Saturday, 5th October 2024

ಕಾಲಮಿತಿಯಲ್ಲಿ ಕಾಂಗ್ರೆಸ್‌ ಕೇಡರ್‌ ಪಕ್ಷ

ವಿಶ್ವವಾಣಿ ಸಂದರ್ಶನ: ಶಿವಕುಮಾರ್‌ ಬೆಳ್ಳಿತಟ್ಟೆ

ಪಕ್ಷದಲ್ಲಿ ಯುವಜನತೆ ಕಡಿಮೆ ಎನ್ನುವ ಕೊರಗು ನಿವಾರಿಸಿ, ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಿ, ಪಕ್ಷವನ್ನು
ಬಲಪಡಿಸಿ ಅಧಿಕಾರಕ್ಕೆ ತರುವ ಹೊಸ ಚಿಂತನೆ ಮತ್ತು ತಮ್ಮ ಕಾರ್ಯವೈಖರಿಯ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ ಗೊಂಡಿರುವ ಆರ್.ಧ್ರುವನಾರಾಯಣ್ ಅವರು ವಿಶ್ವವಾಣಿ ಜತೆಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ನಿಮಗೆ ಕಾರ್ಯಾಧ್ಯಕ್ಷರ ಹುದ್ಧೆ ಸಿಗುವ ನಿರೀಕ್ಷೆ ಇತ್ತೇ?
ನಾನು ಅನೇಕ ವರ್ಷಗಳಿಂದ ಪಕ್ಷದ ವಿವಿಧ ಹಂತದಲ್ಲಿ ದುಡಿದಿದ್ದೇನೆ. ಪಕ್ಷ ಸಂಘಟನೆ ಮತ್ತು ಸೇವೆಯನ್ನು ಚಾಮರಾಜನಗರ ಮತ್ತು ಮೈಸೂರು ಭಾಗಕ್ಕೆ ಸೀಮಿತಗೊಳಿಸಿದ್ದೆ. ಆದರೆ ಪಕ್ಷದ ವರಿಷ್ಠರು ಹಾಗೂ ಡಿ.ಕೆ.ಶಿವಕುಮಾರ್ ಅವರು ಈ ಅವಕಾಶ
ಒದಗಿಸಿzರೆ. ಇದಕ್ಕೆ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಸಹಕಾರ ನೀಡಿದ್ಧಾರೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಈಗಾಗಲೇ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ.

ಐವರು ಕಾರ್ಯಾಧ್ಯಕ್ಷರಿರುವಾಗ ಈ ಹುದ್ದೆಗೆ  ಹೆಚ್ಚು ಮಹತ್ವ ಇದೆಯೇ?
ಖಂಡಿತ ಇದೆ. ಎಲ್ಲಾ ಪಕ್ಷಗಳಲ್ಲೂ ಜವಾ ಬ್ದಾರಿಗಳನ್ನು ಹಂಚಿಕೆ ಮಾಡಲು ಹೀಗೆ ಮಾಡ ಲಾಗುತ್ತದೆ. ಅದೇ ರೀತಿ ಪಕ್ಷದ ವರಿಷ್ಠರು ವಿವಿಧ ಹಂತದಲ್ಲಿ ಪಕ್ಷ ಸಂಘಟಿಸಲು ಐವರಿಗೆ ಕಾರ್ಯಾಧ್ಯಕ್ಷ ಹುದ್ದೆ ನೀಡಿದ್ಧಾರೆ. ಇದನ್ನು ನಾವೆ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಿ ಪಕ್ಷವನ್ನು ಬಲಪಡಿಸುತ್ತೇವೆ.

ಬೇರೆ ಕಾರ್ಯಾಧ್ಯಕ್ಷರಿಗಿಂತ ನಿಮ್ಮ ಕಾರ್ಯ ವೈಖರಿ ಹೇಗಿರುತ್ತದೆ ?
ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಹೇಳಿರುವಂತೆ ಕಾಂಗ್ರೆಸ್ ಅನ್ನು ಕೇಡರ್ ಪಕ್ಷವನ್ನಾಗಿ ಮಾಡಬೇಕೆಂದು ನಿಶ್ಚಯಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ತರಬೇತಿಗಳನ್ನು ಆರಂಭಿಸಿದ್ದೇನೆ. ಇದರಿಂದ ಪಕ್ಷದಲ್ಲಿ ಯುವಜನತೆ ಕಡಿಮೆ ಎನ್ನುವ ಕೊರಗು
ನಿವಾರಿಸುತ್ತೇನೆ. ನಮ್ಮ ಅಧ್ಯಕ್ಷರ ಘೋಷಣೆಯಂತೆ ಸಂಘರ್ಷ ಮತ್ತು ಹೋರಾಟದ ಮೂಲಕ ಕೇಂದ್ರದ ಎಪಿಎಂಸಿ ಕಾಯಿದೆ, ಭೂ ಸುಧಾರಣೆ, ಕಾರ್ಮಿಕ ಕಾಯಿದೆಗಳಿಂದ ಜನರಿಗೆ ಆಗುವ ಅನ್ಯಾಯಗಳ ವಿರುದ್ಧ ಹೋರಾಟಗಳನ್ನು ರೂಪಿಸಲಾಗುತ್ತದೆ.

ಬಿಜೆಪಿ ಅಲೆ ಎನ್ನುತ್ತಿರುವಾಗ ಯಾವ ವಿಚಾರ ಮುಂದಿಟ್ಟು ಕಾಂಗ್ರೆಸ್ ಸಂಘಟಿಸುತ್ತೀರಿ?
ದೇಶ ಪ್ರಗತಿ ಆಗುವುದಕ್ಕೆ ಕಾಂಗ್ರೆಸ್, ನೆಹರು ಆದಿಯಾಗಿ ಮನ ಮೋಹನ್ ಸಿಂಗ್ ವರೆಗೂ ನೀಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿ ಸಬೇಕಿದೆ. ಹಾಗೆಯೇ ರಾಜ್ಯ ದಲ್ಲಿ ದೇವರಾಜ ಅರಸು ಕಾಲದಿಂದ ಸಿದ್ದರಾ ಮಯ್ಯ ಅವರ ಕಾಲದ ಕಾರ್ಯ ಕ್ರಮಗಳನ್ನು ಜನರಿಗೆ ತಿಳಿಸಿ ಪಕ್ಷಕ್ಕೆ ಹೆಚ್ಚಿನ ರೀತಿಯಲ್ಲಿ ಯುವಕರು ಬರುವಂತೆ ಮಾಡುತ್ತೇವೆ.

ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಹೆಚ್ಚಾಗುತ್ತಿರುವ ಬಗ್ಗೆ ನಿಮಗೆ ಮಾಹಿತಿ ಇದೆಯೇ?
ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಏಕೆಂದರೆ ಕಾಂಗ್ರೆಸ್‌ನಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ. ಪಕ್ಷದ ಏನೇ ಇದ್ದರೂ ಅದನ್ನು ಸರಿಪಡಿ ಸಿಕೊಂಡು ಹೋಗುತ್ತೇವೆ. ವರಿಷ್ಠರ ಸೂಚನೆಯಂತೆ ನಡೆಯುತ್ತೇವೆ. ಪಕ್ಷದ ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ಎಲ್ಲಾ ಹಿರಿಯ ನಾಯಕರನ್ನು ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಬರೀ ಆರೋಪ ಮಾಡಿ ಸುಮ್ಮನಾಗುತ್ತಿದೆ ಎನ್ನುವುದು ನಿಜವೇ?
ಕೋವಿಡ್ ಪರಿಸ್ಥಿತಿಯಿಂದ ಕಾಂಗ್ರೆಸ್ ಹೋರಾಟಗಳನ್ನು ರೂಪಿಸಲಾಗಿಲ್ಲ. ಹಾಗಂತ ಕಾಂಗ್ರೆಸ್ ಕುಳಿತಿಲ್ಲ. ಕೋವಿಡ್ ಅಕ್ರಮ ಗಳ ಬಗ್ಗೆ ಹೋರಾಡಿದೆ. ಮುಂದಿನ ಹೋರಾಟಗಳನ್ನು ರೂಪಿಸಲಾಗುತ್ತಿದೆ. ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಚ್. ವಿಶ್ವನಾಥ್ ಅವರು ಮುಖ್ಯ ಮಂತ್ರಿ ವಿರುದ್ಧ ನೇರ ಆರೋಪ ಮಾಡಿದ್ಧಾರೆ. ಆದರೂ ಅವರಿಗೆ ನೋಟೀಸ್ ನೀಡಿಲ್ಲ. ಅಂದರೆ ಅಕ್ರಮ ಆಗಿರುವುದು ನಿಜ ಅಲ್ಲವೇ?