-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸೀಸನ್‌ನ ವರ್ಷದ ಕೊನೆಯ ಫೆಸ್ಟಿವ್ ಸೀಸನ್ ಎಂದೇ ಕರೆಸಿಕೊಳ್ಳುವ ಕ್ರಿಸ್‌ಮಸ್‌ಗೆ ಈಗಾಗಲೇ ಶಾಪಿಂಗ್ (Christmas Shopping 2024) ಶುರುವಾಗಿದೆ. ಹೌದು, ಈಗಾಗಲೇ ಉದ್ಯಾನನಗರಿಯ ನಾನಾ ಮಾಲ್‌ಗಳಲ್ಲಿ ಹಾಗೂ ಹಲವು ಏರಿಯಾದ ಶಾಪಿಂಗ್ ಸ್ಟ್ರೀಟ್‌ಗಳಲ್ಲಿ ಶಾಪಿಂಗ್ ಪ್ರಿಯರ ಕಲರವ ಹೆಚ್ಚಾಗಿದೆ.
ಕ್ರಿಸ್‌ಮಸ್ ಶಾಪಿಂಗ್ ಆಕರ್ಷಣೆ
“ಉದ್ಯಾನನಗರಿಯಲ್ಲಿ ಡಿಸೆಂಬರ್ ಬಂತೆಂದರೇ ಸಾಕು, ಕ್ರಿಸ್‌ಮಸ್ ಸೆಲೆಬ್ರೇಷನ್ ಆರಂಭಗೊಳ್ಳುತ್ತದೆ. ಇದಕ್ಕೆ ಪೂರಕ ಎಂಬಂತೆ, ಮಾಲ್‌ಗಳಲ್ಲಿ ಹಾಗೂ ಪ್ರತಿಷ್ಠಿತ ಸ್ಟ್ರೀಟ್‌ನ ಬ್ರಾಂಡೆಡ್ ಶಾಪ್‌ಗಳಲ್ಲಿ ಕ್ರಿಸ್‌ಮಸ್ ಶಾಪಿಂಗ್ ಶುರುವಾಗುತ್ತದೆ. ಇದಕ್ಕೆ ತಕ್ಕಂತೆ ಎಲ್ಲೆಡೆ ಕ್ರಿಸ್‌ಮಸ್ ಟ್ರೀಯಿಂದ ಒಳಾಂಗಣವನ್ನು ಅಲಂಕರಿಸಿ, ಗ್ರಾಹಕರನ್ನು ಸೆಳೆಯಲಾಗುತ್ತದೆ” ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ ಜನ್ನತ್. ಅವರ ಪ್ರಕಾರ, ಈ ಸಮಯದಲ್ಲಿ ಟ್ರೆಂಡಿಯಾಗಿರುವ ವೇಸ್ಟನ್‌ವೇರ್‌ಗಳು ಹಾಗೂ ಡೆಕೋರೇಟಿವ್ ಐಟಂಗಳು ಎಲ್ಲೆಡೆ ರಾರಾಜಿಸುತ್ತವೆ ಎನ್ನುತ್ತಾರೆ.
ಮಾಲ್‌ಗಳಲ್ಲಿ ಕ್ರಿಸ್‌ಮಸ್ ಶಾಪಿಂಗ್
ದೊಡ್ಡ ದೊಡ್ಡ ಪ್ರತಿಷ್ಠಿತ ಮಾಲ್‌ಗಳಲ್ಲಿ ಈಗಾಗಲೇ ಕ್ರಿಸ್‌ಮಸ್ ಟ್ರೀಯನ್ನು ಅಲಂಕರಿಸಿ, ಬಗೆಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಶಾಪಿಂಗ್ ಪ್ರಿಯರನ್ನು ಸೆಳೆಯಲಾಗುತ್ತಿದೆ ಎನ್ನುತ್ತಾರೆ ಮಾಲ್ವೊಂದರ ಸೇಲ್ಸ್ ಮ್ಯಾನೇಜರ್.
ಸ್ಟ್ರೀಟ್ ಶಾಪ್‌ಗಳಲ್ಲೂ ಶಾಪಿಂಗ್
ಪ್ರತಿಷ್ಠಿತ ರಸ್ತೆಗಳಲ್ಲಿ ಮಾತ್ರವಲ್ಲ, ಲೋಕಲ್ ಸ್ಟ್ರೀಟ್ ಶಾಪ್‌ಗಳಲ್ಲೂ ಕ್ರಿಸ್‌ಮಸ್ ಶಾಪಿಂಗ್ ಈಗಾಗಲೇ ಶುರುವಾಗಿದೆ. ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ಮಲ್ಲೇಶ್ವರದ 8 ನೇ ಕ್ರಾಸ್, ಜಯನಗರ 4 ನೇ ಬ್ಲಾಕ್, ಇಂದಿರಾನಗರದ ಸ್ಟ್ರೀಟ್ಸ್ ಹೀಗೆ ನಾನಾ ಕಡೆಯಲ್ಲಿ ಶಾಪಿಂಗ್ ಮಾಡುವವರು ಹೆಚ್ಚಾಗಿದ್ದಾರೆ.
ಕ್ರಿಸ್‌ಮಸ್ ಸೀಸನ್ ವೇರ್ಸ್‌ಗೆ ಬೇಡಿಕೆ
ಈ ಸೀಸನ್‌ನಲ್ಲಿ ಕಂಪ್ಲೀಟ್ ವೆಸ್ಟರ್ನ್ ಉಡುಪುಗಳು ಎಲ್ಲೆಡೆ ರಾರಾಜಿಸುತ್ತಿವೆ. ಅದರಲ್ಲೂ ಪಾರ್ಟಿವೇರ್‌ಗಳು ಅತಿ ಹೆಚ್ಚಾಗಿ ಬಿಡುಗಡೆಗೊಂಡಿವೆ. ಜಗಮಗಿಸುವ ಗೌನ್‌ಗಳಿಂದಿಡಿದು, ಕಾಕ್ಟೈಲ್ ಡ್ರೆಸ್, ಶಾರ್ಟ್ಸ್ ಡ್ರೆಸ್, ಮ್ಯಾಕ್ಸಿ, ಬಾಡಿಕಾನ್, ಕಟೌಟ್ ಫ್ರಾಕ್‌ಗಳು ಬಂದಿವೆ. ಇನ್ನು, ಹುಡುಗರಿಗೆ ನಾನಾ ಬಗೆಯ ಕ್ಯಾಶುವಲ್ಸ್ ಬಿಡುಗಡೆಗೊಂಡಿವೆ ಎನ್ನುತ್ತಾರೆ ಮಾರಾಟಗಾರರು.
ಕ್ರಿಸ್‌ಮಸ್ ಡೆಕೋರೇಷನ್ ಸಾಮಗ್ರಿಗಳ ಮಾರಾಟ
ಇನ್ನು, ಕ್ರಿಸ್‌ಮಸ್ ಸೆಲೆಬ್ರೇಷನ್‌ಗೆ ಬೇಕಾಗುವ ಟ್ರೀ ಬೆಲ್, ಟ್ರೀ ಹ್ಯಾಂಗಿಂಗ್ಸ್, ಅರ್ನಾಮೆಂಟಲ್ ಸ್ಟಾರ್ಸ್, ಸ್ನೋ ಮ್ಯಾನ್, ಲ್ಯಾಂಟೆರ್ನ್, ಶೈನಿಂಗ್ ಸ್ಪಾರ್ಕಲ್ಸ್‌ನಲ್ಲಿ ನಾನಾ ಬಗೆಯ ಅಲಂಕಾರಿಕ ವಸ್ತುಗಳು, ಗೋಡೆಗಳಿಗೆ ತಗುಲಿ ಹಾಕಬಹುದಾದ ಬಣ್ಣ ಬಣ್ಣದ ಲೈಟಿಂಗ್ಸ್, ವಾಲ್ ಡೆಕೋರೇಷನ್, ಶೈನಿಂಗ್ ಹ್ಯಾಂಗಿಂಗ್ಸ್, ಸಾಂತ ಹಾಗೂ ಸ್ನೋ ಮ್ಯಾನ್ ಸೇರಿದಂತೆ ನಾನಾ ಬಗೆಯ ಇಂಟಿರೀಯರ್ ಡೆಕೋರೇಷನ್ ಸಾಮಗ್ರಿಗಳು ಕೂಡ ಬಿಡುಗಡೆಗೊಂಡಿವೆ. ಹಬ್ಬ ಸೆಲೆಬ್ರೇಟ್ ಮಾಡುವವರು ಮಾತ್ರವಲ್ಲ, ಇತರೇ ಮಂದಿ ಕೂಡ ಈ ಸೀಸನ್‌ನಲ್ಲಿ ದೊರೆಯುವ ಎಕ್ಸ್‌ಕ್ಯೂಸೀವ್ ಮನೆಯ ಸಿಂಗಾರದ ಡೆಕೋರೇಟಿವ್ ಐಟಂಗಳನ್ನು ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸೇಲ್ಸ್ ಮ್ಯಾನ್.
ಈ ಸುದ್ದಿಯನ್ನೂ ಓದಿ | Star Fashion: ವಿಂಟರ್‌ನಲ್ಲಿ ಟ್ರೆಂಡಿಯಾಗಿದೆ ನಟಿ ತಮನ್ನಾ ಧರಿಸಿದ ಡೆನಿಮ್ ಬಾಡಿಕಾನ್ ಮೆರ್ಮೈಡ್ ಡ್ರೆಸ್
ಕ್ರಿಸ್‌ಮಸ್ ಶಾಪಿಂಗ್ ಪ್ರಿಯರ ಗಮನಕ್ಕೆ
- ಸೀಸನ್ ನ್ಯೂ ಅರೈವಲ್ ಕೆಟಗರಿಯಲ್ಲಿ ದೊರೆಯುವ ಪ್ರಾಡಕ್ಟ್‌ಗಳನ್ನು ಶಾಪಿಂಗ್ ಮಾಡಿದಲ್ಲಿ ಯಾವುದೇ ಡಿಸ್ಕೌಂಟ್ಸ್ ದೊರೆಯುವುದಿಲ್ಲ.
- ಸೇಲ್‌ನಲ್ಲಿಸಿಗುವಂತವು ಕ್ವಾಲಿಟಿ ಇರುವುದಿಲ್ಲ.
- ಸ್ಟ್ರೀಟ್ ಶಾಪಿಂಗ್ ಮಾಡಿದಲ್ಲಿ ಚೌಕಾಸಿ ಮಾಡಬಹುದು.
- ಈ ಸೀಸನ್‌ನಲ್ಲಿ ಕೊಳ್ಳುವ ಅಲಂಕಾರಿಕ ಸಾಮಗ್ರಿಗಳನ್ನು ಇತರೇ ಸಮಯದಲ್ಲೂ ಬಳಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)