Wednesday, 9th October 2024

ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಸಸ್ಯಾಹಾರಿ ಮೊಸಳೆ ಇನ್ನಿಲ್ಲ

ಕಾಸರಗೋಡು: ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ ʻಬಬಿಯಾʼ ಮೊಸಳೆ ಕೊನೆಯುಸಿರೆಳೆದಿದೆ.

ದೇವಸ್ಥಾನಕ್ಕೆ ಬಂದ ಭಕ್ತರಿಗೆ ಬಬಿಯಾ ಮೊಸಳೆ ಯಾವತ್ತೂ ತೊಂದರೆ ನೀಡಿಲ್ಲ. 75 ವರ್ಷದ ಬಬಿಯಾ ಈ ಕೊಳದಲ್ಲಿ ವಾಸಿಸುತ್ತಿದೆ. ಮೊಸಳೆಯು ಕೊಳದಲ್ಲಿರುವ ಮೀನುಗಳನ್ನು ಸಹ ತಿನ್ನುತ್ತಿರಲಿಲ್ಲ. ಸಂಪೂರ್ಣ ಸಸ್ಯಾಹಾರಿಯಾಗಿರುವ ಬಬಿಯಾಗೆ ಅರ್ಚಕರು ದೇವರಿಗೆ ಅರ್ಪಿಸಿದ ನೈವೇದ್ಯ ನೀಡುತ್ತಾರೆ. ಬಬಿಯಾ ಅದನ್ನೇ ತಿಂದು ಜೀವಿಸುತ್ತಿತ್ತು. ಹೀಗಾಗಿ ಇದು ಸಸ್ಯಾಹಾರಿ ಮೊಸಳೆ ಎಂದೇ ಪ್ರಖ್ಯಾತ.

ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ಮೊಸಳೆಯ ದರ್ಶನ ಪಡೆದೇ ಹೋಗುತ್ತಿದ್ದರು. ಇದರ ದರ್ಶನವನ್ನು ಭಕ್ತರು ಮಂಗಳಕರವೆಂದು ಪರಿಗಣಿಸುತ್ತಾರೆ.