Sunday, 17th November 2024

Daali Dhananjaya: ಡಾಲಿ ಮೀಟ್ಸ್‌ ʼಧನಂಜಯʼ; ತಮ್ಮದೇ ಹೆಸರಿನ ಆನೆ ಕಂಡು ನಟ ಫುಲ್‌ ಖುಷ್

Daali Dhananjaya: ಡಾಲಿ ಮೀಟ್ಸ್‌ ʼಧನಂಜಯʼ; ತಮ್ಮದೇ ಹೆಸರಿನ ಆನೆ ಕಂಡು ನಟ ಫುಲ್‌ ಖುಷ್

ಮೈಸೂರು: ನಟ ಡಾಲಿ ಧನಂಜಯ ಮೈಸೂರಿನಲ್ಲಿ ತಮ್ಮ ಮುಂದಿನ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಇದೇ ಸಮಯದಲ್ಲಿ ದಸರಾ ಸಂಭ್ರಮದಲ್ಲಿ ಭಾಗಿಯಾಗಿರುವ ಮಾವುತರಿಗೆ ಲಿಡ್ಕರ್ ಚಪ್ಪಲಿಗಳನ್ನು ನೀಡಿದರು. ಧನಂಜಯ ಅವರು (Daali Dhananjaya) ಲಿಡ್ಕರ್‌ನ ರಾಯಭಾರಿಯಾಗಿರುವ ಕಾರಣದಿಂದ ಈ ಬಾರಿ ಮಾವುತರಿಗೆ ಚಪ್ಪಲಿ ಉಡುಗೊರೆಯಾಗಿ ನೀಡಿದ್ದಾರೆ.

ಈ ವೇಳೆ ನಟ ಧನಂಜಯ ಅವರು ಆನೆಗಳ ಬಳಿ ಹೋಗಿ ಅವುಗಳ ಬಗ್ಗೆ ಕೆಲ ಕಾಲ ಮಾವುತರು ಹಾಗೂ ಅರಣ್ಯ ಅಧಿಕಾರಿಗಳ ಬಳಿ ಕುತೂಹಲಕಾರಿ ವಿಚಾರಗಳನ್ನು ಕೇಳಿ ತಿಳಿದುಕೊಂಡರು. ಈ ಸಮಯದಲ್ಲಿ ತಮ್ಮದೇ ಹೆಸರಿನ ಆನೆಯನ್ನು ಕಂಡು ಧನಂಜಯ ಖುಷಿ ವ್ಯಕ್ತ ಪಡಿಸಿದ್ದಾರೆ. ಧನಂಜಯ ಅರಸೀಕೆರೆ ಮೂಲದವರಾಗಿದ್ರು ಕೂಡ ಮೈಸೂರಿನ ನಂಟನ್ನು ಹೆಚ್ಚಾಗಿ ಬೆಳಸಿಕೊಂಡಿದ್ದಾರೆ

Daali Dhananjaya

ಈ ಸುದ್ದಿಯನ್ನೂ ಓದಿ | Madhyantara Short Movie: ಮನಕ್ಕೆ ಮುದನೀಡುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಿರುಚಿತ್ರ ‘ಮಧ್ಯಂತರ’

ಇದೇ ಮೊದಲ ಬಾರಿಗೆ ಡಾ.ಬಾಬು ಜಗಜೀವನ ರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್‌) ರಾಯಭಾರಿಯಾಗಿ ನಟ ಧನಂಜಯ ಅವರನ್ನು ರಾಜ್ಯ ಸರ್ಕಾರ 2023ರ ಡಿಸೆಂಬರ್‌ನಲ್ಲಿ ಆಯ್ಕೆ ಮಾಡಿತ್ತು. ಚಿತ್ರರಂಗದಲ್ಲಿ ನಟನಾಗಿ ನಿರ್ಮಾಪಕನಾಗಿ ಡಾಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ನಟನೆ, ನಿರ್ಮಾಣದ ಜೊತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇನ್ನು ವಿಶೇಷ ಎಂದರೆ ಈ ರಾಯಭಾರಿಯಾಗಲು ಧನಂಜಯ ಅವರು ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದಿಲ್ಲ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಡಾಲಿ ಧನಂಜಯ್ ಅವರು ಸಾಮಾಜಿಕ ಕಳಕಳಿ ಉಳ್ಳ ನಟ. ಡಾ.ಬಾಬು ಜಗಜೀವನ ರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್‌) ಉತ್ಪನ್ನಗಳಿಗೆ ರಾಯಭಾರಿಯಾಗಿದ್ದು ಅರ್ಥಪೂರ್ಣವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು. ಲಿಡ್ಕರ್ ಉತ್ಪನ್ನಗಳಿಗೆ ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ಪ್ರದರ್ಶನ ರಾಯಭಾರಿಯಾಗಿ ನೇಮಕ ಮಾಡಿದ್ದು, ಉಚಿತವಾಗಿ ಈ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಉದಯೋನ್ಮುಖ ನಟ ಹಾಗೂ ಸಾಮಾಜಿಕ ಕಳಕಳಿ ಉಳ್ಳವರು. ಅವರನ್ನು ರಾಯಭಾರಿಯಾಗಿ ಮಾಡಿರುವುದು ಅರ್ಥಪೂರ್ಣ ವಾಗಿದೆ. ಇದರಿಂದ ಲಿಡ್ಕರ್ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುವುದಲ್ಲದೆ ಚರ್ಮ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಸಿಎಂ ಹೇಳಿದ್ದರು.