರುಗಳು ನನ್ನ ಧ್ವನಿಗೆ ಬೆಂಬಲಿ ಸುತ್ತಾರೆ ಇದರಲ್ಲಿ ಸಂಶಯವಿಲ್ಲ. ಸ್ಪಂಧಿಸದೇ ಇದ್ದರೂ ನಾನು ಮಾತ್ರ ಉ.ಕ. ಅಭಿವೃದ್ಧಿಗೆ ಹಿನ್ನಡೆಯಾದರೆ ನಾನು ಸಹಿಸುವುದಿಲ್ಲ ಎಂದರು.

ಸಿ.ಎಂ.ಆಶೆ; ತಾವು ಈಗಾಗಲೇ ೯ಬಾರಿ ಶಾಸಕನಾಗಿದ್ದೇನೆ. ನನಗೀಗ ೬೦ವರ್ಷ ವಯಸ್ಸಾ ಗಿದೆ. ಪಕ್ಷದ ನಿಯಮದಂತೆ ಇನ್ನೂ ೧೫ ವರ್ಷ ಶಾಸಕನಾಗುತ್ತೇನೆ. ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹುಚ್ಚರು: ಇನ್ನೂ ಚುನಾವಣೆ ಆಗಿಲ್ಲ, ಜನಾಶೀರ್ವಾದವನ್ನೂ ಮಾಡಿಲ್ಲ, ಆದರೂ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಹೊರಟಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್ ಒಡೆದು ಚೂರು ಚೂರಾಗಲಿದೆ. ಬಿಜೆಪಿಯು ಸದೃಢವಾಗಿದೆ. ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಹೇಳಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಲೊಮ್ಮೆ ಧ್ವನಿ ಎತ್ತುತ್ತೇನೆ. ಇದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ.