Friday, 22nd November 2024

ಸಿಇಟಿ ಫಲಿತಾಂಶ ಪ್ರಕಟ: ಮೈಸೂರಿನ ಮೇಘನ್ ಹೆಚ್ ಪ್ರಥಮ

ಬೆಂಗಳೂರು: ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿ ಫಲಿತಾಂಶ ಸೋಮವಾರ ಪ್ರಕಟವಾಗಿದೆ.

ಮೈಸೂರಿನ ಮೇಘನ್ ಹೆಚ್ – ಮೊದಲ ಸ್ಥಾನ ಪಡೆದರೆ, ಬೆಂಗಳೂರಿನ ಪ್ರೇಮಂಕುರ್ ಎರಡನೇ ಸ್ಥಾನ, ಬಿಎಸ್ ಅನಿರುಧ್ ಮೂರನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಉನ್ನ ತ ಶಿಕ್ಷಣ ಸಚಿವ ಡಾ. ಅಶ್ವಥ್​ ನಾರಾಯಣ, ಎಂಜಿನಿಯರಿಂಗ್​, ಬಿಫಾರ್ಮ್​, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್​ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.

ಅಗ್ರಿಕಲ್ಚರ್ ವಿಭಾಗದಲ್ಲಿ ಮೇಘನಾ ಹೆಚ್​​.ಕೆ- ಮೊದಲ ಸ್ಥಾನ ಪಡೆದರೆ, ರೀತಂ .ಬಿ- ಎರಡನೇ ಸ್ಥಾನ, ಅದಿತ್ಯ ಪ್ರಭಾಶ್- ಮೂರನೇ ಸ್ಥಾನ ಪಡೆದಿದ್ದಾರೆ, ಇನ್ನು ವೆಟರ್ನರಿ ಸೈನ್ಸ್ ವಿಭಾಗ ಮೇಘನಾ ಹೆಚ್.ಕೆ- ಮೊದಲ ಸ್ಥಾನ, ವರುಣ್ ಆದಿತ್ಯ- ಎರಡನೇ ಸ್ಥಾನ, ರೀತಂ .ಬಿ- ಮೂರನೇ ಸ್ಥಾನ ಪಡೆದಿದ್ದಾರೆ.

ಬಿ.ಫಾರ್ಮ್ ವಿಭಾಗ ಮೇಘನ್ ಹೆಚ್.ಕೆ- ಮೊದಲು, ಪ್ರೇಮಾಂಕರ್ – ಎರಡನೇ ಸ್ಥಾನಬಿ.ಎಸ್.ಅನಿರುದ್​ – ಮೂರನೇ ಸ್ಥಾನ ಗಳಿಸಿದ್ದಾರೆ. ನ್ಯಾಚರೋಪತಿ ವಿಭಾಗದಲ್ಲಿ ಮೇಘನಾ ಹೆಚ್.ಕೆ – ಮೊದಲು, ವರುಣ್ ಆದಿತ್ಯ- ಎರಡನೇ ಹಾಗೂ ರೀತಂ ಬಿ- ಮೂರನೇ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದಾರೆ.

ಆಗಸ್ಟ್ ತಿಂಗಳಲ್ಲಿ ನಡೆದ ಸಿಇಟಿ ಪರೀಕ್ಷೆ ನಡೆದಿದ್ದು, 2 ಲಕ್ಷದ 1 ಸಾವಿರದ 834 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 1 ಲಕ್ಷದ 93 ಸಾವಿರದ 413 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಎಂದು ವಿವರಿಸಿದರು.