Saturday, 14th December 2024

ಭಾರತದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ ಸಂವಿಧಾನ ಅತಂಕಕಾರಿ ಪರಿಸ್ಥಿತಿಯಲ್ಲಿದೆ

ಹರಪನಹಳ್ಳಿಯಲ್ಲಿ ಎಂ.ಪಿ.ಲತಾ,ಮಲ್ಲಿಕಾರ್ಜುನ್

ಹರಪನಹಳ್ಳಿ: ಭಾರತ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಮಾನ್ಯ ರಾಹುಲ್ ಗಾಂಧಿಯವರು ಇಂದು ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ೩೫೭೦ ಕಿಮೀ ಸುಮಾರು ೧೫೦ ದಿನಗಳ ಭಾರತ್ ಜೋಡೋ ಯಾತ್ರೆ ಕೈಗೊಂಡಿರುವುದು ಭಾರತದ ಪ್ರಜಾ ಪ್ರಭುತ್ವದ ಉಳಿವಿಗಾಗಿಯೇ ಹೊರತು ಕಾಂಗ್ರೆಸ್ ಪಕ್ಷದ ಅಧಿಕಾರಕ್ಕಾಗಿ ಅಲ್ಲ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯ ದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ನ ಆವರಣದಲ್ಲಿರುವ ಗಾಂಧಿ ಮೆಮೊರಿ ಕೊಠಡಿಯಲ್ಲಿ ಗಾಂಧಿ ಪ್ರತಿಮೆಯ ಬಳಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಬೆಂಬಲವಾಗಿ ಗಾಂಧಿ ಪ್ರತಿಮೆಗೆ ಫುಷ್ಪಮಾಲೆ ಅರ್ಪಿಸಿ ಸಭೆಯನ್ನು ದ್ದೇಶಿಸಿ ಮಾತನಾಡಿದ ಅವರು,ಭಾರತದ ಪ್ರಜಾಪ್ರಭುತ್ವ ಗಂಡಾ0ತರದಲ್ಲಿದೆ, ಸ0ವಿಧಾನ ಆತಂಕಕಾರಿಯಲ್ಲಿದೆ, ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಚಿಂತನೆಗೆ ವಿರುದ್ಧವಾದ ಸರ್ಕಾರ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೆಲಸ ಮಾಡುತ್ತಲಿದೆ ಎಂದು ಆಪಾದಿಸಿದರು.

ಭಾರತ ಐಕ್ಯತಾ ಯಾತ್ರೆ ನಮ್ಮ ರಾಜ್ಯಕ್ಕೆ ಕೇರಳದ ವಯ್ನಾಡಿನಿಂದ ಗುಂಡ್ಲುಪೇಟೆ ಮೂಲಕ ಅಕ್ಟೋಬರ್ ನಲ್ಲಿ ತಲುಪಲಿದೆ, ನಮ್ಮ ಬಳ್ಳಾರಿ ಮತ್ತು ವಿಜಯನಗರದ ಮೂಲಕ ಹಾದು ಹೋಗಲಿರುವ ಸದ್ಭಾವನಾ ಯಾತ್ರೆಗೆ ನಾವೂ ಬೆಂಬಲವಾಗಿ, ರೈತರ ಮತ್ತು ಬಡವರ ಉಳಿವಿಗಾಗಿ ನಿಲ್ಲಲೇ ಬೇಕಾಗಿದೆ ಎಂದರು.

ಪುರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಂ.ವಿ.ಅ0ಜೀನಪ್ಪ ಮಾತನಾಡಿ, ದೇಶದಲ್ಲಿ ನಿರು ದ್ಯೋಗ ಸಮಸ್ಯೆ ಹೆಚ್ಚಾಗಿದೆ ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ನಾವು ನೀವು ಎಲ್ಲರೂ ಕಾರ್ಯನಿರ್ವಹಿಸಬೇಕಾಗಿದೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿ0ದ ಕೋಮು ಹೆಚ್ಚಾಗುತ್ತಿದ್ದು ಅಮಾಯಕ ಯುವಕರು ಪ್ರಣವನ್ನು ಕಳೆದುಕೊಳ್ಳುತ್ತಿದ್ದಾರೆ ಯುವಕರು ದೇಶ ಉಳಿವಿಗಾಗಿ ಯುವಕರ ಪಾತ್ರ ಬಹಳ ಮುಖ್ಯ ಆದ್ದರಿಂದ ಕಾಂಗ್ರೆಸ್ ಪಕ್ಷದ ಯುವಕರು ರಾಹುಲ್ ಗಾಂಧಿಯವರ ನಡೆಗೆ ನಾವುಗಳು ಸಹಾ ಹೆಜ್ಜೆ ಹಾಕುವಂತೆ ಕಾರ್ಯವನ್ನು ಮಾಡೋಣ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷರಾದ ಮತ್ತೂರು ಬಸವರಾಜ್, ಹರಿಯಮ್ಮನಹಳ್ಳಿ ಶಿವರಾಜ್,ಜೀಷನ್,ರಿಯಾಜ್, ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಗಿಮಸಲವಾಡದ ನರೇಶ್,ನಂದಿಬೇವೂರು ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್, ಬಾಲಾಜಿ ಮಾತನಾಡಿದರು.

ಸಭೆ ಆರಂಭದಲ್ಲಿ ಸಚಿವರಾಗಿದ್ದ ಉಮೇಶ್ ಕತ್ತಿಯವರಿಗೆ ಒಂದು ನಿಮಿಷ ಮೌನಾಚರಣೆ ಅರ್ಪಿಸಿ ಅವರ ಧೀಮಂತ ನಾಯಕತ್ವವನ್ನು ನೆನಪಿಸಿಕೊಳ್ಳಲಾಯಿತು.

ಪುರಸಭಾ ಸದಸ್ಯರಾದ ಟಿ. ವೆಂಕಟೇಶ ,ಚಿಕ್ಕೇರಿ ಬಸಪ್ಪ,ಹುಲಿಕಟ್ಟಿ ಚಂದ್ರಪ್ಪ, ಉದಯಶಂಕರ,ಯಡಿಹಳ್ಳಿ ಶಿವರಾಮಪ್ಪ, ಸಾಸ್ವಿಹಳ್ಳಿ ನಾಗರಾಜ್, ಸಹನಾ,ವನಜಾಕ್ಷಮ್ಮ,ರತ್ನಮ್ಮ, ರೇಣುಕಮ್ಮ,ಹಾಲಮ್ಮ ಸೇರಿದಂತೆ,ಹಲುವಾಗಲು ಹನುಮಂತಪ್ಪ, ಮAಜುನಾಥ್,ಪ್ರಶಾAತ್ ಪಾಟೀಲ್,ಬಳೆಗಾರ ಅಶೋಕ್,ಮದ್ದಾನಸ್ವಾಮಿ,ಕಿತ್ತೂರು ಮಲ್ಲಪ್ಪ ಸೇರಿದಂತೆ ಗ್ರಾ.ಪಂ.ಎಲ್ಲಾ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು. ಚಿಗಟೇರಿ ಬ್ಲಾಕ್ ಸೇವಾದಳದ ಅಧ್ಯಕ್ಷರಾದ ನಂದಿಬೇವೂರು ಬಸವರಾಜ್ ಮತ್ತು ಹರಪನಹಳ್ಳಿ ಬ್ಲಾಕ್ ಸೇವಾದಳದ ಉಪಾಧ್ಯಕ್ಷರಾದ ಹುಲಿಕಟ್ಟಿ ಗುರುಮೂರ್ತಿಯವರಿಗೆ ಇದೇ ಸಂದರ್ಭದಲ್ಲಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಆದೇಶ ಪತ್ರ ವಿತರಿಸಿದರು.