ಇಂಡಿ: ಇಂಡಿಯಲ್ಲಿ ಸೋಮವಾರ (ನ.೧೪) ರಂದು ನಡೆಯಲಿರುವ ಗಡಿನಾಡು ಲಿಂಗಾ ಯತ ಪಂಚಮಸಾಲಿ ೨ಎ ಮೀಸಲಾತಿ ಹಕ್ಕೊತ್ತಾಯಿಸಿ ಹಾಗೂ ರಾಷ್ಟ್ರ ಮಾತೆ ಕಿತ್ತೂರು ರಾಣಿ ಚೆನ್ನಮ್ಮನವರ ೨೪೪ ನೇ ಜಯಂತ್ಯೋತ್ಸವ ಹಾಗೂ ೧೯೯ ನೇ ವಿಜಯೋತ್ಸವ ಸಮಾರಂಭಕ್ಕೆ ನಿರ್ಮಿಸಲಾಗಿತ್ತಿರುವ ಬೃಹತ್ ವೇದಿಕೆಯನ್ನು ಭಾನುವಾರ ಸಮಾಜದ ಮುಖಂಡರು ವೀಕ್ಷಿಸಿದರು.
ತದನಂತರ ಪಂಚಮಸಾಲಿ ಸಮಾಜದ ಮುಖಂಡ ಕಾಸುಗೌಡ ಬಿರಾದಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಸೋಮವಾರ ಕನಿಷ್ಠ ೧೦ ಸಾವಿರ ಜನಸಂಖ್ಯೆ ಸೇರುವ ಸಂಭವ ವಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹಲವು ಸಮಿತಿ ಗಳನ್ನು ರಚನೆ ಮಾಡಿ ಜವಾಬ್ದಾರಿ ನೀಡಲಾಗಿದೆ ಎಂದರು.
ಸಮಾಜದ ಯುವಘಟಕದ ಜಿಲ್ಲಾ ಅಧ್ಯಕ್ಷ ಸೋಮಶೇಖರ ದೇವರ ಮಾತನಾಡಿ ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು.
ಕಾರ್ಯಕ್ರಮಕ್ಕೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾ ಸ್ವಾಮೀಜಿ, ಹಿಂದೂಹುಲಿ ಎಂದೇ ಹೆಸರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ, ಸಮಾಜದ ರಾಷ್ಟಿçÃಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವು ಮಜಿ ಶಾಸಕರು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಸುಧಾಕರ ಬಿರಾದಾರ, ಶಿವಾನಂದ ಚಾಳೀಕಾರ, ಉಮೇಶ ಬಳಬಟ್ಟಿ, ಶರಣಗೌಡ ಬಂಡಿ, ಬಾಳು ಮುಳಜಿ, ಧನರಾಜ್ ಮುಜಗೊಂಡ, ಅನೀಲ ಬಿರಾದಾರ, ನಿಂಗನಗೌಡ ಬಿರಾದಾರ, ಶ್ರೀಶೈಲ ಬಿರಾದಾರ, ಶಿವು ಮಲಕಗೊಂಡ, ಬಸವರಾಜ ಮಡಗೊಂಡ, ಚನ್ನು ದೇವರ, ಶಿವಾನಂದ ಹೊಸುರ, ಬಸು ಕರೂರ, ಅಶೋಕ ಅಕಲಾದಿ ಸೆರಿದಂತೆ ಇನ್ನಿತರರು ಉಪಸ್ಥಿತರಿದ್ದರು.