ಕಲಬುರ್ಗಿ : ವರ್ಷಕ್ಕೆ ಎರಡು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಲಾ ಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಶಿಕ್ಷಕರ ನೇಮಕಾತಿಗೆ ನಡೆಯುವ ಪರೀಕ್ಷೆಯಲ್ಲಿ ಅರ್ಜಿ ಕರೆದಷ್ಟು ಶಿಕ್ಷಕರು ಉತ್ತೀರ್ಣ ರಾಗದ ಕಾರಣ ಸಚಿವರು ಈ ಆದೇಶ ಹೊರಡಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ .ಸಿ .ನಾಗೇಶ್ ಅವರು , ಶಿಕ್ಷಕರ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಭ್ಯರ್ಥಿಗಳು ಪಾಸ್ ಆಗುತ್ತಿಲ್ಲ . ಇದರಿಂದಾಗಿ ಶಿಕ್ಷಕರ ಕೊರತೆ ಉಂಟಾಗಿದೆ ಎಂದರು
ಕಳೆದ ಬಾರಿ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ 3 ಸಾವಿರ ಶಿಕ್ಷಕರು ಮಾತ್ರವೇ ಪಾಸ್ ಆಗಿದ್ದರು. ಇದೀಗ 5 ಸಾವಿರ ಶಿಕ್ಷಕರ ನೇಮಕಾತಿ ( Teacher Recruitment Notification ) ನಡೆಯಲಿದ್ದು , ಅಷ್ಟು ಹುದ್ದೆಗಳಿಗೆ ಅಗತ್ಯವಾಗುವಷ್ಟು ಶಿಕ್ಷಕರು ಪಾಸ್ ಆಗುವ ನಿಟ್ಟಿನಲ್ಲಿ ವರ್ಷಕ್ಕೆ 2 ಬಾರಿ ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು .