ಸಂದರ್ಶನ : ಶೀಲಾ ಸಿ. ಶೆಟ್ಟಿ
ಫ್ಯಾಷನ್ (Fashion) ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಜ್ಯೋತ್ಸ್ನಾ, ಇದೀಗ ದುಬೈನಲ್ಲಿ (Dubai) ನಡೆದ ಅಂತಾರಾಷ್ಟ್ರೀಯ ಮಟ್ಟದ ಐಸಿಎನ್ (ಈ ಕಾಂಪೀಟ್ ನ್ಯಾಚುರಲ್) 40 ಪ್ಲಸ್ ಕೆಗಟರಿಯಲ್ಲಿ ಮೊದಲ ಬಾರಿ ಬಂಗಾರ ಗೆದ್ದ ಭಾರತೀಯ ಮಹಿಳೆಯಾಗಿದ್ದಾರೆ. (Celebrity Interview) ಈಗಾಗಲೇ ಫ್ಯಾಷನ್‌ಲೋಕದಲ್ಲಿ ಸಾಕಷ್ಟು ಟೈಟೆಲ್ ಪಡೆದು ಸೂಪರ್ ಮಾಡೆಲ್, ಕಿಡ್ಸ್ ಫ್ಯಾಷನ್ ಶೋ ಡೈರೆಕ್ಟರ್ ಆಗುವ ಮೂಲಕ ಹೆಸರು ಮಾಡಿರುವ ಜ್ಯೋತ್ಸ್ನಾ ವೆಂಕಟೇಶ್, ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಸೇರಿದಂತೆ ಮೂರು ಇತರೆ ಪದಕಗಳನ್ನು ಗೆದ್ದಿದ್ದಾರೆ.
ವಿಶ್ವವಾಣಿ ಡಿಜಿಟಲ್ ನ್ಯೂಸ್‌ನೊಂದಿಗೆ ಈ ಕುರಿತಂತೆ ಸಂತಸವನ್ನು ಹಂಚಿಕೊಂಡಿರುವ ಅವರು, ಫ್ಯಾಷನ್‌ಲೋಕದಿಂದ ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅನುಭವ ಹಾಗೂ ಯಶಸ್ವಿ ಜರ್ನಿಯ ಬಗ್ಗೆ ಮಾತನಾಡಿದ್ದಾರೆ.
ಫ್ಯಾಷನ್ ಲೋಕದಲ್ಲಿದ್ದ ನಿಮಗೆ ಬಾಡಿ ಬಿಲ್ಡಿಂಗ್ ಕ್ಷೇತ್ರದ ಬಗ್ಗೆ ಒಲವು ಮೂಡಿದ್ದು ಹೇಗೆ?
ಫ್ಯಾಷನ್ –ಫಿಟ್ನೆಸ್‌ಗೆ ಸಂಬಂಧವಿರುವ ಹಾಗೆ, ನನಗೂ ಏನಾದರೂ ಸಾಧನೆ ಮಾಡಬೇಕೆಂದು ಕನಸಿತ್ತು. ಇದಕ್ಕಾಗಿ ಬಾಡಿ ಬಿಲ್ಡಿಂಗ್ ಪ್ರಾಕ್ಟೀಸ್ ಮಾಡಿದೆ. ಸುಮಾರು 7 ವರ್ಷ ಇದಕ್ಕಾಗಿ ಶ್ರಮ ಪಟ್ಟೆ.
ಫ್ಯಾಷನ್ ಲೋಕಕ್ಕೂ ಈ ಕ್ಷೇತ್ರಕ್ಕೂ ಇರುವ ವ್ಯತ್ಯಾಸವೇನು?
ಫ್ಯಾಷನ್ ಕ್ಷೇತ್ರ ಗ್ಲಾಮರಸ್ ಕ್ಷೇತ್ರ! ಇನ್ನು ಬಾಡಿ ಬಿಲ್ಡಿಂಗ್ ಕ್ಷೇತ್ರ ಕಂಪ್ಲೀಟ್ ಹಾರ್ಡ್‌ವರ್ಕ್‌ಗೆ ಮಾನ್ಯತೆ ನೀಡುವಂತಹ ಕ್ಷೇತ್ರ.
ನಿಮಗೆ ದೊರೆತ ಪದಕಗಳ್ಯಾವುವು?
ರನ್‌ವೇ ಮಾಡೆಲ್, ಸ್ಪೋರ್ಟ್ಸ್ ಮಾಡೆಲ್, ಸ್ಟ್ರೀಟ್ ಮಾಡೆಲ್, ಸ್ವಿಮ್ಮಿಂಗ್ ಕೆಟಗರಿ ಸೇರಿದಂತೆ ಕ್ರಮವಾಗಿ 3 ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ಮೊದಲ ಭಾರತೀಯಳಾಗಿದ್ದೇನೆ.
ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೆ ಎಂಟ್ರಿ ನೀಡಲು ಬಯಸುವವರಿಗೆ ಯಾವ ಟಿಪ್ಸ್ ನೀಡುತ್ತೀರಾ?
ಆರೋಗ್ಯಕರ ದಿನಚರಿ ನಿಮ್ಮದಾಗಲಿ. ಸಕಾರಾತ್ಮಕ ಯೋಚನೆ, ಆತ್ಮವಿಶ್ವಾಸದ ಜತೆಗೆ ಎಕ್ಸ್‌ಪರ್ಟ್ಸ್‌ಗಳ ಗೈಡ್‌ಲೈನ್ಸ್ ತೆಗೆದುಕೊಳ್ಳಿ. ವರ್ಕೌಟ್ ಪ್ರಾಕ್ಟೀಸ್‌ಗೆ ಅತ್ಯುತ್ತಮ ಕೋಚ್ ಆಯ್ಕೆ ಮಾಡಿಕೊಳ್ಳಿ.
ಈ ಸುದ್ದಿಯನ್ನೂ ಓದಿ | Conservation Award : ಕ್ರಿಕೆಟರ್ಸ್ ಫಾರ್ ಕನ್ಸರ್ವೇಶನ್ ಸಂಸ್ಥೆಯಿಂದ ನಾಳೆ ವನ್ಯಜೀವಿ ಸೇವಾ ಪ್ರಶಸ್ತಿಗಳ ವಿತರಣೆ
ಮುಂದಿನ ಗುರಿ ಹಾಗೂ ಕನಸು ?
ಮುಂಬಯಿಯಲ್ಲಿ ನಡೆಯಲಿರುವ ಡಬ್ಲ್ಯೂಬಿಎಫ್‌ಎಫ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧಳಾಗುತ್ತಿದ್ದೇನೆ. ಒಂದು ವೇಳೆ ಇಲ್ಲಿಯೂ ಆಯ್ಕೆಯಾದಲ್ಲಿ, ಅಮೆರಿಕಾದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದೇನೆ. ಇದೇ ನನ್ನ ಸದ್ಯದ ಗುರಿ ಹಾಗೂ ಕನಸು.
(ಲೇಖಕಿ ಫ್ಯಾಷನ್ ಪತ್ರಕರ್ತೆ)