Sunday, 15th December 2024

ಕೋವಿಡ್ ಸಮಸ್ಯೆಯಿಂದ ಕ್ರೀಡಾ ಚಟುವಟಿಕೆಗಳು ಕುಂಠಿತ

ಪಾವಗಡ: ಕಳೆದ ಎರಡು ವರ್ಷಗಳಿಂದ ಕೋವಿಡ್ ಸಮಸ್ಯೆ ಇಂದ ಕ್ರೀಡಾ ಚಟುವಟಿಕೆ ಗಳು ಕುಂಠಿತಗೊಂಡಿದವು ಎಂದು ವಿ.ಜಯರಾಮ್ ನಿವೃತ್ತಿ ಹಿರಿಯ ಸಹಾಯಕ ನಿರ್ದೇಶಕ ದೈಹಿಕ ಶಿಕ್ಷಣ ಇಲಾಖೆ ತಿಳಿಸಿದ್ದಾರೆ.

ಪಾವಗಡ ಪಟ್ಟಣದಲ್ಲಿ ಶುಕ್ರವಾರ ಶ್ರೀ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾವಗಡದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮೊದಲನೇ ತ್ರೈಮಾಸಿಕ ಕಾರ್ಯಾಗಾರ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿ. ಜಯರಾಮಪ್ಪ ನಿವೃತ್ತ ಸಹಾಯಕ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಬೆಂಗಳೂರು ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳು ಕರೋನ ಸಮಸ್ಯೆ ಯಿಂದ ಕುಂಠಿತಗೊಂಡಿತ್ತು.

ಮತ್ತೆ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳು ಉತ್ತಮರೀತಿಯಲ್ಲಿ ಕೈಗೊಳ್ಳಲು ದೈಹಿಕ ಶಿಕ್ಷಕರಿಗೆ ಸೂಚಿಸ ಲಾಗಿದೆ ಮತ್ತು ಮುಂದೆ ಬರುವ ತಿಂಗಳಲ್ಲಿ ಹೋಬಳಿ ಮಟ್ಟ.ತಾಲೂಕು ಮಟ್ಟದ ಕ್ರೀಡಾ ಚಟುವಟಿಕೆಗಳು ಇರುವುದರಿಂದ ಮಕ್ಕಳಿಗೆ ತಾಲೀಮು ನೀಡುವ ಉದ್ದೇಶದಿಂದ ಮತ್ತು ಯಾವ ರೀತಿಯಲ್ಲಿ ಕ್ರೀಡಾ ಚಟುವಟಿಕೆಗಳು ಸಿದ್ದಗೋಳಿಸಬೇಕು ಎಂಬುದಾಗಿ ಇಂದಿನ ಕಾರ್ಯಗಾರದಲ್ಲಿ ದೈಹಿಕ ಶಿಕ್ಷಕರಿಗೆ ತಿಳಿಸಲಾಗಿದೆ ಎಂದರು. ನಂತರ ಈ ಭಾಗದಲ್ಲಿ ದೈಹಿಕ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯ ಕ್ರಮದ ಹಮ್ಮಿಕೊಂಡಿರು ವುದು ವಿಶೇಷವಾಗಿದೆ ಎಂದರು.

ಇದೇ ವೇಳೆ ವಿ.ಜಯರಾಮ್ ನಿವೃತ್ತಿ ಸಹಾಯಕ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಬೆಂಗಳೂರು. ಈರಪ್ಪ ರೆಡ್ಡಿ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕರು ಬಾಪೂಜಿ ಕಾಲೇಜು ಪಾವಗಡ. ಹನುಮಂತರಾಯಪ್ಪ .ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ನಿಕಟಪೂರ್ವ ರಾಜ್ಯಾಧ್ಯಕ್ಷರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗುಂಡಾರ್ಲಹಳ್ಳಿ ..ಚಂದ್ರಶೇಖರ್ ರಾವ್ ನಿವೃತ್ತ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು.ಹಾಗೂ ಪ್ರಾಥಮಿಕ ಶಾಲ ದೈ. ಶಿ. ಸಂಘದ ಅಧ್ಯಕ್ಷರು .ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನೀಲಮ್ಮನಹಳ್ಳಿ . ಮಾರನಾಯಕ ನಿವೃತ್ತ ದೈ. ಶಿ. ಶಿಕ್ಷಕರು.ಜಿ.ಹೆಚ್.ಪಿ.ಎಸ್. ಮಂಗಳವಾಡ ಇವರಿಗೆ ಸನ್ಮಾನಿಸ ಲಾಯಿತು.

ಕಾರ್ಯಾಗಾರದಲ್ಲಿ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಚಿದಾನಂದ ಸ್ವಾಮಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ. ಪಿ. ಕರಿಯಣ್ಣ.ಕಾಯ೯ದಶಿ೯. ತಿಮ್ಮಾ ನಾಯ್ಕ .ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯ ದರ್ಶಿ ಲಕ್ಷ್ಮೀನಾರಾಯಣ ಹಾಗೂ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ಸಂಸ್ಥಾಪಕರಾದ ಎನ್.ಸಿ. ನಾಗಭೂಷಣರವರ ಮತ್ತು ತಾಲ್ಲೂಕಿನ ದೈ. ಶಿ. ಶಿಕ್ಷಕರು ಭಾಗವಹಿಸಿ ಕಾಯ೯ಕ್ರಮ ಯಶಸ್ವಿಯಾಗಿ ನಡೆಸಿ ಕೊಟ್ಟರು.