Thursday, 12th December 2024

ಕೋವಿಡ್ ಕಷ್ಟ ಕಾಣದವರಿಗೆ ಕೆಆರ್‌ಎಸ್‌ ಕಚ್ಚಾಟ ಏಕೆ ?

ಸುಮಲತಾ, ಎಚ್‌ಡಿಕೆ ಸಮರದ ಹಿಂದೆ ರಾಜಕೀಯ ವಾಸನೆ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡ ಭೀಕರ ಕೋವಿಡ್ ಸಂಕಷ್ಟದಲ್ಲಿ ಕಾಣದ ಸಂಸದೆ, ಮಾಜಿ ಮುಖ್ಯಮಂತ್ರಿಗೆ ಕೆಆರ್‌ಎಸ್ ಕಚ್ಚಾಟವೇಕೆ ಮುಖ್ಯ ವಾಗಿದೆ? ಎರಡು ವರ್ಷಗಳ ಹಿಂದೆ ನಡೆದ ಉಪ ಚುನಾವಣೆ ನಂತರ ಇತ್ತ ಸುಳಿಯದವರ ಸಂಸದೆ ಸುಮಲತಾ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಇದ್ದಕ್ಕಿದ್ದಂತೆ ಬಂದು ಕೆಆರ್‌ಎಸ್ ಕಚ್ಚಾಟಕ್ಕೆ ಇಳಿದಿರುವ ಅಗತ್ಯವಾದರೂ ಏನಿದೆ? ಇದರಿಂದ ಮಂಡ್ಯ ಜನತೆಗೆ ಏನಾದರೂ ಲಾಭ ಇದೆಯೇ ಎನ್ನುವ ಆಕ್ರೋಶದ ಪ್ರಶ್ನೆಗಳು ಮತದಾನ ಮಾಡಿ ಪಶ್ಚಾತಾಪ ಪಡುತ್ತಿರುವ ಮಂಡ್ಯ ಜನರದು.

ಹೌದು.. ರಾಜ್ಯದಲ್ಲಿ ಕ್ರೂರ ಕೋವಿಡ್ ಅಪ್ಪಳಿಸಿ  ದಾಗ ಇಡೀ ಮಂಡ್ಯ ಜಿಯ ಜನತೆ ಸಾವು, ನೋವುಗಳಿಂದ ತತ್ತರಿಸಿದರು. ಹಾಸಿಗೆ, ಚಿಕಿತ್ಸೆ, ಆಕ್ಸಿಜನ್ ಇಲ್ಲದೆ
ಸೋಂಕಿತರು ಬೀದಿಗಳಲ್ಲಿ ಸಾಯುವಂತಾಗಿತ್ತು. ಇದರಿಂದ ಮಂಡ್ಯದಲ್ಲಿ ಸುಮಾರು ೧,೧೨೦ಕ್ಕೂ ಹೆಚ್ಚು ಸೋಂಕಿತರು ಉಸಿರು ಚೆಲ್ಲಿದರು. ಆಗ ಸಂಸದೆ ಸುಮಲತಾ ಅವರಾಗಲೀ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಲೀ ಜಿಲ್ಲೆಯ ಕಡೆ ತಲೆ ಹಾಕಲಿಲ್ಲ. ಅಷ್ಟೇ ಏಕೆ? ಲಾಕ್‌ಡೌನ್ ಸಂದರ್ಭದಲ್ಲಿ ಕೂಲಿಯೂ ಸಿಗದೆ ಕಷ್ಟಪಡುತ್ತಿದ್ದಾಗ ಇವರಲ್ಲಿ ಯಾರೊಬ್ಬರೂ ಬಡವರಿಗೆ ಆಹಾರ ಪದಾರ್ಥ ನೀಡುವ ಮತ್ತು ಇತರ ಸಹಾಯ ಮಾಡುವ ಔದಾರ್ಯ ತೋರಿಸಲಿಲ್ಲ.

ಬದಲಾಗಿ ಸ್ಥಳೀಯ ಶಾಸಕರು ಸ್ವಂತ ವೆಚ್ಚದಲ್ಲಿ ಒಂದಷ್ಟು ಸಹಾಯ ಮಾಡಿ ಟೀಕೆ ತಪ್ಪಿಸಿಕೊಳ್ಳಬೇಕಾಯಿತು. ಹೀಗಾಗಿರುವಾಗ ಈಗ ಕೃಷ್ಣರಾಜ ಅಣೆಕಟ್ಟೆಯಲ್ಲಿ ಬಿರುಕು ವಿಚಾರ ಎತ್ತಿಕೊಂಡು ಬೀದಿ ರಂಪಾಟ ಮಾಡುತ್ತಿರುವುದು ಎಷ್ಟು ಸರಿ? ಎಂದು ಕೆಲವು ಜೆಡಿಎಸ್ ಹಾಗೂ ಸುಮಾಲತಾಗೆ ಚುನಾವಣೆಯಲ್ಲಿ ಬೆಂಬಲ ನೀಡಿದ್ದ ಅನೇಕ ಮುಖಂಡರು ಬಹಿರಂಗವಾಗಿಯೇ ಪ್ರಶ್ನೆ ಮಾಡುತ್ತಿದ್ದಾರೆ. ಇದೇ ವಿಚಾರ ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಪಡಸಾಲೆಯಲ್ಲೂ ಚರ್ಚೆ
ನಡೆಯುತ್ತಿದೆ.

ಸಕ್ಕರೆಯಿಂದ ಗಣಿವರೆಗೆ: ಎರಡು ವರ್ಷಗಳಿಂದ ಮುಚ್ಚಿ ಹೋಗಿರುವ ಮೈಷುಗರ್ ಸಕ್ಕರೆ ಕಾರ್ಖಾನೆ ಯನ್ನು ಖಾಸಗೀಕರಣಗೊಳಿಸುವ ವಿಚಾರದಲ್ಲಿ
ಸುಮಲತಾ ಹಾಗೂ ಕುಮಾರಸ್ವಾಮಿ ಬಣದ ನಡುವೆ ಬಿರುಕು ಕಾಣಿಸಿಕೊಂಡಿದ್ದೇ ರಂಪಾಟಕ್ಕೆ ಕಾರಣ. ಅಂದರೆ ಕಾರ್ಖಾನೆಯನ್ನು ಖಾಸಗಿಗೆ ನೀಡಬೇಕೆಂದು ಸುಮಲತಾ ಹೇಳಿದರೆ, ಸರಕಾರವೇ ನಡೆಸಲಿ ಎಂಬುದು ಕುಮಾರಸ್ವಾಮಿ ಅಭಿಪ್ರಾಯ. ಈ ವಿಚಾರದಲ್ಲಿ ಆರಂಭವಾದ ವಿವಾದ ಈಗ ಗಣಿಗಾರಿಕೆಗೆ ಬಂದು ನಿಂತಿದೆ. ಸರಕಾರ ಕಾರ್ಖಾನೆ ಆರಂಭಿಸಲು ಮುಂದೆ ಬಂದರೂ ಇವರಿಬ್ಬರ ಭಿನ್ನಾಭಿಪ್ರಾಯದಿಂದ ಕಾರ್ಖಾನೆ ಆರಂಭವಾಗದೆ ಜಿಲ್ಲೆಯ ಜನತೆ ಉದ್ಯೋಗ
ಕಳೆದುಕೊಳ್ಳುವಂತಾಗಿದೆ ಎನ್ನುವುದು ಕಾಂಗ್ರೆಸ್ ಟೀಕೆ.

ಈ ಮಧ್ಯೆ ಬೆಂಗಳೂರು-ಮೈಸೂರು ಚತುಷ್ಪಥ ರಸ್ತೆ ನಿರ್ಮಾಣ ವಿಚಾರದಲ್ಲೂ ಜೆಡಿಎಸ್ ಮತ್ತು ಸುಮಲತಾ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯವಿರುವು ದರಿಂದ ಕೂಡ ಕಚ್ಚಾಟ ತೀವ್ರಗೊಂಡಿದೆ. ಸುಮಾಲತಾ ಏಜೆಂಟರ ಮೂಲಕ ಡೀಲ್ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರೇ ಆರೋಪಿಸಿ ಕಚ್ಚಾಟಕ್ಕೆ ಉಪ್ಪು ಸುರಿದಿzರೆ. ಈ ಮಧ್ಯೆ, ಗಣಿ ಇಲಾಖೆ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದ್ದು, ಇವರನ್ನು ಉಳಿಸಿಕೊಳ್ಳಲು ಸುಮಲತಾ ಯತ್ನಿಸಿದ್ದಾರೆ. ಇದಕ್ಕೆ
ಸ್ಥಳೀಯರ ವಿರೋಧಗಳೂ ವ್ಯಕ್ತವಾಗಿತ್ತು. ಈ ಸಮಸ್ಯೆ ಬಗೆಹರಿಯದ ಕಾರಣ ಕೆಆರ್‌ಎಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದೂ ಹೇಳಲಾಗಿದೆ. ಅದರಲ್ಲೂ ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ಸಾಮಾನ್ಯ ಹೇಳಿಕೆ ನೀಡುವ ಬದಲು ಬಿರುಕು ಜಗದಲ್ಲಿ ಸುಮಲತಾ ಅವರನ್ನು ಮಲಗಿಸಿ ಎಂದು ನೀಡಿದ್ದ ಹೇಳಿಕೆ ತೀರಾ
ಅವಹೇಳನ ಎನ್ನುವಂತಾಗಿದೆ. ಇದೀಗ ಮಂಡ್ಯದಿಂದ ಹೊರಗೂ ಈ ಬೆಂಕಿ ಹೊತ್ತಿ ಉರಿಯುವಂತಾಗಿದೆ.

ಇದನ್ನೇ ಗುರಾಣಿ ಮಾಡಿಕೊಂಡಿರುವ ಸುಮಲತಾ ಅವರು ಎಚ್‌ಡಿಕೆ ವಿರುದ್ಧ ನಿರಂತರ ದಾಳಿ ನಡೆಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಕುಮಾರಸ್ವಾಮಿ ಅವರು ಸುಮಲತಾ ಅವರನ್ನು ಅ ಸೋಲಿಸಿ ತೀರುತ್ತೇವೆ ಎನ್ನುವ ಸವಾಲನ್ನೂ ಹಾಕಿ ರಾಜಕೀಯ ಕಿಚ್ಚು ತೀವ್ರಗೊಳ್ಳುವಂತೆ ಮಾಡಿದ್ದಾರೆ. ಒಂದೊಮ್ಮೆ ಕೆಆರ್‌ಎಸ್‌ನಲ್ಲಿ ಬಿರುಕು ಇದ್ದಿದ್ದೇ ಆದರೆ ಅದನ್ನು ಅಽಕಾರಿಗಳ ಮೂಲಕ ಪರೀಶಿಲಿಸಿ, ಜಿಯ ಜನಪ್ರತಿನಿಽಗಳ ನಿಯೋಗ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ಆದರೆ ಇವರಿಬ್ಬರೂ ವೈಯಕ್ತಿಕ ನಿಂದನೆ ಮಾಡಿಕೊಂಡು ಮಂಡ್ಯ ಜನರ ಮನದಲ್ಲಿ ಬಿರುಕು ಮೂಡಿಸುತ್ತಿದ್ದಾರೆ ಎಂದು ಮಂಡ್ಯದ ಅನೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಲ್ಟಿ ಸಂಚು?
ಜಿಯಲ್ಲಿ ಸುಮಾರು ೧೪೦ಕ್ಕೂ ಹೆಚ್ಚು ಗಣಿಗಾರಿಕೆಗಳಿದ್ದು, ಇವುಗಳಲ್ಲಿ ೫೦ ಕಾನೂನು ಬದ್ಧವಾಗಿದ್ದರೆ, ಸುಮಾರು ೮೦ಕ್ಕೂ ಹೆಚ್ಚು ಅಕ್ರಮ ಎನ್ನಲಾಗಿವೆ. ಇವುಗಳ ಪೈಕಿ ಬಹುತೇಕ ಗಣಿಕಾರಿಗಳು ಜೆಡಿಎಸ್ ಶಾಸಕರಿಗೇ ಸೇರಿದವು ಎನ್ನಲಾಗಿದೆ. ಇವುಗಳ ಮೇಲೆ ಸುಮಲತಾ ಕಣ್ಣಿಟ್ಟಿದ್ದು, ಇವುಗಳ ರಾಯಲ್ಟಿ ಈಗ ತೆರೆಮರೆಯ ಕಚ್ಚಾಟಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ.

***

ಸುಮಲತಾ ಮತ್ತು ಕುಮಾರಸ್ವಾಮಿ ಅವರ ಕಚ್ಚಾಟದಿಂದ ಮಂಡ್ಯ ಜನತೆಗೆ ಯಾವುದೇ ಉಪಯೋಗವಿಲ್ಲ. ಕಷ್ಟದಲ್ಲಿ ಕಾಣದವರು ಈಗ ಬಂದು ಕಚ್ಚಾಡುವು ದರಲ್ಲಿ ಅರ್ಥವಿಲ್ಲ. ಇದು ಜನರಿಗೆ ಗೊತ್ತಾಗುತ್ತಿದೆ. ಆಸಕ್ತಿ ಇದ್ದರೆ ಸಮಸ್ಯೆ ಗುರುತಿಸಿ, ಪರಿಹರಿಸಬೇಕು.
-ಡಾ.ರವೀಂದ್ರ ಕಾಂಗ್ರೆಸ್ ಮುಖಂಡ