ಚಿಕ್ಕನಾಯಕನಹಳ್ಳಿ : ಕರೋನಾ ಮಹಾಮಾರಿ ಎಂಬ ಖಾಯಿಲೆ ವಿಶ್ವವನ್ನೆ ಬೆಚ್ಚಿ ಬೀಳಿಸಿ ಜನಸಾಮಾನ್ಯರನ್ನ ಸುಮಾರು ಒಂದುವರೆವರ್ಷಗಳ ಕಾಲ ಬದುಕನ್ನ ಸಂಕಷ್ಟಕ್ಕೆ ದೂಡಿ ಜೀವ, ಹಾಗೂ ಜೀವನವನ್ನು ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ತಾಲ್ಲೂಕಿನ ವಿವಿಧ ಇಲಾಖೆಗಳ ಸಿಬ್ಬಂದಿ ಗಳಿಗೆ ರೋಟರಿ ಸಂಸ್ಥೆಯಿ0ದ ಆರೋಗ್ಯಕರ ಎನರ್ಜಿ ಮ್ಯಾಂಗೋ, ಲಸ್ಸಿ ತಂಪು ಪಾನೀಯವನ್ನು ವಿತರಿಸುತ್ತಿದ್ದೇವೆ ಎಂದು ಚಿ. ನಾ.ಹಳ್ಳಿ ರೋಟರಿಯನ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ಪಟ್ಟಣದ ವಿವಿಧ ಇಲಾಖೆಗಳ ಕೊರೋನಾ ವಾರಿರ್ಸ್ ಸಿಬ್ಬಂದಿಗಳಿಗೆ ಬೆಂಗಳೂರು ಬಿಡದಿ ರೋಟರಿ ಕ್ಲಬ್ ಹಾಗೂ ಚಿಕ್ಕನಾಯಕನಹಳ್ಳಿ ರೋಟರಿ ಕ್ಲಬ್ ಸಹಯೋಗದೊಂದಿಗೆ ತಂಪು ಪಾನೀಯಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಾಸ್ಕ್ , ಸ್ಯಾನೀಟೈಸರ್, ಗ್ಲೌಸ್ ಹೆಡ್ ಮಾಸ್ಕ್ , ಪಿ.ಪಿ.ಇ ಕಿಟ್, ದಿನಸಿ ಕಿಟ್ ನೀಡುವ ಮೂಲಕ ಸಾಮಾಜಿಕ ಕಳಕಳಿಯಿಂದ ಸಾರ್ವಜನಿಕ ಸೇವೆ ಮಾಡುತ್ತಿದ್ದು ನಮ್ಮ ರೋಟರಿ ಸಂಸ್ಥೆಯ ಮುಖ್ಯ ಧ್ಯೇಯ ವಾಗಿದೆ.
ರೋಟರಿಯನ್ ಪ್ರಧಾನ ಕಾರ್ಯದರ್ಶಿ ಡಾ.ವಿಜಯ್ ರಾಘವೇಂದ್ರ ಮಾತನಾಡಿ ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ತಾಲ್ಲೂಕಿನಾದ್ಯಂತ ನಾಳೆ ೧೨೦೦೦ ಬೃಹತ್ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು ಪ್ರತಿಯೊಬ್ಬರು ಭಯಪಡದೆ ತಮ್ಮ ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸಿಕೊಳ್ಳಲು ಲಸಿಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದು ತಿಳಿಸಿದರು.
ಕೊರೋನಾ ಸಂದರ್ಭದಲ್ಲಿ ಮಂಚೂಣಿಯಲ್ಲಿ ಮೊದಲಿಗರಾಗಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟು ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ವೈದ್ಯರುಗಳು, ನರ್ಸಗಳು, ದಾದಿಯರು ಡಿ.ಗ್ರೂಪ್ಸಿಬ್ಬಂದಿಗಳು ಹಾಗೂ ನಮ್ಮ ಸುತ್ತಮುತ್ತಿನ ಪರಿಸರ, ಪಟ್ಟಣದ ನೈರ್ಮಲ್ಯವನ್ನು ಶುಚಿತ್ವದಿಂದ ಕಾಪಾಡಿ ರೋಗ ನಿಯಂತ್ರಿಸುವಲ್ಲಿ ಪ್ರಮುಖರುಗಳಾದ ಪುರಸಭೆ ಪೌರ ಕಾರ್ಮಿಕರುಗಳಿಗೆ, ಕರೋನಾ ಸಂದರ್ಭದಲ್ಲಿ ಜನಸಾಮಾನ್ಯರೋಡನೆ ಬೀದಿ ರಸ್ತೆಗಳಿದು ಕಾನೂನು ಸುವ್ಯವಸ್ಥೆ ಕಾಪಾಡಿದ ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ , ಅಗ್ನಿ ಶಾಮಕ ಸಿಬ್ಬಂದಿಗಳಿಗೆ, ಹಾಗೂ ವಲಯ ಅರಣ್ಯ ಇಲಾಖೆ, ಪಶು ಪಾಲನಾ ಇಲಾಖೆ, ಸಿಬ್ಬಂದಿಗಳಿಗೆ ೧ ಲೀಟರ್, ಟೆಟ್ರಾಪ್ಯಾಕ್ ನಲ್ಲಿನ ಮ್ಯಾಂಗೋ ಲಸ್ಸಿ ತಂಪು ಪಾನೀಯ ಪ್ಯಾಕ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೋಟರಿಯನ್ ಕಾರ್ಯದರ್ಶಿ ಡಾ.ವಿಜಯ್ ರಾಘವೇಂದ್ರ, ಮಿಲಿಟರಿ ಶಿವಣ್ಣ, ಪ್ರಸನ್ನಕುಮಾರ್, ರಮೇಶ್, ಕೃಷ್ಣಪ್ಪ, ಬೀದಿಮನೆ, ಸಿ.ಡಿ.ಸುರೇಶ್, ಮಲ್ಲಿಕಾರ್ಜುನ್, ಗವಿರಂಗಯ್ಯ, ರಾಧ ಟಿ ವಿಜಯ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ರೋಟರಿ ಕ್ಲಬ್ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ತಂಪು ಪಾನೀಯಗಳನ್ನು ವಿತರಿಸಲಾಯಿತು.