ಪೋಲಿಸರ ಸಿಸಿ ಕ್ಯಾಮರಾ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿ…
ಲಿಂಗಸುಗೂರು: ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ನಿಖಿಲ್ ಬಿ ಲಿಂಗಸ್ಗೂರು ಪೊಲೀಸ್ ಸಿಪಿಐ ಮಹಾಂತೇಶ ಸಜ್ಜನ್ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸಿಸಿ ಕ್ಯಾಮೆರಾ ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ ..
ಪಟ್ಟಣದಲ್ಲಿ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇದೆ .ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತವಾಗಿರಲು ಪೋಲಿಸ್ ಇಲಾಖೆ ಲಿಂಗಸ ಗೂರು ತಾಲ್ಲೂಕಿನಾದ್ಯಂತ ಪ್ರತಿ ಮನೆ ವಾರ್ಡ್ ಗಳಲ್ಲಿ ಹಾಗೂ ಮುಖ್ಯವಾಗಿ ವ್ಯವಹಾರ ನಡೆಯುವ ಮಳಿಗೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕಳ್ಳತನವನ್ನು ತಡೆಗಟ್ಟಲು ಪೊಲೀಸರಿಗೆ ಸಹಕರಿಸಿ ಎನ್ನುವಂಥ ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ನಿಖಿಲ್ ಬಿ ಅವರ ನೇತೃತ್ವದಲ್ಲಿ ಈ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಲಿಂಗಸುಗೂರು ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಸಜ್ಜನ್ ಅವರು ತಿಳಿಸಿದ್ದಾರೆ.
ಅಷ್ಟೆ ಅಲ್ಲದೆ ಈ ಹಿಂದೆ ನಡೆದಿರುವ ಸಾಕಷ್ಟು ಕಳ್ಳತನ ಪ್ರಕರಣಗಳನ್ನು ಸಿಸಿ ಕ್ಯಾಮೆರಾ ದಲ್ಲಿನ ದೃಶ್ಯಗಳನ್ನು ಸೆರೆಹಿಡಿದು ಕಳ್ಳರ ಬೆನ್ನಟ್ಟಿ ಪ್ರಕರಣವನ್ನ ಭೇದಿಸಲಾಗಿದೆ..ಹೀಗಾಗಿ ಪ್ರತಿ ಹಂತದಲ್ಲೂ ಪೊಲೀಸರಿಗೆ ಒತ್ತಡ ಹಾಕುವುದಕ್ಕಿಂತಲೂ ಪೋಲಿಸರಿಗೆ ಸಹಕರಿಸಿದರೆ ಒಳಿತು ಎನ್ನುವ ಸಂದೇಶವನ್ನು ನೀಡಿದ್ದಾರೆ. ಲಕ್ಷ ಲಕ್ಷ ಖರ್ಚು ಮಾಡಿ ಮನೆಗಳನ್ನು ಕಟ್ಟಿಸಿರುತ್ತೇವೆ.
***
ಮಳಿಗೆಯಲ್ಲೇ ವ್ಯವಹಾರವನ್ನ ಮಾಡುತ್ತೇವೆ.ಆದರೆ ಸಣ್ಣಪುಟ್ಟ ವಿಷಯಗಳಲ್ಲಿ ನಾವು ಎಡವುತ್ತೇವೆ ಇದೆ ಮುಂದಿನ ದಿನಗಳಲ್ಲಿ ಅಪಘಾತಗಳಾಗಿ ಮಾರ್ಪಡುತ್ತದೆ ಹೀಗಾಗಿ ಎಲ್ಲರೂ ಸಹ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಮುಖ್ಯವಾಗಿ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಎಲ್ಲಾ ವಾರ್ಡ್ ನ ಸದಸ್ಯರು ಪ್ರತಿ ವಾರ್ಡ್ ಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವು ದರ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಬೇಕಾಗಿದೆ ಕಾನೂನನ್ನು ಕಾಪಾಡುವಲ್ಲಿ ತಮ್ಮ ನೇತೃತ್ವ ಬಹಳ ಮುಖ್ಯವಾಗಿದೆ ಎನ್ನುವಂಥ ಸಂದೇಶದೊಂದಿಗೆ ಜಾಗೃತಿ ಅಭಿಯಾನಕ್ಕೆ ಸಾಥ್ ನೀಡಿ ಎನ್ನುವಂತಹ ಸಲಹೆಯೊಂದಿಗೆ ಸಂದೇಶವನ್ನು ನೀಡಿದ್ದಾರೆ.- ಸಿಪಿಐ ಮಹಾಂತೇಶ ಸಜ್ಜನ್