Thursday, 19th September 2024

ನಾಳೆಯಿಂದ ಬೆಳಗಲಿದೆ ಬೆಳ್ಳಿ ಪರದೆ

ಬೆಂಗಳೂರು: ಕೋವಿಡ್ ನಿಂದಾಗಿ ಸ್ಥಗಿತಗೊಂಡಿದ್ದ ಸಿನೆಮಾ ಚಿತ್ರ ಮಂದಿರಗಳು  ನಾಳೆ ಯಿಂದ (ಅ.15) ರಿಂದ ತೆರೆಯಲಿವೆ.

ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್‌ ಆಗಿದ್ದ ಚಿತ್ರಮಂದಿರಗಳು ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಇದಕ್ಕಾಗಿ ಎಸ್‌ಒಪಿಯನ್ನು ಸಿದ್ಧಪಡಿಸಲಾಗಿದ್ದು, ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಅನುಸರಿಸು ವುದು ಕಡ್ಡಾಯವಾಗಿದೆ. ಮಾರ್ಗಸೂಚಿ ಈ ಕೆಳಗಿನಂತಿದೆ.

ಸಿನೆಮಾ ಹಾಲ್‌ನಲ್ಲಿ ಸಾಮಾಜಿಕ ಅಂತರ ಅನುಸರಿಸಬೇಕು. ಕೇವಲ ಶೇಕಡಾ 50 ರಷ್ಟು ಸೀಟು ಗಳನ್ನು ಮಾತ್ರ ಪ್ರೇಕ್ಷಕರಿಗೆ ನೀಡಬೇಕು. ಪ್ರೇಕ್ಷಕರ ಮಧ್ಯೆ ಒಂದು ಸೀಟ್ ಅಂತರವಿರಬೇಕು. ಖಾಲಿ ಸೀಟ್ ಗುರುತಿಸುವುದು ಕಡ್ಡಾಯ. ಸಿನಿಮಾ ಹಾಲ್ ಒಳಗೆ ಸ್ಯಾನಿಟೈಜರ್ ವ್ಯವಸ್ಥೆ ಮಾಡ ಲಾಗುವುದು. ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯವಾಗಲಿದೆ.

ಪ್ರತಿಯೊಬ್ಬರೂ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಕಡ್ಡಾಯ. ಪ್ರತಿ ಪ್ರೇಕ್ಷಕರಿಗೂ ತಾಪಮಾನ ಪರೀಕ್ಷೆ ನಡೆಯಲಿದೆ. ಟಿಕೆಟ್ ಮಾರಾಟಕ್ಕಾಗಿ ಹೆಚ್ಚಿನ ಕೌಂಟರ್‌ ಗಳನ್ನು ತೆರೆಯಲಾಗುತ್ತದೆ. ಆನ್‌ಲೈನ್ ಬುಕಿಂಗ್ ಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು. ಪ್ಯಾಕೇಜ್ ಮಾಡಲಾದ ಆಹಾರ ಪದಾರ್ಥಗಳು ಮಾತ್ರ ಲಭ್ಯವಿರುತ್ತವೆ. ಇದಕ್ಕೆ ಹೆಚ್ಚಿನ ಕೌಂಟರ್ ತೆರೆಯಲಾಗುವುದು.

ಸಿನೆಮಾ ಹಾಲ್‌ನ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಲಾಗುವುದು. ಅವರಿಗೆ ಹ್ಯಾಂಡ್ ಗ್ಲೋಸ್, ಪಿಪಿಇ ಕಿಟ್‌ಗಳು ಮತ್ತು ಮಾಸ್ಕ್ ಇತ್ಯಾದಿಗಳನ್ನು ನೀಡಲಾಗುವುದು. ಸಿನೆಮಾ ಹಾಲ್ ಸ್ಯಾನಿಟೈಜರ್ ಮಾಡುವುದು ಕಡ್ಡಾಯ. ಒಂದು ಶೋನಿಂದ ಇನ್ನೊಂದು ಶೋಗೆ 20-30 ನಿಮಿಷದ ಅಂತರವಿರಬೇಕು. ಸಿನಿಮಾ ಹಾಲ್ ತಾಪಮಾನ 24 ರಿಂದ 30 ಡಿಗ್ರಿಗಳ ನಡುವೆ ಇರಬೇಕು.

ಸಿಂಗಲ್ ಸ್ಕ್ರೀನ್ ಸಿನೆಮಾ ಹಾಲ್‌ನಲ್ಲಿ ಗಾಳಿಗೆ ವ್ಯವಸ್ಥೆ ಮಾಡಬೇಕು. ಕೊರೊನಾದಿಂದ ರಕ್ಷಿಸಲು ಒಂದು ನಿಮಿಷದ ಜಾಗೃತಿ ವಿಡಿಯೋ ತೋರಿಸುವುದು ಕಡ್ಡಾಯ.

Leave a Reply

Your email address will not be published. Required fields are marked *