ಬೆಂಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (Centre for Development of Advanced Computing) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CDAC Recruitment 2024). ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಅಸೋಸಿಯೇಟ್ ಸೇರಿ ಒಟ್ಟು 949 ಹುದ್ದೆಗಳಿಗೆ. ಐಟಿಐ, ಡಿಪ್ಲೊಮಾ, ಬಿ.ಇ ಅಥವಾ ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಡಿ. 5 (Job Guide).
ಹುದ್ದೆಗಳ ವಿವರ
ಪ್ರಾಜೆಕ್ಟ್ ಅಸೋಸಿಯೇಟ್ – 93 ಹುದ್ದೆ
ಪ್ರಾಜೆಕ್ಟ್ ಇಂಜಿನಿಯರ್ – 401 ಹುದ್ದೆ
ಪ್ರಾಜೆಕ್ಟ್ ಮ್ಯಾನೇಜರ್ / ಪ್ರೋಗ್ರಾಂ ಮ್ಯಾನೇಜರ್ / ಪ್ರೋಗ್ರಾಂ ಡೆಲಿವರಿ ಮ್ಯಾನೇಜರ್ / ನಾಲೆಡ್ಜ್ ಪಾರ್ಟ್ನರ್- 71 ಹುದ್ದೆ
ಪ್ರಾಜೆಕ್ಟ್ ಟೆಕ್ನಿಷಿಯನ್ – 22 ಹುದ್ದೆ
ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ / ಮಾಡ್ಯೂಲ್ ಲೀಡ್ / ಪ್ರಾಜೆಕ್ಟ್ ಲೀಡರ್ – 288 ಹುದ್ದೆ
ಪ್ರಾಜೆಕ್ಟ್ ಇಂಜಿನಿಯರ್ / PS&O ಎಕ್ಸಿಕ್ಯೂಟಿವ್ – 43 ಹುದ್ದೆ
ಯೋಜನಾಧಿಕಾರಿ – 13 ಹುದ್ದೆ
ಪ್ರಾಜೆಕ್ಟ್ ಅಸಿಸ್ಟೆಂಟ್ – 1 ಹುದ್ದೆ
ಕಾರ್ಪೊರೇಟ್ ಕಮ್ಯುನಿಕೇಷನ್ ಅಸೋಸಿಯೇಟ್ – 1 ಹುದ್ದೆ
ಪ್ರೊಡಕ್ಟ್ ಸರ್ವಿಸ್ ಮತ್ತು ಔಟ್ರೀಚ್ (PS&O) ಮ್ಯಾನೇಜರ್ – 1 ಹುದ್ದೆ
ಪ್ರೊಡಕ್ಟ್ ಸರ್ವಿಸ್ ಮತ್ತು ಔಟ್ರೀಚ್ (PS&O) ಅಧಿಕಾರಿ – 1 ಹುದ್ದೆ
ಪ್ರಾಜೆಕ್ಟ್ ಬೆಂಬಲ ಸಿಬ್ಬಂದಿ – 14 ಹುದ್ದೆ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಐಟಿಐ, ಡಿಪ್ಲೊಮಾ, ಬಿ.ಇ ಅಥವಾ ಬಿ.ಟೆಕ್, ಪದವಿ, ಸ್ನಾತಕೋತ್ತರ ಪದವಿ, ಪಿ.ಎಚ್ಡಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ ಮತ್ತು ಅರ್ಜಿ ಶುಲ್ಕ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 30-50 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಸಲ್ಲಿಸಬೇಕಾಗಿಲ್ಲ.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ 3,60,000 ರೂ. – 22,90,000 ರೂ. ವಾರ್ಷಿಕ ವೇತನ ದೊರೆಯಲಿದೆ.
ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://careers.cdac.in/)
- ನೀವು ಅರ್ಜಿ ಸಲ್ಲಿಸಬೇಕಿರುವ ಹುದ್ದೆಗಳನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಿ.
ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್ಸೈಟ್ ವಿಳಾಸ: cdac.inಗೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: Job Guide: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿದೆ 164 ಹುದ್ದೆ; 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಿ