Sunday, 24th November 2024

Colour Blazer fashion: ಚಳಿಗಾಲದ ಫ್ಯಾಷನ್‌ಗೆ ಬಂತು ಬಣ್ಣಬಣ್ಣದ ಬ್ಲೇಜರ್

| ಶೀಲಾ ಸಿ ಶೆಟ್ಟಿ, ಬೆಂಗಳೂರು
ಚಳಿಗಾಲದ ಫ್ಯಾಷನ್‌ನಲ್ಲಿ ಬಣ್ಣಬಣ್ಣದ ಬ್ಲೇಜರ್‌ಗಳು ಆಗಮಿಸಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ನಾನಾ ವರ್ಣದಲ್ಲಿ ಬಂದಿವೆ. ಅದರಲ್ಲೂ ಬ್ರೈಟ್ ಶೇಡ್‌ನ ಬ್ಲೇಜರ್‌ಗಳು (Colour Blazer fashion) ಕಾರ್ಪೋರೇಟ್ ಕ್ಷೇತ್ರದವರನ್ನು ಮಾತ್ರವಲ್ಲ, ಜೆನ್ ಜಿ ಯುವತಿಯರನ್ನು ಆಕರ್ಷಿಸುತ್ತಿವೆ.

ಬದಲಾದ ಬ್ಲೇಜರ್ ಕಾನ್ಸೆಪ್ಟ್ :
ಕಾರ್ಪೋರೇಟ್ ಕ್ಷೇತ್ರ ಹೊರತುಪಡಿಸಿದರೇ ಕೋಟ್ ಹಾಗೂ ಬ್ಲೇಜರ್ ಧರಿಸುವ ರಿವಾಜು ಕೇವಲ ಮದುವೆ ಮನೆಗಳಿಗೆ, ದೊಡ್ಡ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಈಗ ಈ ಮನೋಭಾವನೆ ಬದಲಾಗಿದೆ. ಆಫೀಸಿನ ಸೆಮಿನಾರ್‌ಗಳಲ್ಲಿ ಮಾತ್ರವಲ್ಲ, ಆಫೀಸ್ ಪಾರ್ಟಿಗಳಲ್ಲೂ ಇವನ್ನು ಧರಿಸಲಾರಂಭಿಸಿದ್ದಾರೆ.

ಕಾರ್ಪೋರೇಟ್ ಹುಡುಗಿಯರ ಲೇಯರ್ ಲುಕ್ :
ಬ್ಲ್ಯಾಕ್ ಬಣ್ಣದ ಬ್ಲೇಜರ್‌ಗಳು ಇದೀಗ ಸೈಡಿಗೆ ಸರಿದಿವೆ. ಕಲರ್ಫುಲ್ ಆಗಿ ಕಾಣಿಸುವ ಕಲರ್ ಬ್ಲೇಜರ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ನಿಯಾನ್, ಬ್ರೈಟ್ ಯೆಲ್ಲೋ, ರಾಯಲ್ ಬ್ಲ್ಯೂ, ರೆಡಿಯಂಟ್ ಗ್ರೀನ್ ಹಾಗೂ ಪಾಸ್ಟೆಲ್ ವರ್ಣದವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್.

ಸ್ಲಿಮ್ ಫಿಟ್ ಕಲರ್ ಬ್ಲೇಜರ್ಸ್ :
ಪರ್ಫೆಕ್ಟ್ ಬಿಎಂಐ ಹೊಂದಿರುವವರು ಸ್ಲಿಮ್ ಫಿಟ್ ಕಲರ್ ಬ್ಲೇಜರ್ ಧರಿಸಿದಲ್ಲಿ, ನೋಡಲು ಟ್ರೆಂಡಿಯಾಗಿ ಕಾಣಿಸುವುದು. ಉದ್ದಗಿರುವವರಿಗಂತೂ ಮತ್ತಷ್ಟೂ ಟಾಲ್ ಆಗಿ ಬಿಂಬಿಸುತ್ತವೆ. ಕೆಲವು ಸ್ಲಿಮ್ ಫಿಟ್ ಕಲರ್ ಬ್ಲೇಜರ್‌ಗಳಿಗೆ ಸೈಡ್ ಸ್ಲಿಟ್ಸ್ ಇರುತ್ತದೆ. ಒಟ್ಟಿನಲ್ಲಿ, ಅವರವರ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಇವನ್ನು ಧರಿಸಿದಾಗ ಮಾತ್ರ ನೋಡಲು ಪರ್ಫೆಕ್ಟ್ ಆಗಿ ಕಾಣಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ದೀನಾ.

ಆದರೆ, ದಪ್ಪ ಫ್ಯಾಬ್ರಿಕ್ ಹೊಂದಿರುವ ಕಲರ್‌ಫುಲ್ ಲೇಯರ್ ಬ್ಲೇಜರ್‌ಗಳನ್ನು ಧರಿಸುವಾಗ ಆದಷ್ಟೂ ಇನ್ನರ್ ಟೀ ಶರ್ಟ್, ಟಾಪ್ ಹಾಗೂ ಶರ್ಟ್‌ಗಳು ತೆಳುವಾಗಿರಬೇಕು. ಇಲ್ಲವಾದಲ್ಲಿ, ಉಸಿರುಗಟ್ಟಿದಂತಾಗಬಹುದು. ಕಂಫರ್ಟಬಲ್ ಫೀಲ್ ಆಗದಿರಬಹುದು ಎನ್ನುತ್ತಾರೆ.

ಔಟ್ಲುಕ್‌ಗಿರಲಿ ಪ್ರಾಧಾನ್ಯತೆ:
ಕಲರ್ ಬ್ಲೇಜರ್ ಧರಿಸಿದವರು ತಮ್ಮ ಔಟ್ಲುಕ್‌ಗೆ ಸಾಥ್ ನೀಡುವ ಹೇರ್‌ ಸ್ಟೈಲ್, ಫೂಟ್‌ವೇರ್ ಹಾಗೂ ಆಕ್ಸೆಸರೀಸ್‌ಗೂ ಮಾನ್ಯತೆ ನೀಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್ .

ಕಲರ್ ಬ್ಲೇಜರ್ ಪ್ರಿಯರಿಗೆ ಒಂದಿಷ್ಟು ಸಲಹೆ :

  • ಪ್ರಿಂಟೆಡ್ ಟೀ ಶರ್ಟ್ ಮೇಲೆ ಕಲರ್ ಬ್ಲೇಜರ್ ಧರಿಸಿ. ಯಂಗ್ ಲುಕ್ ನೀಡುತ್ತದೆ.
  • ಪ್ರಿಂಟೆಡ್ ಫುಲ್ ಸ್ಲೀವ್ ಟೀ – ಶರ್ಟ್ ಮೇಲೆ ಆಫ್ ಲೈಟ್ ಪಿಂಕ್ ಬ್ಲೇಜರ್ ಹಾಗೂ ಕಾಟನ್ ಪ್ಯಾಂಟ್ ಕ್ಲಾಸಿ ಲುಕ್ ನೀಡುತ್ತದೆ.
  • ಪ್ರಿಂಟೆಡ್ ಹಾಫ್ ಸ್ಲೀವ್ ಟೀ ಶರ್ಟ್ ಜತೆಗೆ ಬ್ಲಾಕ್ ಜೀನ್ಸ್ ಇದಕ್ಕೆ ಒಪ್ಪುವ ರಾಯಲ್ ಬ್ಲ್ಯೂ ಬ್ಲೇಜರ್ ಕ್ಲಾಸಿ ಲುಕ್‌ನಲ್ಲಿ ಕಂಗೊಳಿಸುವಂತೆ ಮಾಡುತ್ತದೆ.
  • ವರ್ಕಿಂಗ್ ವುಮೆನ್ಸ್ ಸ್ಲಿಟ್ಸ್ ಇರುವಂತದ್ದನ್ನು ಚೂಸ್ ಮಾಡಬಹುದು.
  • ಸ್ವಿಂಗ್ ಟೀ ಶರ್ಟ್, ಕಾಲರ್‌ಲೆಸ್ ಟೀ ಶರ್ಟ್, ಪ್ಲೇನ್ ಟಾಪ್ಸ್ ಜತೆ ಧರಿಸಬಹುದು.
  • ಜೆಗ್ಗಿಂಗ್ಸ್, ಟ್ರೆಗ್ಗಿಂಗ್ಸ್ ಹಾಗೂ ಟೈಟ್ ಜೀನ್ಸ್‌ನೊಂದಿಗೂ ಧರಿಸಬಹುದು.
  • ಬ್ಲೇಜರ್‌ಗೆ ಲೆಗ್ಗಿಂಗ್ಸ್ ಧರಿಸುವುದು ಬೇಡ.

( ಲೇಖಕಿ : ಫ್ಯಾಷನ್ ಪತ್ರಕರ್ತೆ )