Sunday, 15th December 2024

ಸಿಬಿಎಸ್‌ಸಿ 10,12ನೇ ತರಗತಿ ಪರೀಕ್ಷೆ ಇಂದಿನಿಂದ

CBSE

ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ 10 ಮತ್ತು 12ನೇ ತರಗತಿಯ ವಾರ್ಷಿಕ ಎರಡನೇ ಅವಧಿಯ ಪರೀಕ್ಷೆ ಇಂದಿನಿಂದ ದೇಶಾದ್ಯಂತ ಆರಂಭ ವಾಗಿದೆ.

ಇಂದಿನಿಂದ 10ನೆ ತರಗತಿ ಪರೀಕ್ಷೆ ಮೇ 14ರ ವರೆಗೆ ನಡೆಯಲಿದೆ. 12ನೇ ತರಗತಿಯ ಪರೀಕ್ಷೆ ಇಂದಿನಿಂದ ಜೂ.15ರ ವರೆಗೆ ನಡೆಯಲಿದೆ.

10ನೆ ತರಗತಿಯ 75 ವಿವಿಧ ವಿಷಯಗಳಿಗೆ ಹಾಗೂ 12ನೇ ತರಗತಿಯ 114 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. 10ನೇ ತರಗತಿಯ 22,732 ಶಾಲೆಗಳ 21,16,209 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿದ್ದಾರೆ.

ದೇಶಾದ್ಯಂತ 7406 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಹಾಗೆಯೇ 12ನೆ ತರಗತಿಯ 15,080 ಶಾಲೆಗಳ 14,54,370 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಾಯಿಸಿ ಕೊಂಡಿದ್ದಾರೆ.

ಒಟ್ಟು 6720 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.