Thursday, 31st October 2024

ಜೂಜಾಟ ಪ್ರಕರಣ ದಾಖಲು, 8 ಲಕ್ಷ ನಗದು ವಶ: ಸಿಪಿಐ ಚಂದ್ರಶೇಖರ್

ಸಿಂಧನೂರು:  ನಗರ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಇಸ್ಪೀಟ್ ಆಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಅವರಿಂದ ಒಟ್ಟು 8 ಲಕ್ಷದ 25080 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಜಿ.ಚಂದ್ರಶೇಖರ್ ತಿಳಿಸಿದ್ದಾರೆ.

ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಎನ್. ಉಪ ವರಿಷ್ಠಾಧಿಕಾರಿ ಹರಿಬಾಬು ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಪಿಎಸ್ಐ ಗಳಾದ ವಿಜಯ್ ಕೃಷ್ಣ ರಾಘವೇಂದ್ರ ಎರಿಯಪ್ಪ ಹಾಗೂ ಶಂಭುನಾಥ ಹಾಗೂ ಸಿಬ್ಬಂದಿಗಳ ಸಹಕಾರದಿಂದ ವಿವಿಧ ಅಂಗಡಿಳಲ್ಲಿ ಇಸ್ಪೀಟ್ ಆಟ ಆಡುತ್ತಿದ್ದ 176 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.