-ಶೀಲಾ ಸಿ. ಶೆಟ್ಟಿ
ಕ್ರಿಸ್ಮಸ್ ಫೆಸ್ಟಿವ್ ಸೀಸನ್ನಲ್ಲಿ ಅಲಂಕಾರಕ್ಕೆ (Christmas Decoration) ಹೆಚ್ಚು ಪ್ರಾಧಾನ್ಯತೆ. ಮನೆಯ ಒಳಾಂಗಣವನ್ನು ಅಲಂಕರಿಸಿ, ಮನೆಗೆ ಕೊಂಚ ಹೊಸ ರೂಪ ನೀಡಿ. ಸಾಂತಾ ಕ್ಲಾಸ್ ಬರಮಾಡಿಕೊಳ್ಳಿ ಎನ್ನುತ್ತಾರೆ ಒಳಾಂಗಣ ವಿನ್ಯಾಸಕಾರರಾದ ನೀತು. ಆದರೆ, ಅಲಂಕಾರಕ್ಕಾಗಿ ಇರಿಸುವ ನೈಜ ಹಾಗೂ ಕೃತಕ ಮರಗಳನ್ನು ಹಾಗೂ ಲೈಟಿಂಗ್ಸ್ ಹಾಕುವಾಗ, ಶೃಂಗರಿಸುವಾಗ ಮುಂಜಾಗ್ರತೆ ವಹಿಸುವುದು ಅಗತ್ಯ ಎಂಬುದನ್ನು ಹೇಳುತ್ತಾರೆ.
ಒಳಾಂಗಣಕ್ಕೆ ತಕ್ಕಂತೆ ಅಲಂಕಾರ
ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ಬಗೆಯ ಕ್ರಿಸ್ಮಸ್ ಡೆಕೋರೇಷನ್ ಸಾಮಗ್ರಿಗಳು ಬಂದಿವೆ. ಲೆಕ್ಕವಿಲ್ಲದಷ್ಟು ಬಗೆಯ ಅಲಂಕಾರಿಕ ಮಿರ ಮಿರ ಮಿನುಗುವ ಟ್ರೀ ಆಕ್ಸೆಸರೀಸ್ಗಳು ದೊರೆಯುತ್ತಿವೆ. ನಿಮ್ಮ ಮನೆಯ ಕಾನ್ಸೆಪ್ಟ್ಗೆ ತಕ್ಕಂತೆ ಶಾಪಿಂಗ್ ಮಾಡಿ. ಸುಂದರಗೊಳಿಸಿ. ಕ್ರಿಸ್ಮಸ್ ಡೆಕೋರೇಷನ್, ವೆಸ್ಟರ್ನ್ ಕಾನ್ಸೆಪ್ಟ್ಗಳನ್ನು ಹೆಚ್ಚು ಹೊಂದಿರುತ್ತದೆ. ಹಾಗಾಗಿ ಆದಷ್ಟು ಲೈಟಿಂಗ್ಸ್, ಗ್ಲಿಟ್ಟರಿಂಗ್, ಕೃತಕ ಕ್ರಿಸ್ಮಸ್ ಟ್ರೀಗಳನ್ನು ನಿಮ್ಮ ಮನೆಯ ಒಳಾಂಗಣಕ್ಕೆ ಸೂಟ್ ಆಗುವಂತೆ ಸೆಲೆಕ್ಟ್ ಮಾಡಿ. ಆದಷ್ಟೂ ಲೈಟ್ವೇಟ್ನದ್ದು ಆಯ್ಕೆ ಮಾಡಿಕೊಳ್ಳಿ. ನೋಡಲು ಆಕರ್ಷಕವಾಗಿ ಕಾಣಬೇಕು ಎನ್ನುತ್ತಾರೆ ವಿನ್ಯಾಸಕಾರರು.
ಕ್ರಿಸ್ಮಸ್ಗೆ ಲೈಟಿಂಗ್ಸ್ ಹೀಗಿರಲಿ
ಮನೆಯ ಗೋಡೆ ಬಣ್ಣಕ್ಕೆ ಮ್ಯಾಚ್ ಆಗುವಂತಹ ಕಲರ್ಫುಲ್ ಲೈಟಿಂಗ್ಸ್ ಕೊಳ್ಳಿ. ಡಿಫರೆಂಟ್ ಶೇಪ್ನದ್ದು ಆಯ್ಕೆ ಮಾಡಿ. ಆದರೆ, ಲೈಟಿಂಗ್ಸ್ ಸುರಕ್ಷಿತವಾಗಿ ಮಾಡಬೇಕು. ಮಕ್ಕಳ ಕೈಗಳಿಗೆ ಲೈಟಿಂಗ್ಗಳು ಸಿಗುವಂತಿರಬಾರದು. ಮನೆಯೊಳಗಿನ ಶೃಂಗಾರ ಒಳಗಿನ ಜಾಗಕ್ಕೆ ತಕ್ಕುದಾಗಿರಬೇಕು. ಮನೆಯ ಹೊರಾಂಗಣಕ್ಕೆ ಹೊಂದುವಂತಹ ಕ್ರಿಸ್ಮಸ್ ಆಕಾಶ ದೀಪಗಳನ್ನು, ಸ್ಕೈ ಲ್ಯಾಟೆರ್ನ್ಗಳನ್ನು ಹಾಕಿ ಸಿಂಗರಿಸಬಹುದು.
ಕ್ರಿಸ್ಮಸ್ ಡೆಕೋರೇಷನ್
ಹೆಚ್ಚಿನ ಡೆಕೋರೇಷನ್ಗೆ ಲಿವಿಂಗ್ ರೂಂ ಹಾಗೂ ಹಾಲ್ ಆಯ್ಕೆ ಮಾಡಿ. ಕಲರ್ಫುಲ್ ಡೇಕೊರೇಟಿವ್ ಐಟಂಗಳಿಂದ ಕ್ರಿಸ್ಮಸ್ ಟ್ರೀ ಅಲಂಕರಿಸಿ. ಗೋಡೆಯ ಬಣ್ಣಕ್ಕೆ ಅಲಂಕಾರ ಹೊಂದಬೇಕು. ಒಟ್ಟಿನಲ್ಲಿಅಲಂಕಾರ ಸುರಕ್ಷಿತವಾಗಿರಬೇಕು. ಡಲ್ ಫಿನಿಶಿಂಗ್ ಡೆಕೋರೇಷನ್ ಕಾನ್ಸೆಪ್ಟ್ ಐಡಿಯಾ ಬೇಡ. ಆದಷ್ಟೂ ನೋಡಲು ಮನಸ್ಸಿಗೆ ಮುದ ನೀಡುವಂತಿರಲಿ. ಆಕರ್ಷಕವಾಗಿರಲಿ.
ಮುಂಜಾಗ್ರತ ಕ್ರಮ ಕೈಗೊಳ್ಳಿ
ಕ್ರಿಸ್ಮಸ್ಗೆ ಮಾಡುವ ಅಲಂಕಾರ ಹೊಸ ವರ್ಷದವರೆಗೂ ಉಳಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ, ಈ ಅಲಂಕಾರ ಮಾಡುವ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡಲ್ಲಿಉತ್ತಮ. ಅಲಂಕಾರಕ್ಕಾಗಿ ಇರಿಸುವ ಈ ನೈಜ ಹಾಗೂ ಕೃತಕ ಮರಗಳನ್ನು ಶೃಂಗರಿಸುವಾಗ ಮುಂಜಾಗ್ರತೆ ವಹಿಸುವುದು ಅಗತ್ಯ. ಅಲಂಕಾರಕ್ಕೆ ತಾಜಾವಾಗಿರುವ ಹಸಿರು ಚಿಕ್ಕ ಮರಗಳಿದ್ದಲ್ಲಿ ಉತ್ತಮ. ಏಕೆಂದರೆ ಒಣಗಿದ ಮರಗಳು ಅತಿ ಸುಲಭವಾಗಿ ವಿದ್ಯುತ್ನ ಬೆಂಕಿಗೆ ತುತ್ತಾಗುತ್ತವೆ ಎನ್ನುತ್ತಾರೆ ಎಕ್ಸ್ಪರ್ಟ್ಸ್.
ಈ ಸುದ್ದಿಯನ್ನೂ ಓದಿ | Self employment Loan: ಸ್ವಯಂ ಉದ್ಯೋಗಕ್ಕೆ ಸಾಲ ಲಭ್ಯ, ಡಿ.29 ಕೊನೆಯ ದಿನ; ಇಂದೇ ಅರ್ಜಿ ಸಲ್ಲಿಸಿ
ಡೆಕೋರೇಷನ್ಗೆ ವಿದ್ಯುತ್ ಸಂಪರ್ಕ
ಕ್ರಿಸ್ಮಸ್ ಟ್ರೀಯನ್ನು, ಬೆಂಕಿ ಇರುವ ಸ್ಥಳ, ರೇಡಿಯೆಟರ್ಸ್, ಸ್ಪೇಸ್ ಹೀಟರ್ಸ್, ಹೀಟಿಂಗ್ ವೆಂಟ್ಸ್ ಮತ್ತು ಹೆಚ್ಚು ಉಷ್ಣಾಂಶ ಇರುವೆಡೆಯಿಂದ ಕನಿಷ್ಠ 3 ಅಡಿ ದೂರವಿಡಬೇಕು. ನಿರ್ಗಮಿಸುವ ಸ್ಥಳಗಳಲ್ಲಿಇರಿಸಬಾರದು. ಯುಎಲ್ ಮಾರ್ಕ್ ಹೊಂದಿರುವ ಅಲಂಕಾರಿಕ ದೀಪಗಳನ್ನು ಉಪಯೋಗಿಸಬೇಕು.
ಪ್ಲಗ್ ಹಾಕುವ ಮೊದಲು ಪ್ರತಿಯೊಂದು ವಿದ್ಯುತ್ ಸಂಪರ್ಕ ಸರಿಯಿದೆಯೇ ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಮುರಿದಿರುವ ಸಾಕೆಟ್ಗಳು, ಸಡಿಲ ಅಥವಾ ವೈರ್ಗಳು ಹಲವು ಗಂಭೀರ ವಿದ್ಯುತ್ ಶಾಕ್ ಅಥವಾ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗುತ್ತವೆ. ಮಲಗುವ ಮೊದಲು ಎಲ್ಲ ಎಲೆಕ್ಟ್ರಿಕಲ್ ಲೈಟ್ ಸ್ಟ್ರಿಂಗ್ಗಳನ್ನು ಸ್ಥಗಿತಗೊಳಿಸಬೇಕು ಎಂದು ಸಲಹೆ ನೀಡುತ್ತಾರೆ ಎಕ್ಸ್ಪರ್ಟ್ಸ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)