Friday, 22nd November 2024

Corset Cape Gown Fashion: ಸೆಲೆಬ್ರಿಟಿ ಲುಕ್‌‌‌ಗಾಗಿ ಬಂದಿದೆ ಅತ್ಯಾಕರ್ಷಕ ಕಾರ್ಸೆಟ್‌ ಕೇಪ್‌ ಗೌನ್‌!

Corset Cape Gown Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪಾರ್ಟಿ ಪ್ರಿಯರಿಗಾಗಿ ಇದೀಗ ಅತ್ಯಾಕರ್ಷಕ ಕಾರ್ಸೆಟ್‌ ಕೇಪ್‌ ಗೌನ್‌ಗಳು ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ. ಅದರಲ್ಲೂ ಸೆಲೆಬ್ರಿಟಿ ಲುಕ್‌ ಬಯಸುವ ಫ್ಯಾಷನ್‌ ಪ್ರಿಯ ಹುಡುಗಿಯರಿಗಾಗಿಯೇ ಮಾರುಕಟ್ಟೆಯಲ್ಲಿ ನಾನಾ ಶೈಲಿಯ ವೈವಿಧ್ಯಮಯ ಕಾರ್ಸೆಟ್‌ ಕೇಪ್‌ ಗೌನ್‌ಗಳು (Corset Cape Gown Fashion) ಲಗ್ಗೆ ಇಟ್ಟಿವೆ. ಇದೀಗ ಬಿಡುಗಡೆಗೊಂಡಿರುವ ಕಾರ್ಸೆಟ್‌ ಗೌನ್‌ಗಳು, ಒಂದಕ್ಕಿಂತ ಒಂದು ವಿಭಿನ್ನ ರೂಪದಲ್ಲಿ, ಆಕರ್ಷಕ ಡಿಸೈನ್‌ಗಳಲ್ಲಿ ಮೂಡಿಬರುತ್ತಿವೆ. ಅವುಗಳಲ್ಲಿ ಕೆಲವಂತೂ ಡಾರ್ಕ್‌ ಶೇಡ್‌ನಲ್ಲಿ ಬಂದಿದ್ದು, ಹೆಚ್ಚು ಚಾಲ್ತಿಯಲ್ಲಿವೆ ಎನ್ನುತ್ತಾರೆ ಅನಿಲ್ಹಾ ಸ್ಟುಡಿಯೋ ಡಿಸೈನರ್‌ಗಳು.

ರಿಪ್ಲಿಕಾ ಕಾರ್ಸೆಟ್‌ ಕೇಪ್‌ ಗೌನ್‌ಗಳ ಹವಾ

ಇನ್ನು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಪಾರ್ವತಿ ನಾಯರ್‌ ಕಾಣಿಸಿಕೊಂಡಂತಹ ಬಾಡಿಕಾನ್‌ ಕಾರ್ಸೆಟ್‌ ಕೇಪ್‌ ಗೌನ್‌ ಈಗಾಗಲೇ ಸಖತ್‌ ಸದ್ದು ಮಾಡಿದೆ. ಈ ಗೌನ್‌ನ ರಿಪ್ಲಿಕಾ ಈಗಾಗಲೇ ಎಲ್ಲೆಡೆ ನಾನಾ ಕಲರ್‌ಗಳಲ್ಲಿ ಬಿಡುಗಡೆಗೊಂಡು ಬೇಡಿಕೆ ಸೃಷ್ಟಿಸಿಕೊಂಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಪಾರ್ವತಿ ನಾಯರ್‌, ನಟಿ

ಏನಿದು ಕಾರ್ಸೆಟ್‌ ಕೇಪ್‌ ಗೌನ್‌

ವೆಸ್ಟ್ ಲೈನ್‌ ಮೇಲ್ಭಾಗದಲ್ಲಿ ಬ್ರಾಲೆಟ್‌ ಡಿಸೈನ್‌ನಂತೆ ಕಾಣುವ ಡ್ರೆಸ್‌, ಕಾರ್ಸೆಟ್‌ ವಿನ್ಯಾಸ ಹೊಂದಿರುತ್ತದೆ. ಇದು ಫಿಟ್ಟಾಗಿ ಕೂರುವುದರಿಂದ ಬಾಡಿಕಾನ್‌ ಕಾರ್ಸೆಟ್‌ ಗೌನ್‌ ಎಂದೂ ಕೂಡ ಕರೆಯಲಾಗುತ್ತದೆ. ಸಿಂಪಲ್ಲಾಗಿ ಹೇಳುವುದಾದಲ್ಲಿ ಇದೊಂದು ವೆಸ್ಟರ್ನ್‌ ಶೈಲಿಯ ವಿನ್ಯಾಸವಾಗಿದೆ. ದೇಹದ ಮೇಲ್ಭಾಗವನ್ನು ತೀರಾ ಟೈಟಾಗಿರುವ ವಿನ್ಯಾಸದಿಂದ ರೂಪಿಸಲಾಗಿರುತ್ತದೆ. ಇದಕ್ಕೆ ಕಾರ್ಸೆಟ್‌ ಎನ್ನಲಾಗುತ್ತದೆ. ಇನ್ನುಳಿದಂತೆ, ಕೆಳಗೆ ಡ್ರೇಪ್‌ ಮಾಡಿದಂತಹ ಗೌನ್‌ ವಿನ್ಯಾಸ ಲೂಸಾಗಿರುತ್ತದೆ. ನೋಡಲು ಸಾಮಾನ್ಯ ಗೌನ್‌ನಂತೆ ಇದು ಕಾಣಿಸುವುದಿಲ್ಲ. ಬದಲಿಗೆ ಚಿತ್ರ-ವಿಚಿತ್ರ ಡ್ರೇಪಿಂಗ್‌ ಹೊಂದಿರುತ್ತದೆ. ಇನ್ನು ಕೆಲವು ಗೌನ್‌ಗಳಿಗೆ ಅಟ್ಯಾಚ್‌ ಅಥವಾ ಡಿಟ್ಯಾಚಬಲ್‌ ಕೇಪ್‌ ಅಳವಡಿಸಲಾಗಿರುತ್ತದೆ. ಇವುಗಳೊಂದಿಗೆ ಧರಿಸಿದಾಗ ಇವನ್ನು ಕೇಪ್‌ ಗೌನ್‌ ಎನ್ನಲಾಗುತ್ತದೆ ಎಂದು ವಿವರಿಸುತ್ತಾರೆ ಫ್ಯಾಷನಿಸ್ಟಾ ಅಬ್ರಾಹರ್‌.

ಟ್ರೆಂಡ್‌ನಲ್ಲಿರುವ ಕಾರ್ಸೆಟ್‌ ಗೌನ್‌ಗಳು

ಕಾರ್ಸೆಟ್‌ ಹೊಂದಿರುವಂತಹ ಬಾಡಿಕಾನ್‌ ಗೌನ್‌, ಫಿಶ್‌ಟೇಲ್‌ ವಿನ್ಯಾಸ ಹೊಂದಿರುವಂತವು, ಅಟ್ಯಾಚ್‌ ಆಗಿರುವಂತಹ ಕೇಪ್‌ ವಿನ್ಯಾಸ ಇರುವಂತವು ಈ ಸೀಸನ್‌ನ ಟ್ರೆಂಡ್‌ನಲ್ಲಿವೆ. ಇವು ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿನತ್‌.

ಈ ಸುದ್ದಿಯನ್ನೂ ಓದಿ | Bagheera Movie: ಶ್ರೀಮುರಳಿಯ ‘ಬಘೀರ’ ಸಿನಿಮಾದ ರುಧಿರ ಧಾರ ಹಾಡು ಕೇಳಿ! ಇಲ್ಲಿದೆ ವಿಡಿಯೊ

ಸೆಲೆಬ್ರೆಟಿ ಲುಕ್‌ಗಾಗಿ ಇವನ್ನು ಆಯ್ಕೆ ಮಾಡಿ

ಟ್ರೆಂಡಿಯಾಗಿರುವ ಡಾರ್ಕ್‌ ಬಣ್ಣದ್ದನ್ನು ಸೆಲೆಕ್ಟ್ ಮಾಡಿ.
ಕಾರ್ಸೆಟ್ ಡಿಸೈನ್‌ ಇರುವಂತದ್ದನ್ನು ಆಯ್ಕೆ ಮಾಡಿ.
ಸಾಫ್ಟ್ ಫ್ಯಾಬ್ರಿಕ್‌ನ ಕಾರ್ಸೆಟ್‌ ಗೌನ್‌ ಆಯ್ಕೆ ಉತ್ತಮ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)