Friday, 13th December 2024

ಕೋವಿಡ್ ನಿಯಮ ಪಾಲಿಸದಿದ್ದರೆ ಕ್ರಿಮಿನಲ್ ಕೇಸು ದಾಖಲು: ತಹಸೀಲ್ದಾರ್ ಕೆ.ಆರ್.ನಾಗರಾಜ್

ಪಾವಗಡ: ಪಟ್ಟಣದಲ್ಲಿ ತಹಸೀಲ್ದಾರರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹೋಟೆಲ್ ಮಾಲೀಕರು, ದಾಬಾ ಮಾಲಿಕರು, ಮದ್ಯದ ಅಂಗಡಿ ಮಾಲೀಕ ರಿಗೆ ರಾಜ್ಯ ಸರ್ಕಾರದ ಜಾರಿ ತಂದಿರುವ ನಿಯಮಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದ ತಹಸೀಲ್ದಾರ್ ಕೆ.ಆರ್.ನಾಗರಾಜ್ ಮಾತನಾಡಿ, ಹೋಟೆಲ್, ದಾಭಾ, ಮದ್ಯ ಅಂಗಡಿಗಳು ಪಾರ್ಸಲ್ ವ್ಯವಸ್ಥೆ ಮಾಡಬೇಕು. ಮದುವೆ ಸಮಾರಂಭಗಳಿಗೆ ತಹಸೀಲ್ದಾರ್ ಅಪ್ಪಣೆ ಪಡೆಯಬೇಕು.

ಶನಿವಾರ ಹಾಗೂ ಭಾನುವಾರ ಹಾಲು, ಪೇಪರ್ ಹೊರತುಪಡಿಸಿ ಎಲ್ಲವೂ ಬಂದು ಮಾಡಬೇಕು. ಸರ್ಕಾರಿ ಆಸ್ಪತ್ರೆಗೆ ಕೋವಿಡ್ ಟೆಸ್ಟ್ ಮಾಡಿಸಿ ಕೊಂಡು ನಂತರ ಕೋವಿಡ್ ದ್ರುಡ ಪಟ್ಟಂತಹ ರೋಗಿಯು ಮನೆಗೆ ಹೋಗಲು ಪ್ರತ್ಯೇಕ ವಾಹನ ಒಂದೇ ಇದೇ ಎಂದು ತಾಲ್ಲೂಕು ವೈದ್ಯಧಿಕಾರಿ ತಿರುಪತೃಯ್ಯ ಸಭೆ ಯಲ್ಲಿ ತಿಳಿಸಿದ ಕಾರಣ, ಇದಕ್ಕೆ ಮಾದ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಗಡಿಭಾಗವಾದ ಕಾರಣ ಹೆಚ್ಚಿನ ಜನ ಚಿಕಿತ್ಸೆ ಗೆ ಬರುವುದರಿಂದ
ಕೋವಿಡ್ ದೃಢಪಟ್ಟ ವ್ಯಕ್ತಿ ನಂತರ ಬಸ್ ನಲ್ಲಿ ಅಥವಾ ಆಟೋ ಹಿಡಿದು ಹೋಗುವ ಪರಿಸ್ಥಿತಿ ಇದ್ದು ರೋಗಿಯಿಂದ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಇದೆ. ಈ ಭಾಗಕ್ಕೆ ಮತ್ತೊಂದು ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ತಿಳಿಸಿದರು.

ತಾಲ್ಲೂಕು ಎಲ್ಲಾ ನಾಗರಿಕರು ಸಹಕಾರಿ ಸಬೇಕು ಕಾನೂನು ಉಲ್ಲಂಘನೆ ಮಾಡಿದವರಿಗೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದರು.

ಗಡಿಭಾಗದಲ್ಲಿ ಮದ್ಯಪಾನ ಮಾಡಲು ಆಂದ್ರಪ್ರದೇಶದ ಜನರು ಹೆಚ್ಚಾಗಿ ಬರುತ್ತಿದ್ದಾರೆ ಇದರ ಬಗ್ಗೆ ಅಬಕಾರಿ ಇಲಾಖೆಯವರು ಇಂತಹಾ ಪ್ರದೇಶ ಗಳಲ್ಲಿ ನಿಗಾ ವಹಿಸಬೇಕು ಎಂದು ತಹಸೀಲ್ದಾರ್ ಸಭೆಯಲ್ಲಿ ತಿಳಿಸಿದರು.

ಈ ವೇಳೆ ಗ್ರೇಡ್ 2 ತಹಸೀಲ್ದಾರ್ ನರಸಿಂಹಮೂರ್ತಿ. ಪುರಸಭಾ ಮುಖ್ಯಾಧಿಕಾರಿ ಅರ್ಚನಾ. ಅಬಕಾರಿ ಪಿಎಸ್ಐ ಎ.ಶಂಕರ್.ತಾಲ್ಲೂಕು ಪಂಚಾಯತಿ ಅಧಿಕಾರಿಗಳು, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲಾ ಹೋಟೆಲ್ ಮಾಲೀಕರು, ದಾಬಾ ಮಾಲೀಕರು, ಬಾರ್ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.