ಚನ್ನಪಟ್ಟಣ/ರಾಮನಗರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪರ ಮಂಗಳವಾರ ಕ್ಷೇತ್ರದ (Channapatna By Election) ವಿವಿಧ ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿದರು. ಕ್ಷೇತ್ರದ ಸಿದ್ದೇಗೌಡನ ದೊಡ್ಡಿ ಗ್ರಾಮದಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿ, ನಿಖಿಲ್ ಪರ ಮತಯಾಚನೆ ಮಾಡಿದರು. ಪ್ರಚಾರ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಬಾಲಕಿಯೊಬ್ಬಳ ಜತೆ ಆತ್ಮೀಯವಾಗಿ ಕುಶಲೋಪರಿ ನಡೆಸಿರುವುದು ಗಮನ ಸೆಳೆಯಿತು.
ಈ ಸುದ್ದಿಯನ್ನೂ ಓದಿ | Pralhad Joshi: ಕಾಂಗ್ರೆಸ್ ಸರ್ಕಾರ ಇರುವೆಡೆ ಆಸ್ತಿ ಕಬಳಿಸಲು ವಕ್ಫ್ ಸಂಚು: ಜೋಶಿ ಆರೋಪ
ಕೇವಲ ಹತ್ತರಿಂದ ಹನ್ನೆರಡು ಮನೆಗಳಿರುವ ಸಿದ್ದೇಗೌಡನ ದೊಡ್ಡಿ ಗ್ರಾಮದಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಮತಯಾಚನೆ ಮಾಡಿದರು. ಸಿದ್ದೇಗೌಡನ ದೊಡ್ಡಿ ನಂತರ ಕನ್ನಿದೊಡ್ಡಿ, ಅಮ್ಮಹಳ್ಳಿ ದೊಡ್ಡಿ, ಬಿವಿ ಹಳ್ಳಿ, ಅರಳಾಳುಸಂದ್ರ, ಚೆನ್ನಿಗನ ಹೊಸಹಳ್ಳಿ, ಬಿವಿ ಪಾಳ್ಯ, ದ್ಯಾವಪಟ್ಟಣ, ಗೊಲ್ಲರದೊಡ್ಡಿ, ವಿಠ್ಠಲೇನಹಳ್ಳಿ, ಮೆಣಸಿಗನಹಳ್ಳಿ, ಲಂಬಾಣಿ ತಾಂಡ್ಯ ಸೇರಿ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮನೆಗಳಿಗೆ ತೆರಳಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ‘ಕ್ರೊಮ್ಯಾಟಿಕ್ ರಿದಮ್ಸ್’ ವರ್ಣಚಿತ್ರಗಳ ಪ್ರದರ್ಶನ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.