Tuesday, 15th October 2024

ಆನಂದಯ್ಯರವರ ಕರೋನಾ ಮದ್ದು ವಿತರಣೆ

ವೈ.ಎನ್.ಹೊಸಕೋಟೆ : ಗ್ರಾಮದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆಂದ್ರಪ್ರದೇಶದ ಕೃಷ್ಣಪಟ್ಟಣಂ ನ ಆನಂದಯ್ಯ ರವರು ಸಿದ್ದಪಡಿಸಿರುವ ಕೊರೋನಾ ಮದ್ದನ್ನು ವಾಸವಿ ಸೌಹರ‍್ದ ಪತ್ತಿನ ಸಹಕಾರಿ ನಿಯಮಿತ ಮತ್ತು ಪ್ರಪಂಚ ರ‍್ಯವೈಶ್ಯ ಮಹಾಸಭಾದ ಸಹಯೋಗದಲ್ಲಿ ಸರ‍್ವಜನಿಕರಿಗೆ ಸೋಮವಾರ ವಿತರಿಸಲಾ ಯಿತು.

ಈ ಸಂರ‍್ಭದಲ್ಲಿ ವಾಸವಿ ಸೌಹರ‍್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಇ.ವಿ.ಶ್ರೀಧರ್ ಮಾತನಾಡಿ ಸ್ಥಳೀಯ ಕೊರೋನಾ ಸಮಸ್ಯೆಯನ್ನು ಆನಂದಯ್ಯರವರ ಬಳಿ ವಿವರಿಸಿದಾಗ ಅವರು ಔಷದಿಯನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಔಷದಿಯಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಔಷದಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಕರೋನಾ ಸೋಂಕು ತಗಲುವ ಪ್ರಮಾಣ ಕಡಿಮೆ ಇರುತ್ತದೆ. ಅವಶ್ಯಕತೆ ಇದ್ದವರು ಮಾತ್ರ ಈ ಔಷದಿಯನ್ನು ಬಳಸಿ. ಅನಾವಶ್ಯಕವಾಗಿ ಪಡೆದು ವ್ರ‍್ಥ ಮಾಡಬೇಡಿ. ಇಂದಿನ ಕರ‍್ಯಕ್ರಮದಲ್ಲಿ ಸುಮಾರು ಏಳು ನೂರು ಮಂದಿಗೆ ಔಷದಿ ವಿತರಣೆ ಮಾಡಲಾಗಿದೆ. ಅವಶ್ಯಕತೆ ಇದ್ದವರು ವಾಸವಿ ಬ್ಯಾಂಕಿನಲ್ಲಿ ಸಂರ‍್ಕಿಸಿದರೆ ಔಷದಿ ದೊರೆಯುತ್ತದೆ ಎಂದರು.

ಕರ‍್ಯಕ್ರಮದಲ್ಲಿ ಎಂ.ಆರ್.ಶಿವಾನಂದಗುಪ್ತ, ಟಿ.ವಿ.ವೆಂಕಟೇಶ್, ಎನ್.ಎಸ್.ಮಂಜುನಾಥ, ಎನ್.ಆರ್.ಅಶ್ವಥ್ ಕುಮಾರ್, ಎಸ್.ಸಿ.ಬದರಿ , ರಮೇಶ್ ಬಾಬು, ಡಿ.ವಿ.ಅನಿಲ್ ಕುಮಾರ್, ರಘು ಮತ್ತು ರಾಘವೇಂದ್ರ ಇದ್ದರು.