Wednesday, 11th December 2024

ಮತ್ತೆ ಹಸಿರು ವಲಯದಿಂದ ಕೆಂಪು ವಲಯಕ್ಕೆ ಕಾಲಿಟ್ಟ ಕರೋನ

#corona

ತಾಲೂಕಿನಲ್ಲಿ 42 ಮಂದಿಗೆ ಸೋಂಕು  

ಪಾವಗಡ : ಕೊರೋನ ಎರಡನೆ ಅಲೆ ತಾಲೂಕಿನಲ್ಲಿ ವ್ಯಾಪಕವಾಗಿ ಹರಡು ತ್ತಿದ್ದು, ಶುಕ್ರವಾರ ಒಂದೇ ದಿನ 42 ಕರೋನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿರುವುದಾಗಿ ಜಿಲ್ಲಾ ಆರೋಗ್ಯ ಇಲಾಖೆ ಯಿಂದ ಮಾಹಿತಿ ಹೊರಬಿದ್ದಿದೆ.

ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಕರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ತಾಲೂಕಿನ ಆಡಳಿತ.ಪುರಸಭೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದ್ದರೂ ನಿಯಮ ಪಾಲಿಸುವಲ್ಲಿ ಜನತೆ ಕ್ಯಾರೆ ಅನ್ನುತ್ತಿಲ್ಲ. ಮಾಸ್ಕ್ ಸ್ಯಾನಿಟೈಜರ್ , ಸಾಮಾಜಿಕ ಅಂತರ ಪಾಲಿಸುವಲ್ಲಿ ತಾಲೂಕಿನ ಜನತೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಪಟ್ಟಣದ ಹಳೇಕುಂಬಾರರ ಬೀದಿ ಸೇರಿದಂತೆ ತಾಲೂಕಿನ ವೈಎನ್ ಹೊಸಕೋಟೆ,  ವದನಕಲ್ಲು, ವೆಂಕಟಾಪುರ, ರಾಜವಂತಿ, ಬ್ಯಾಡನೂರು, ಪಳವಳ್ಳಿ, ಲಿಂಗದಹಳ್ಳಿ, ಅರಸೀಕೆರೆ, ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಸುತ್ತ ಮುತ್ತ ಸೇರಿದಂತೆ ಇತರೆ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ದೃಡಪಟ್ಟಿದ್ದು, ಶುಕ್ರವಾರ ಒಂದೇ ದಿನ 42 ಕೊರೋನಾ ಪ್ರಕರಣಗಳು ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಹಿಂದಿನ 45 ಪ್ರಕರಣಗಳು ಸೇರಿದಂತೆ ಒಟ್ಟು 87 ಮಂದಿಗೆ ತಾಲೂಕಿನಲ್ಲಿ ಕರೋನಾ ಸೋಂಕು ದೃಡಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮೂಲಗಳಿಂದ ಲಭ್ಯವಾಗಿದೆ. ಸೋಂಕು ತಡೆಗಟ್ಟುವಲ್ಲಿ ತಾಲೂಕು ಆಡಳಿತ ಮುಂದಾಗಬೇಕಿದೆ.