ಕೊಲ್ಹಾರ: ಪರಿಸರ ಜಾಗೃತಿಗಾಗಿ ತಮಿಳುನಾಡು ಮೂಲದ ಅನ್ಬು ಚಾರ್ಲ್ಸ್ ಎಂಬ ವ್ಯಕ್ತಿಯು ಸೈಕಲ್ ಮೂಲಕ ದೇಶ ಪರ್ಯಟನೆ ಮಾಡುತ್ತಾ ಜಾಗೃತಿ ಮೂಡಿಸುತ್ತಿದ್ದು ಇಂತಹ ಅಪರೂಪ ಪರಿಸರ ಪ್ರೇಮಿಯ ಸೈಕಲ್ ಸವಾರಿ ಶುಕ್ರವಾರ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭ ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಸನ್ಮಾನಿಸಲಾಯಿತು.
ತಮಿಳುನಾಡು ಸುನಾಮಿ ಸಂದರ್ಭದಲ್ಲಿ ಕುಟುಂಬದ ಕೆಲವರನ್ನು ಕಳೆದು ಕೊಂಡು ಮನನೊಂದ ಅನ್ಬು ಚಾರ್ಲ್ಸ್ ಪರಿಸರ ಉಳಿಯದಿದ್ದರೆ ಮಾನವನಿಗೆ ಉಳಿಗಾಲವಿಲ್ಲ ಎಂಬುವುದನ್ನು ಮನಗಂಡು ತಮ್ಮ ಶಾಲಾ ಶಿಕ್ಷಕನ ವೃತ್ತಿ ತೊರೆದು ಪರಿಸರ ಜಾಗೃತಿಗಾಗಿ ದೇಶ ಸುತ್ತುವ ಕೆಲಸಕ್ಕೆ ಕೈ ಹಾಕಿ ಸೈಕಲ್ ಮೂಲಕ ದೇಶ ಸುತ್ತಿ ಪರಿಸರ ಜಾಗೃತಿ ಮೂಡಿಸುತ್ತಾ ಪರಿಸರ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.
ಅನ್ಬು ಚಾರ್ಲ್ಸ್ 2005 ರಲ್ಲಿ ಸೈಕಲ್ ಪ್ರಯಾಣ ಪ್ರಾರಂಭಿಸಿ ಪ್ರತಿದಿನ 20 ಕಿಲೊಮೀಟರ್ ಪ್ರಯಾಣ ಮಾಡಿ ಈಗಾಗಲೇ ಅವರು ಮಹಾರಾಷ್ಟ್ರ, ಆಂದ್ರಪ್ರದೇಶ, ಮದ್ಯಪ್ರದೇಶ, ಓರಿಸ್ಸಾ, ಪಾಂಡಿಚೆರಿ, ಪಶ್ಚಿಮ ಬಂಗಾಳ, ರಾಜಸ್ಥಾನ, ಗುಜರಾತ ಸೇರಿದಂತೆ ಅನೇಕ ರಾಜ್ಯಗಳ ಪ್ರವಾಸ ಮಾಡಿದ್ದು 60 ಸಾವೀರ ಕಿಲೊಮೀಟರ್ ಕ್ರಮಿಸಿದ್ದಾರೆ. ಈ ಪ್ರವಾಸದ ಸಂದರ್ಭದಲ್ಲಿ ಮದ್ಯ ಬರುವ ಸುಮಾರು 15 ಸಾವಿರ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿ ಸುತ್ತಿದ್ದಾರೆ.
ನೇಪಾಳ ಗಡಿಯಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವಾಗ ನಕ್ಸಲರು ಅನ್ಬು ಚಾರ್ಲ್ಸ್ ಅವರನ್ನು ಪೊಲೀಸ್ ಬಾತ್ಮಿದಾರ ಎಂದು ಸುಮಾರು 15 ದಿನಗಳ ಕಾಲ ಒತ್ತೆಯಾ ಳನ್ನಾಗಿ ಇಟ್ಟುಕೊಂಡಿದ್ದರು ಎನ್ನುವುದನ್ನು ಅವರು ಪತ್ರಕರ್ತರ ಮುಂದೆ ಹಂಚಿ ಕೊಂಡರು.
ಅಂಜುಮನ್ ಕಮಿಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಮಾತನಾಡುತ್ತಾ ಅನ್ಬು ಚಾರ್ಲ್ಸ್ ಅವರ ಪರಿಸರ ಪ್ರೇಮ ಸರ್ವರಿಗೂ ಮಾದರಿ ಅವರು ಹೋರಾಟಕ್ಕೆ ನಾವುಗಳು ಕೈಜೋಡಿ ಸೊಣ ಪರಿಸರ ಉಳಿದರೆ ಮಾತ್ರ ಮಾನವನ ಉಳಿವು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿ ಹಸನಡೊಂಗ್ರಿ ಗಿರಗಾಂವಿ ಅನ್ಬು ಚಾರ್ಲ್ಸ್ ಅವರಿಗೆ ಆರ್ಥಿಕ ಸಹಾಯ ನೀಡಿದರು,
ಈ ಸಂದರ್ಭದಲ್ಲಿ ಮೊಹಸೀನ್ ಬಿಜಾಪುರ, ಜಮೀರ ಮುಲ್ಲಾ, ಮೊಹಮ್ಮದ್ ಪಕಾಲಿ, ವಸೀಂ ಗಿರಗಾಂವಿ, ಕಾಶೀಂ ಹವಾಲ್ದಾರ್ ಮುಂತಾದವರು ಇದ್ದರು.