ನವದೆಹಲಿ: ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi) ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಅಧ್ಯಕ್ಷರನ್ನೇ (AICC President) ನಕಲಿ ಗಾಂಧಿ ಕುಟುಂಬ ಹೊರಗಟ್ಟಿದೆ. ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆಯಂಥವರಿಗೆ (Mallikarjun Kharge) ಬೆಲೆಯಿಲ್ಲ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಪ್ರಹ್ಲಾದ ಜೋಶಿ (Prahlad Joshi) ಟೀಕಿಸಿದ್ದಾರೆ.
ವಯನಾಡಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಹೊರಗೆ ಕಳಿಸುವ ಮೂಲಕ ತಮ್ಮ ನಡೆ ಏನೆಂಬುದನ್ನು ತೋರ್ಪಡಿಸಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ನಿಷ್ಠಾವಂತ, ಹಿರಿಯ ದಲಿತ ನಾಯಕನಿಗೆ ಅವಮಾನ ಮಾಡಲಾಗಿದೆ. ಆದರೂ ಅಲ್ಲಿ ಸಹನೆಯೇ ಎಂದು ಜೋಶಿ ಪ್ರಶ್ನಿಸಿದ್ದಾರೆ. ನಕಲಿ ಗಾಂಧಿ ಕುಟುಂಬದ ಜೊತೆ ಬೆರೆಯಬೇಕೆಂದರೆ ಸ್ವತಃ ಕಾಂಗ್ರೆಸ್ ಅಧ್ಯಕ್ಷರೇ ಕ್ಯೂನಲ್ಲಿ ನಿಲ್ಲಬೇಕು. ಇದು ಇಂದಿನ ಗಾಂಧಿಯೇತರ ಕಾಂಗ್ರೆಸ್ಸಿಗರ ಸ್ಥಿತಿ. ಪಕ್ಷದ ಹಿರಿಯ ನಾಯಕ ಖರ್ಗೆ ಅವರನ್ನು ಕಾಂಗ್ರೆಸ್ನ ನಕಲಿ ಗಾಂಧಿ ಕುಟುಂಬ ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದು ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.
ಇದನ್ನೂ ಓದಿ: Pralhad Joshi: ಭಯೋತ್ಪಾದಕ ಪಕ್ಷ ಕಾಂಗ್ರೆಸ್ ಎನ್ನಬೇಕಿದ್ದ ಖರ್ಗೆ ಬಾಯ್ತಪ್ಪಿ ಬಿಜೆಪಿ ಎಂದಿದ್ದಾರೆ: ಜೋಶಿ