ಆರೋಗ್ಯ ಕಾರ್ಯ ಕರ್ತರಿಗೆ ಮೊದಲ ಆದ್ಯತೆ
ಎರಡನೇ ಹಂತದಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಆಶಾ ಕಾರ್ಯಕರ್ತರಿಗೆ ಲಸಿಕೆ
ಮೂರನೇ ಹಂತದಲ್ಲೇ ಜನಸಾಮಾನ್ಯರಿಗೆ ಲಸಿಕೆ
ಬೆಂಗಳೂರು : ರಾಜ್ಯದಲ್ಲಿ ಮುಂಬರುವ ಸೋಮವಾರದಿಂದ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರದಿಂದ ರಾಜ್ಯಕ್ಕೆ ನಾಳೆ ಲಸಿಕೆ ಬರಲಿದ್ದು, ಸೋಮವಾರ(ಜ.11)ದಿಂದ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ 13.90 ಲಕ್ಷ ಡೋಸ್ ಬರಲಿದ್ದು, ಇಂದು 263 ಸ್ಥಳಗಳಲ್ಲಿ ಡ್ರೈರನ್ ಪ್ರಾರಂಭವಾಗಲಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕ್ಲಿನಿಕಲ್ ಟ್ರಯಲ್ ಸೇರಿದಂತೆ ಲಸಿಕೆಗೆ ಮೂರು ಹಂತದ ಪರಿಶೀಲನೆ ನಡೆಸಲಾಗುತ್ತದೆ. ವಿಜ್ಞಾನಿಗಳು, ಸಂಶೋಧಕರು ಮೇಲೆ ನಂಬಿಕೆ ಇಡೋಣ, ಸೋಮವಾರದಿಂದ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ಹೇಳಿದರು.
ಇತ್ತೀಚಿನ ಮಾಹಿತಿ ಪ್ರಕಾರ, ಸೋಮವಾರದಿಂದ ನೀಡಲಾಗುವ ಕೊರೋನಾ ಲಸಿಕೆಯನ್ನು ಆರಂಭದಲ್ಲಿ ಆರೋಗ್ಯ ಕಾರ್ಯ ಕರ್ತರಿಗೆ ಮಾತ್ರ ನೀಡಲಾಗುವುದು. ಬಳಿಕ ಜನಸಾಮಾನ್ಯರು ಲಸಿಕೆ ಪಡೆಯುವರು ಎಂದು ತಿಳಿದು ಬಂದಿದೆ.
ಎರಡನೇ ಹಂತದಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಆಶಾ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.
ಆದರೆ, ಮೂರನೇ ಹಂತದಲ್ಲೇ ಜನಸಾಮಾನ್ಯರಿಗೆ ಲಸಿಕೆ ಲಭ್ಯವಾಗಲಿದೆ.